ಜಿಲ್ಲಾ ಮತ್ತು ತಾಲೂಕು ಸ್ವೀಪ್ ಸಮಿತಿ ಹಾವೇರಿ .
ಎಲ್ಲರೂ ತಪ್ಪದೇ ಮತದಾನ ಮಾಡಿ.
ಮಕ್ಕಳಿಂದ ಕಡ್ಡಾಯ ಮತದಾನ ಕುರಿತು ಚಿತ್ರಕಲಾ ಸ್ಪರ್ಧೆ ಬಿಡಿಸುವ ಮೂಲಕ ಮತದಾನ ಜಾಗೃತಿ .
ತಾಲೂಕ ಪಂಚಾಯತ್ ಹಾವೇರಿ
"ವಲಸೆ ಯಾಕ್ರೀ ನಿಮ್ಮೂರಲ್ಲಿಯೇ ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ" ಅಭಿಯಾನದಡಿ ಉದ್ಯೋಗ ಒದಗಿಸಿ ಕೂಲಿಕಾರರಿಗೆ ಯೋಜನೆಯ ಕುರಿತು ಬಂದೊದಗುವ ಸಮಸ್ಯೆಗಳಿಗೆ ಹಾಗೂ ಗೊಂದಲಗಳಿಗೆ ಪರಿಹಾರ ನೀಡಲು ರಾಜ್ಯ ಮಟ್ಟದಲ್ಲಿ ಪ್ರಾರಂಭಿಸಿರುವ ಉಚಿತ ಸಹಾಯವಾಣಿ ಸಂಖ್ಯೆಯ ಮಾಹಿತಿ ನೀಡಲಾಯಿತು.
ಹಾವೇರಿ ಜಿಲ್ಲೆ /ತಾಲೂಕು ನೆಲೋಗಲ್ ಗ್ರಾಮ ಪಂಚಾಯತ
*ಲೋಕಸಭಾ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಮತದಾನವಾಗಬೇಕು; ಶ್ರೀ ಭರತ್ ಹೆಗಡೆ *
ಲೋಕಸಭಾ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಮತದಾನವಾಗಬೇಕು ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಭರತ್ ಹೆಗಡೆ ಹೇಳಿದರು. ಹಾವೇರಿ ತಾಲೂಕಿನ ಎಲ್ಲ ಸ್ಥಳಗಳಲ್ಲಿ ಅಂಗವಿಕಲರೊಂದಿಗೆ ಬೈಕ್ ಜಾತ ನಡೆಸಿದರು
“ಸಾಂಪ್ರದಾಯಿಕ ಹಿಪ್ಪುನೇರಳೆ ಪದ್ಧತಿಯ ಬದಲಾಗಿ ನೂತನ ತಾಂತ್ರಿಕತೆಯನ್ನು ಬಳಸಿ ರೇಷ್ಮೆ ಕೃಷಿ ಮಾಡಲು ರೇಷ್ಮೆ ಇಲಾಖೆಯವರು ಮಾಹಿತಿ ನೀಡಿದರು. ನರೇಗಾ ಯೋಜನೆಯಡಿ ಆರ್ಥಿಕ ನೆರವು ದೊರೆಯುವುದನ್ನು ತಿಳಿದು ಬೆಳೆ ವಿಸ್ತರಣೆ ಮಾಡಿಕೊಂಡಿದ್ದೇವೆ. ಈಗ ಉತ್ತಮ ಆದಾಯ ಗಳಿಸುತ್ತಿದ್ದೇವೆ” ಎನ್ನುತ್ತಾರೆ ಕಾಂತಮ್ಮ ಮತ್ತು ಕುಟುಂಬ ಸದಸ್ಯರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೆಟ್ಟಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೆಡ್ಡಿಹಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಕಾಂತಮ್ಮರವರು ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹಿಪ್ಪುನೇರಳೆ ಬೆಳೆ ವಿಸ್ತರಣೆ ಮಾಡಿಕೊಂಡಿದ್ದಾರೆ.
#Sericulture#Devanahalli#MGNREGS
ಉಡುಪಿ ಜಿಲ್ಲೆಯ ಕುಂದಾಪು�� ತಾಲ್ಲೂಕಿನ ಹೆಮ್ಮಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೀರುಗಾಲುವೆ ಹೂಳೆತ್ತುವ ಕಾಮಗಾರಿ ಅನುಷ್ಠಾನ ಮಾಡಲಾಗಿದೆ.
ಬಹುತೇಕ ಮಹಿಳಾ ಕೂಲಿಕಾರರೇ ಭಾಗವಹಿಸಿರುವ ಈ ಕಾಮಗಾರಿಯಿಂದ ಸುತ್ತಮುತ್ತಲಿನ ಕೃಷಿಕರಿಗೆ ಬಹಳಷ್ಟು ಅನುಕೂಲವಾಗಿದೆ.
#Udupi #RuralWomen
ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲ್ಲೂಕಿನ ಪಡು ಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 10ನೇ ತೋಕೂರು ಗ್ರಾಮದ ನಿವಾಸಿ ಶ್ರೀಮತಿ ಗುಲಾಬಿರವರು ತಮ್ಮ ಜಮೀನಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಸೋಕ್ ಪಿಟ್ ನಿರ್ಮಿಸಿಕೊಂಡಿದ್ದಾರೆ.
@MGNREGADAKSHIN1
Koosina Mane supports rural mothers
Child care centres have been established to take care of #MGNREGS labourers' 06 months to 3 year old children, thus helping the mothers to earn without worrying about the kids.
#KoosinaMane#WomensDay#InternationalWomensDay@readingkafka
ಸಂಭ್ರಮದ #ನರೇಗಾ ದಿನಾಚರಣೆ
ಕೂಲಿಕಾರರೊಂದಿಗೆ ಸಂವಾದ, ವಿದ್ಯಾರ್ಥಿಗಳಿಗೆ ಚಿ���್ರಕಲಾ ಸ್ಪರ್ಧೆ, ಯೋಜನೆಯಡಿ ನೂರು ದಿನ ಪೂರೈಸಿದ ಕೂಲಿಕಾರರಿಗೆ ಸನ್ಮಾನ ಮುಂತಾದ ವಿವಿಧ ಕಾರ್ಯಕ್ರಮಗಳ ಮೂಲಕ #ನರೇಗಾ ದಿನಾಚರಣೆಯನ್ನು ಗ್ರಾಮೀಣ ಕರ್ನಾಟಕದಾದ್ಯಂತ ಆಚರಿಸಲಾಯಿತು.
ವಿವಿಧ ಜಿಲ್ಲೆಗಳಲ್ಲಿ #ನರೇಗಾ_ದಿವಸ ಆಚರಣೆಯ ಒಂದು ನೋಟ ಇಲ್ಲಿದೆ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಬಿಂತ್ರವಳ್ಳಿ ಗ��ರಾಮ ಪಂಚಾಯಿತಿಯ ತಲಮಕ್ಕಿ ಗ್ರಾಮದ ನಿವಾಸಿಯಾದ ಶ್ರೀಮತಿ ಜಯಂತಿಯವರು #ಮಹಾತ್ಮಗಾಂಧಿ_ನರೇಗಾ ಯೋಜನೆಯಡಿ ಕೋಳಿ ಶೆಡ್ ನಿರ್ಮಿಸಿಕೊಂಡಿದ್ದಾರೆ.
ಪ್ರಸ್ತುತ ಒಂದು ನೂರು ಕೋಳಿಗಳನ್ನು ಸಾಕುತ್ತಿರುವ ಜಯಂತಿಯವರು ಉತ್ತಮ ಆದಾಯ ಗಳಿಸುತ್ತಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಗ್ರಾಮೀಣ ಭಾಗದ ರೈತರಿಗೆ ತಾವು ಬೆಳೆದ ಬೆಳೆಗಳಿಗೆ ಸ್ಥಳೀಯ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಸಂತೆಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಸ್ಥಳ: ಕೊಪ್ಪಳ ಜಿಲ್ಲೆ, ಕಾರಟಗಿ ತಾಲ್ಲೂಕು. ಸಿದ್ಧಾಪುರ ಗ್ರಾಮ ಪಂಚಾಯಿತಿ.
@ZpKoppal@tpkaratagi
ದಾವಣಗೆರೆ ಜಿಲ್ಲೆಯ ಜಗಳೂರು ತಾ. ದಿದ್ದಗಿ ಗ್ರಾ.ಪಂ. ವ್ಯಾಪ್ತಿಯ ಗುಡ್ಡಗಾಡು ಪ್ರದೇಶಗಳಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನೈಸರ್ಗಿಕ ಸಂಪನ್ಮೂಲ ನಿರ್ವಹಣಾ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ.
ಕಂದಕಗಳನ್ನು ನಿರ್ಮಿಸುವುದರಿಂದ ಮಳೆನೀರು ಇಂಗಿ, ಮಣ್ಣಿನ ತೇವಾಂಶ ಸಂರಕ್ಷಣೆಯಾಗುವುದಲ್ಲದೆ, ಅಂತರ್ಜಲ ಮಟ್ಟದಲ್ಲಿಯೂ ಹೆಚ್ಚಳವಾಗುತ್ತದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಶಿವಮ್ಮರವರು ಮಹಾತ್ಮಾ ಗಾಂಧ�� ನರೇಗಾ ಯೋಜನೆಯಡಿ ಕುರಿ ಶೆಡ್ ನಿರ್ಮಿಸಿಕೊಂಡಿದ್ದಾರೆ.
ಕುರಿಗಳ ರಕ್ಷಣೆ ಮತ್ತು ಪಾಲನೆಯ ಜೊತೆಗೆ ಸ್ವಚ್ಛತೆ ಕಾಪಾಡಲೂ ಇದು ಸಹಕಾರಿಯಾಗಿದೆ ಎಂದು ಅವರು ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾರೆ.
ಸಂವಿಧಾನ ಜಾಗೃತಿ ಜಾಥಾ
ಜಿಲ್ಲೆ: ಹಾವೇರಿ ಜಿಲ್ಲೆ
ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಮಾಜವಾದ, ಜಾತ್ಯತೀತ ಚಿಂತನೆಗಳನ್ನು ಒಳಗೊಂಡಿರುವ, ದೇಶದ ಪ್ರತಿ ಪ್ರಜೆಗೂ ಘನತೆಯ ಬದುಕಿನ ಖಾತ್ರಿ ಒದಗಿಸಿರುವ ನಮ್ಮೆಲ್ಲರ ಹೆಮ್ಮೆಯ ಸಂವಿಧಾನವನ್ನು ಅರಿಯೋಣ. ಸಂವಿಧಾನ ಉಳಿಸುವ ಕಾರ್ಯಕ್ಕೆ ಕೈಜೋಡಿಸೋಣ.
"ಸಂವಿಧಾನವೇ ಬೆಳಕು"
#Constitution
#Constitution_of_India
#ConstitutionOfIndia
#OurConstitutionAt75
#ಸಂವಿಧಾನ_ಜಾಗೃತಿ_ಜಾಥಾ
#ConstitutionAwarenessKarnataka
#ConstitutionConventionKarnataka2024