🚩 ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರು��� ಪರವಾನಗಿ ಭೂಮಾಪಕರ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಹಾಗೂ ರೈತ ಬಂಧುಗಳು ಬೆಂಬಲ ಸೂಚಿಸಿದರು. ಖಾಯಂ ನೇಮಕಾತಿ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ✊
#LSStrike #FreedomPark #EqualPayForEqualWork #LicensedSurveyors
I Am a land surveyor aspirant sir..🙏🏻 @DrParameshwara
ಸರ್, ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಹೋರಾಟ ಮಾಡುತ್ತಿರುವುದಕ್ಕೆ ನಿಮಗ��� ಧನ್ಯವಾದಗಳು. ನನಗೆ 34 ವರ್ಷ ವಯಸ್ಸು. ನಮ್ಮ ತಂದೆಯವರಿಗೆ ಲಿವರ್ ಕ್ಯಾನ್ಸರ್ ಇದೆ ಸರ್. ಡಾಕ್ಟರ್ ಇನ್ನು ಕೇವಲ 4 ತಿಂಗಳು ಮಾತ್ರ ಸಮಯ ಇದೆ ಎಂದು ಹೇಳಿದ್ದಾರೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ, ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಾ, ಅವರನ್ನು ಇಂತಹ ಕಠಿಣ ಪರಿಸ್ಥಿತಿಯಲ್ಲೂ ಬಿಟ್ಟು ನಾನು ಧಾರವಾಡದಲ್ಲಿ ಓದುತ್ತಿದ್ದೇನೆ ಸರ್. ಒಂದು ಗವರ್ನಮೆಂಟ್ ಜಾಬ್ ಸಿಕ್ಕರೆ ನಮ್ಮ ಕುಟುಂಬಕ್ಕೆ ಆಸರೆಯಾಗುತ್ತದೆ ಎಂಬ ಆಸೆಯಿಂದ ಹೀಗೆ ಮಾಡಿದೆ.ನಾನು ಮೊದಲು ಕೆಲಸ ಮಾಡುತ್ತಿದ್ದೆ ಸರ್. ಆದರೆ ನೋಟಿಫಿಕೇಶನ್ ಆದ ಮೇಲೆ, ಕಳೆದ 2.5 ವರ್ಷಗಳಿಂದ ನಾನು ಲ್ಯಾಂಡ್ ಸರ್ವೇಯರ್ ಎಕ್ಸಾಮ್ಗಾಗಿಯೇ ಸಿದ್ಧತೆ ನಡೆಸುತ್ತಿದ್ದೇನೆ ಸರ್. ಆದರೆ ಇವಾಗ ಅದನ್ನು ದಿಢೀರನೆ ರದ್ದು ಮಾಡಿ, ಎಲಿಜಿಬಿಲಿಟಿಯನ್ನೂ ತೆಗೆದು ನಮಗೆ ಮೋಸ ಮಾಡಿಬಿಟ್ಟರು ಸರ���. ಇವಾಗ ಬೇರೆ ಎಕ್ಸಾಮ್ ಓದಬೇಕು ಅಂದರೂ ಆಗುತ್ತಿಲ್ಲ ಸರ್. ಸಿಲಬಸ್ ಬದಲಾಗಿರುವುದಕ್ಕೆ ತುಂಬಾ ಪ್ರಾಬ್ಲಮ್ ಆಗುತ್ತಿದೆ ಸರ್.ಧಾರವಾಡದಲ್ಲಿ ನೀವು ಪ್ರತಿಭಟನೆ ಮಾಡಿದಾಗ, ಪ್ರತಿ ಬಾರಿಯೂ ಊಟ ನೀರು ಬಿಟ್ಟು ಸುಡುವ ಬಿಸಿಲಿನಲ್ಲಿ ನಿಮ್ಮ ಜೊತೆ ಓಡಾಡಿದ್ದೇವೆ ಸರ್, ಮುಂದೆ ಒಂದು ದಿನ ಕೆಲಸ ಸಿಗುತ್ತದೆ ಎಂಬ ಆಸೆಯಿಂದ. ಆದರೆ ಈ ರಾಜಕಾರಣಿಗಳ ದುರಾಸೆ ಮತ್ತು ಅಧಿಕಾರಿಗಳ ಬೇಜವಾಬ್ದಾರಿಯಿಂದ ಇವತ್ತು ನನ್ನಂತಹ ಎಷ್ಟೋ ವಿದ್ಯಾರ್ಥಿಗಳ ಆಸೆ ನುಚ್ಚುನೂರಾಯಿತು ಸರ್. ಇದು ನನ್ನ��ೊಂದು ಪ್ರಾಬ್ಲಮ್, ಹೀಗೆ ಹಲವಾರು ಅಭ್ಯರ್ಥಿಗಳಿಗೆ ಏನೇನೋ ಸಮಸ್ಯೆಗಳಿವೆ ಸರ್.ನಮ್ಮನ್ನು ಈ ರೀತಿ ಮರುಗಿಸಿದ ಪಾಪ ಈ ರಾಜಕಾರಣಿಗಳನ್ನು ಮತ್ತು ಅಧಿಕಾರಿಗಳನ್ನು ಸುಮ್ಮನೆ ಬಿಡುವುದಿಲ್ಲ ಸರ್, ಕರ್ಮ ಅವರಿಗೆ ಬಂದೇ ಬರುತ್ತದೆ ಸರ್. ಇನ್ನು ಸಾಕು ಸರ್, ನಾವು ಈ ಫೀಲ್ಡ್ಗೆ ಬಂದು ದೊಡ್ಡ ತಪ್ಪು ಮಾಡಿಬಿಟ್ಟೆವು. ಈ ಗವರ್ನಮೆಂಟ್ ನಂಬಿಕೊಂಡು ಮೋಸ ಹೋದೆವು ಸರ್. ಕೆಪಿಎಸ್ಸಿ ಮೆಂಬರ್ಸ್ ಇದ್ದಾರಲ್ಲ ಸರ್, ಅವರ ಮಕ್ಕಳಿಗೆ ಅವರು ಮಾಡಿದ ಪಾಪ ತಟ್ಟೇ ತಟ್ಟುತ್ತದೆ ಸರ್. ಬಡವರನ್ನ�� ಮೋಸ ಮಾಡಿ ಎಷ್ಟು ದಿನ ಆರಾಮವಾಗಿ ಇರುತ್ತಾರೆ ಸರ್ ಅವರು? ಆದರೂ ದೇವರು ಇದ್ದರೆ ಅವರನ್ನು ನೋಡಿಕೊಳ್ಳಲಿ ಸರ್. ಇಂತಹ ಸಿಸ್ಟಮ್ ವಿರುದ್ಧ ನೀವು ಮಾಡುತ್ತಿರುವ ಹೋರಾಟಕ್ಕೆ ನಿಮಗೆ ಯಾವಾಗಲೂ ಚಿರಋಣಿಯಾಗಿ ಇರುತ್ತೇವೆ ಸರ್. ನಮಗೆ ಹೆಲ್ಪ್ ಆಗದಿದ್ದರೂ ಬೇರೆ ಯಾರಿಗಾದರೂ ಹೆಲ್ಪ್ ಆಗುತ್ತದೆ. ಧನ್ಯವಾದಗಳು ಸರ್...
@eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
ಮಾನ್ಯ @DKShivakumar ಹಾಗೂ @DrParameshwara ಹಾಗೂ @secretarykpsc (KPSC) ಅವರ ಗಮನಕ್ಕೆ,
ದಿನಾಂಕ 29-02-2024 ರಂದು ಪ್ರಕಟಗೊಂಡ ಲ್ಯಾಂಡ್ ಸರ್ವೇಯರ್ ಹುದ್ದೆಗಳ ನೇಮಕಾತಿ ಅಧಿಸೂಚನೆಯಲ್ಲಿ PUC ವಿಜ್ಞಾನ ವಿಭಾಗದಲ್ಲಿ ಗಣಿತ ವಿಷಯದಲ್ಲಿ 60% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಅ��್ಯರ್ಥಿಗಳನ್ನು ಅರ್ಹರೆಂದು ಪರಿಗಣಿಸಲಾಗಿತ್ತು. ಈ ಅರ್ಹತಾ ಮಾನದಂಡವನ್ನು ನಂಬಿ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಕಳೆದ ಎರಡು ವರ್ಷಗಳಿಂದ ಲ್ಯಾಂಡ್ ಸರ್ವೇಯರ್ ಪರೀಕ್ಷೆಗೆ ಮಾತ್ರ ಸಿದ್ಧತೆ ನಡೆಸುತ್ತಾ ತಮ್ಮ ಸಮಯ, ಶ್ರಮ ಹಾಗೂ ಆರ್ಥಿಕ ಸಂಪನ್ಮೂಲಗಳನ್ನು ಹೂಡಿಕೆ ಮಾಡಿದ್ದಾರೆ.
ಆದರೆ 08-06-2026 ರಂದು ಪ್ರಕಟಗೊಂಡ ಕರಡು ಅಧಿಸೂಚನೆಯಲ್ಲಿ ಈ ಅರ್ಹತಾ ಮಾನದಂಡವನ್ನು ತೆಗೆದುಹಾಕಿರುವುದು ವಿದ್ಯಾರ್ಥಿಗಳಿಗೆ ತೀವ್ರ ನಿರಾಸೆ ಹಾಗೂ ಅನ್ಯಾಯವನ್ನುಂಟು ಮಾಡಿದೆ. ಹಿಂದಿನ ಅಧಿಸೂಚನೆಯನ್ನು ಆಧರಿಸಿ ಸಿದ್ಧತೆ ನಡೆಸಿದ ಅನೇಕ ಅಭ್ಯರ್ಥಿಗಳ ಎರಡು ವರ್ಷಗಳ ಪರಿಶ್ರಮ ವ್ಯರ್ಥವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ನ್ಯಾಯಸಮ್ಮತ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಒಂದು ನೇಮಕಾತಿಗೆ ಮಾತ್ರ ಹಿಂದಿನಂತೆ @PUC ವಿಜ್ಞಾನ ವಿಭಾಗದ ಅಭ್ಯರ್ಥಿಗಳಿಗೆ ಅರ್ಹತೆ ನೀಡಬೇಕು ಎಂದು ವಿನಂತಿಸುತ್ತೇವೆ.
ಈ ಬಾರಿ ಮಾತ್ರ ವಿಶೇಷ ಸಡಿಲಿಕೆ (One-Time Concession) ನೀಡಿ, ಈಗಾಗಲೇ ಅಧಿಸೂಚನೆಯ ಆಧಾರದ ಮೇಲೆ ಸಿದ್ಧತೆ ನಡೆಸ���ರುವ ಅಭ್ಯರ್ಥಿಗಳ ಭವಿಷ್ಯವನ್ನು ಕಾಪಾಡುವಂತೆ ಕರ್ನಾಟಕ ಸರ್ಕಾರ ಹಾಗೂ KPSC ಯನ್ನು ಆಗ್ರಹಿಸುತ್ತೇವೆ.
@Nishkama_Karma1 @Defender_007_ @Sandeep98886864 @PriyankKharge @CMofKarnataka
@justicelandsarveyor