The Karnataka Public Service Commission (KPSC) has recently been embroiled in a series of recruitment scams, severely damaging the trust of lakhs of job aspirants across Karnataka. The controversies began with the recruitment of 400 Veterinary Officer posts, where allegations of OMR answer sheet tampering, question paper leaks, and bribes ranging from ₹40 lakh to ₹80 lakh surfaced. The selection list was withheld, FIRs were registered, the case was handed over to the CID, and the KPSC Chairman was suspended.
Another major controversy emerged in the recruitment of Assistant Executive Engineers (AEE) in the Rural Drinking Water Supply and Sanitation Department. Investigations by a KPSC sub-committee and the FSL confirmed that at least 10 selected candidates had tampered with their OMR answer sheets. The committee recommended cancelling their appointments and initiating a CID probe into the larger examination fraud.
The commission’s image has been further tarnished by cash-for-jobs rackets. In a recent PDO recruitment scam, fraudsters allegedly cheated a senior corporate manager in Bengaluru of ₹26 lakh, promising a government job without the examination through political and bureaucratic influence. The repeated exposure of such cases points to serious systemic failures in Karnataka’s recruitment process.
ಕರ್ನಾಟಕ ಲೋಕಸೇವಾ ಆಯೋಗ (KPSC) ಇತ್ತೀಚಿನ ದಿನಗಳಲ್ಲಿ ಸಾಲು ಸಾಲು ನೇಮಕಾತಿ ಹಗರಣಗಳಲ್ಲಿ ಸಿಲುಕಿದ್ದು, ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ನಂಬಿಕೆಗೆ ತೀವ್ರ ಧಕ್ಕೆ ಉಂಟುಮಾಡಿದೆ. 400 ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ OMR ಉತ್ತರ ಪತ್ರಿಕೆ ತಿದ್ದುಪಡಿ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ₹40 ಲಕ್ಷದಿಂದ ₹80 ಲಕ್ಷದವರೆಗೆ ಲಂಚದ ಆರೋಪಗಳು ಕೇಳಿಬಂದವು. ಆಯ್ಕೆಪಟ್ಟಿಯನ್ನು ತಡೆಹಿಡಿದು, ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದ್ದು, KPSC ಅಧ್ಯಕ್ಷರನ್ನು ಅಮಾನತುಗೊಳಿಸಲಾಯಿತು.
ಇದರ ಬೆನ್ನಲ್ಲೇ ಸಹಾಯಕ ಕಾರ್ಯಪಾಲಕ ಅಭಿಯಂತರರ (AEE) ನೇಮಕಾತಿಯಲ್ಲೂ ಅಕ್ರಮ ಬೆಳಕಿಗೆ ಬಂತು. KPSC ಉಪಸಮಿತಿ ಮತ್ತು FSL ತನಿಖೆಯಲ್ಲಿ ಕನಿಷ್ಠ 10 ಅಭ್ಯರ್ಥಿಗಳು ತಮ್ಮ OMR ಉತ್ತರ ಪತ್ರಿಕೆಗಳನ್ನು ಅಕ್ರಮವಾಗಿ ತಿದ್ದಿರುವುದು ದೃಢಪಟ್ಟಿತು. ಅವರ ನೇಮಕಾತಿ ರದ್ದುಗೊಳಿಸಿ, ಪ್ರಕರಣದ ಕುರಿತು ಸಿಐಡಿ ತನಿಖೆ ನಡೆಸುವಂತೆ ಶಿಫಾರಸು ಮಾಡಲಾಯಿತು.
ಇದರ ಜೊತೆಗೆ, KPSC ಹೆಸರಿನಲ್ಲಿ ನಡೆಯುತ್ತಿರುವ ಉದ್ಯೋಗದ ಹೆಸರಿನ ವಂಚನೆ ಪ್ರಕರಣಗಳೂ ಹೆಚ್ಚುತ್ತಿವೆ. ಇತ್ತೀಚಿನ PDO ನೇಮಕಾತಿ ವಂಚನೆಯಲ್ಲಿ, ಪರೀಕ್ಷೆಯಿಲ್ಲದೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಬೆಂಗಳೂರಿನ ಖಾಸಗಿ ಕಂಪನಿಯ ಹಿರಿಯ ವ್ಯವಸ್ಥಾಪಕರಿಂದ ₹26 ಲಕ್ಷ ವಂಚಿಸಲಾಗಿದೆ. ಒಂದಾದ ಮೇಲೊಂದು ಬೆಳಕಿಗೆ ಬರುತ್ತಿರುವ ಈ ಪ್ರಕರಣಗಳು ರಾಜ್ಯದ ನೇಮಕಾತಿ ವ್ಯವಸ್ಥೆಯಲ್ಲಿರುವ ಗಂಭೀರ ವ್ಯವಸ್ಥಾತ್ಮಕ ದೌರ್ಬಲ್ಯವನ್ನು ಬಹಿರಂಗಪಡಿಸುತ್ತಿವೆ.
#CivilPoliceRecruitment:
ಆಗಸ್ಟ್ 2 ರಂದು ನಡೆಯುವ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಗಳ ನೇಮಕಾತಿ ಪರೀಕ್ಷೆಯ ಪೂರ್ವ ತಯಾರಿಯ ಭಾಗವಾಗಿ #KEA ವತಿಯಿಂದ ಇಂದು ಬೆಂಗಳೂರು ನಗರದ ಪರೀಕ್ಷಾ ಕೇಂದ್ರಗಳ ಮುಖ್ಯ ಮೇಲ್ವಿಚಾರಕರ ಸಭೆ ನಡೆಸಿ, ತರಬೇತಿ ನೀಡಲಾಯಿತು.
#KEA ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಪ್ರಾತ್ಯಕ್ಷಿಕೆ ಮೂಲಕ ಪರೀಕ್ಷಾ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಕಟ್ಟುನಿಟ್ಟಿನ ನಿಗಾ ವಹಿಸುವ ಹಾಗೂ ಅಧಿಕಾರಿಗಳ ಜವಾಬ್ದಾರಿ ಬಗ್ಗೆಯೂ ವಿವರಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ ನಾಯಕ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಫಾಲಾಕ್ಷ ಮತ್ತು ಮನೋಜ್ ಸೇರಿದಂತೆ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಪೊಲೀಸ್ ಅಧಿಕಾರಿಗಳೂ ಇಂದಿನ ಸಭೆಯಲ್ಲಿ ಭಾಗವಹಿಸಿದ್ದರು.
@CMofKarnataka@S_PrakashPatil
ಅರ್ಜಿ ಸಲ್ಲಿಸಲು ಉಳಿದಿರುವುದು ಕೇವಲ 2 ದಿನ.❗
ಇನ್ನೂ ಸ್ಪರ್ಧಾರ್ಥಿಗಳು #VAO ಆನ್ಲೈನ್ ಅರ್ಜಿ ಸಲ್ಲಿಸಲು ತೊಂದರೆ ಅನುಭವಿಸುತ್ತಿದ್ದಾರೆ. ದಯವಿಟ್ಟು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ ಅರ್ಜಿ ಸಲ್ಲಿಸುವ ದಿನಾಂಕ ಮುಂದೂಡಬೇಕು.
@KEA_karnataka#VAO
@RAshokaBJP@DKShivakumar 1)Veternary officer scam
2)PDO Scam
3)CTI Scam
4)RWS AEE Scam ಆಯ್ತು
ಈಗ 🚨🚨🚨
5)ಗ್ರೂಪ್ B ನೇಮಕ ದಲ್ಲಿ ಅಕ್ರಮ ಗಳ ಸರದಿ
a)BBMP AE SCAM
b)WRD AE SCAM
c)ADLR SCAM
d)Back word class officer scam
e)INDUSTRIAL EXTENSION officer SCAM
6)RWS JE scam
@AKSSAofficial@BasanagoudaBJP
ಮಾನ್ಯ @dkshivakumar ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮತ್ತೊಮ್ಮೆ ವಿದ್ಯಾರ್ಥಿ ಹೋರಾಟದ ಕಹಳೆ ಮೊಳಗಲಿದೆ,
ಅಕ್ರಮ ಆಗಿದೆ, ಅಧ್ಯಕ್ಷರನ್ನು ಅಮಾನತ್ತು ಮಾಡಿಯಾಯ್ತು ಆದರೆ ಜಿರಳೆಗಳಂತೆ ಹಣ ನೀಡಿ PDO ಪಟ್ಟಿಯಲ್ಲಿ ನುಸುಳಿರುವ ಅಭ್ಯರ್ಥಿಗಳು ಹಾಗೂ ಮಧ್ಯವರ್ತಿಗಳ ಬಂಧನಕ್ಕೆ #CBI ತನಿಖೆ ಅನಿವಾರ್ಯ
#PDO ಪರಿಕ್ಷೆ ಅಕ್ರಮ ತನಿಖೆ ಮಾಡದಿದ್ದರೆ ಧಾರವಾಡದಲ್ಲಿ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಧಾರವಾಡ ವಿದ್ಯಾರ್ಥಿ ಘೋಷಣೆ
@compolhdc@INCKarnataka@PrashantMakanur@BJP4Karnataka@BYVijayendra
ಕರ್ನಾಟಕ ಲೋಕಸೇವಾ ಆಯೋಗ (KPSC)ದಲ್ಲಿ ಇತ್ತೀಚಿನ ದಿನಗಳಲ್ಲಿ ಹೊರಬರುತ್ತಿರುವ ಗಂಭೀರ ಆರೋಪಗಳು ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ವಿಶ್ವಾಸವನ್ನು ಬುಡಮೇಲು ಮಾಡಿವೆ. ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರ ವಿರುದ್ಧ ಕೇಳಿಬಂದಿರುವ ನೇಮಕಾತಿ ಅಕ್ರಮ, ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರದ ಆರೋಪಗಳು ರಾಜ್ಯದ ಆಡಳಿತ ವ್ಯವಸ್ಥೆಯ ವಿಶ್ವಾಸಾರ್ಹತೆಯ ಮೇಲೆಯೇ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿವೆ. ಈ ಹಿನ್ನೆಲೆಯಲ್ಲಿ ಕೇವಲ ಇಲಾಖಾ ಅಥವಾ ಸೀಮಿತ ತನಿಖೆಯಿಂದ ಸತ್ಯ ಹೊರಬರುವುದಿಲ್ಲ. ಹೀಗಾಗಿ ಕೆಪಿಎಸ್ಸಿ ನೇಮಕಾತಿಗಳಲ್ಲಿನ ಎಲ್ಲ ಅಕ್ರಮಗಳ ಕುರಿತು ಕೇಂದ್ರ ತನಿಖಾ ದಳ (CBI)ದಿಂದ ಸಮಗ್ರ ಮತ್ತು ನ್ಯಾಯಸಮ್ಮತ ತನಿಖೆ ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸುತ್ತದೆ.
ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದಆರೋಪಗಳ ಹಿನ್ನೆಲೆಯಲ್ಲಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತುಗೊಳಿಸಲಾಗಿದೆ ಹಾಗೂ ಹೈಕೋರ್ಟ್ನಲ್ಲಿಯೂ ಸಿಬಿಐ ತನಿಖೆಗೆ ಸಂಬಂಧಿಸಿದ ಅರ್ಜಿಗಳು ವಿಚಾರಣೆಯಲ್ಲಿವೆ. ಆದರೆ ಇಷ್ಟು ಸಾಲದು. ಸರಿಯಾದ ತನಿಖೆ ನಡೆದು ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು.
ಕೆಪಿ ಎಸ್ ಸಿ ಮೂಲಕ ನಡೆಡೆದಿರುವ ವಿವಿಧ ನೇಮಕಾತಿ ಪ್ರಕ್ರಿಯೆಗಳು, ಪರೀಕ್ಷೆಗಳು, ಫಲಿತಾಂಶಗಳು ಮತ್ತು ಆಯ್ಕೆ ಪಟ್ಟಿಗಳ ಬಗ್ಗೆ ಸಾರ್ವಜನಿಕರಲ್ಲಿ ಗಂಭೀರ ಅನುಮಾನಗಳು ಮೂಡಿವೆ. ಪಶುವೈದ್ಯಾಧಿಕಾರಿಗಳ ನೇಮಕಾತಿ ಸೇರಿದಂತೆ ಹಲವು ನೇಮಕಾತಿಗಳಲ್ಲಿ ಹಣದ ವ್ಯವಹಾರ ನಡೆದಿದೆ, ಮಧ್ಯವರ್ತಿಗಳ ಮೂಲಕ ಉದ್ಯೋಗ ಮಾರಾಟವಾಗಿದೆ ಎಂಬ ಆರೋಪಗಳೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಸಮಗ್ರ ತನಿಖೆಯ ಮೂಲಕವೇ ಸತ್ಯಾಸತ್ಯತೆ ತಿಳಿಯಬೇಕು.
ವಿಶೇಷವಾಗಿ, ಸಾಹುಕಾರ್ ಅವರ ಅಧ್ಯಕ್ಷತೆಯ ಅವಧಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಸಾವಿರಾರು ಅಭ್ಯರ್ಥಿಗಳಿಗೆ ತೀವ್ರ ಅನ್ಯಾಯವಾಗಿದೆ. ಹುದ್ದೆಗಳನ್ನು ಮಾರಿಕೊಂಡ ಹಿನ್ನಲೆಯಲ್ಲೇ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ದೊರಕಬೇಕಿದ್ದ ನ್ಯಾಯ ದೊರೆಯಲಿಲ್ಲ. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸಿ ಸರ್ಕಾರ ಹಾಗೂ ಕೆಪಿಎಸ್ಸಿಯ ಗಮನ ಸೆಳೆದಿತ್ತು. ಆದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿಲ್ಲ. ಕನ್ನಡದಲ್ಲಿ ಶಿಕ್ಷಣ ಪಡೆದ ಪ್ರತಿಭಾವಂತ ಯುವಜನರ ಭವಿಷ್ಯವನ್ನು ಹಾಳು ಮಾಡಿದ ಎಲ್ಲ ನಿರ್ಧಾರಗಳ ಬಗ್ಗೆಯೂ ತನಿಖೆಯಾಗಬೇಕು.
ಕೆಪಿಎಸ್ಸಿ ಎನ್ನುವುದು ಸಾಮಾನ್ಯ ಸಂಸ್ಥೆಯಲ್ಲ. ಇದು ರಾಜ್ಯದ ಆಡಳಿತ ವ್ಯವಸ್ಥೆಗೆ ಅಧಿಕಾರಿಗಳನ್ನು ಆಯ್ಕೆ ಮಾಡುವ ಸಾಂವಿಧಾನಿಕ ಸಂಸ್ಥೆ. ಅಂತಹ ಸಂಸ್ಥೆಯ ಮೇಲೆಯೇ ಜನರ ವಿಶ್ವಾಸ ಕುಸಿದರೆ ಅದು ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಗೆ ಅಪಾಯಕಾರಿ ಬೆಳವಣಿಗೆಯಾಗುತ್ತದೆ. ಆದ್ದರಿಂದ ಕೇವಲ ಕೆಲ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದರಿಂದ ಸಾಲದು. ಕಳೆದ ಹಲವು ವರ್ಷಗಳ ನೇಮಕಾತಿ ಪ್ರಕ್ರಿಯೆಗಳು, ಮೌಲ್ಯಮಾಪನ, ಮೀಸಲಾತಿ ಅನುಷ್ಠಾನ, ಅಂಕಗಳ ಹಂಚಿಕೆ ಹಾಗೂ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಎಲ್ಲ ಆಯಾಮಗಳ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕು.
ನಮ್ಮ ಹಕ್ಕೊತ್ತಾಯಗಳು:
1. ಕೆಪಿಎಸ್ಸಿಯ ಎಲ್ಲ ಪ್ರಮುಖ ನೇಮಕಾತಿ ಅಕ್ರಮಗಳ ಕುರಿತು ತಕ್ಷಣ ಸಿಬಿಐ ತನಿಖೆಗೆ ಶಿಫಾರಸು ಮಾಡಬೇಕು.
2. ಸಾಹುಕಾರ್ ಅವರ ಅಧ್ಯಕ್ಷತೆಯ ಅವಧಿಯ ಎಲ್ಲ ನೇಮಕಾತಿಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು.
3. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ಕುರಿತು ಪ್ರತ್ಯೇಕ ನ್ಯಾಯಾಂಗ ಅಥವಾ ಉನ್ನತ ಮಟ್ಟದ ತನಿಖೆ ನಡೆಸಬೇಕು.
4. ಅಕ್ರಮ ಸಾಬೀತಾದರೆ ಸಂಬಂಧಪಟ್ಟ ಅಧಿಕಾರಿಗಳು, ಮಧ್ಯವರ್ತಿಗಳು ಹಾಗೂ ಇತರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
5. ತಪ್ಪು ಕಂಡುಬಂದ ನೇಮಕಾತಿಗಳನ್ನು ಮರುಪರಿಶೀಲಿಸಿ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು.
6. ಕೆಪಿಎಸ್ಸಿಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸ ಮರುಸ್ಥಾಪಿಸಲು ಶಾಶ್ವತ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಬೇಕು.
ರಾಜ್ಯದ ಲಕ್ಷಾಂತರ ಯುವಜನರ ಭವಿಷ್ಯದ ಪ್ರಶ್ನೆಯಾಗಿರುವ ಈ ಪ್ರಕರಣದಲ್ಲಿ ಸರ್ಕಾರ ಯಾವುದೇ ಮುಚ್ಚಿಹಾಕುವ ಪ್ರಯತ್ನ ಮಾಡಬಾರದು. ಸತ್ಯ ಹೊರಬಂದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಹಾಗೂ ನಿರಪರಾಧ ಅಭ್ಯರ್ಥಿಗಳಿಗೆ ನ್ಯಾಯ ಸಿಗಬೇಕು. ಕರ್ನಾಟಕ ರಕ್ಷಣಾ ವೇದಿಕೆ ಈ ಹೋರಾಟವನ್ನು ರಾಜ್ಯದ ಯುವಜನರ ಹಿತದೃಷ್ಟಿಯಿಂದ ಮುಂದುವರಿಸಲಿದೆ.
– ಟಿ.ಎ. ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ
Dear @KEA_karnataka ಸಾವಿರಾರು ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದಾರೆ ಗ್ರಾಮ ಆಡಳಿತ ಅಧಿಕಾರಿ (VA) ಹಾಗೂ ಲ್ಯಾಂಡ್ ಸರ್ವೇಯರ್ ಹುದ್ದೆಗಳಿಗೆ ಅರ್ಜಿ ಹಾಕುವ ದಿನಾಂಕವನ್ನು ವಿಸ್ತರಿಸಬೇಕೆಂದು ವಿನಂತಿಸುತ್ತೇವೆ,
@KSVS @CMofKarnataka@SANDEEPRAI#VAO AND #LANDsurveyor
Dear @RahulGandhi,
Is there one standard of justice for @NEET students and another for competitive exam aspirants in Karnataka, where your party is in power?
You raised your voice for NEET students. Why are you not speaking up for the students of Karnataka regarding the allegations of irregularities in recruitments conducted by @secretarykpsc
Thousands of students have alleged large-scale irregularities in the @PDO recruitment conducted by KARNATAKA PUBLIC SERVICE COMMISSION We have submitted what we believe to be credible evidence to the KPSC Secretary, the concerned government authorities, and Hon'ble @DKShivakumar. Despite this, no action has been taken so far.
We demand that the PDO recruitment be referred for a CBI investigation to ensure a fair, transparent, and impartial inquiry.
Where are the political leaders, experts, and public intellectuals who protested at Freedom Park in support of NEET students? Will you now stand with Karnataka's competitive exam aspirants and demand accountability?
ನ್ಯಾಯಕ್ಕಾಗಿ ದ್ವನಿ ಎತ್ತುವವರು ಮೊದಲು ನ್ಯಾಯಬದ್ಧವಾಗಿರಬೇಕು ,
@SANDEEPRAI@Sandeep98886864@secretarykpsc@CMofKarnataka@prakashraaj @chethanAhimsa
@KSVS 👇👇👇Gen.z group
https://t.co/WZx7YKbjsV
ಪ್ರಶ್ನೆ ಪತ್ರಿಕೆ ಸೋರಿಕೆ ಆದರೆ ಜಿಲ್ಲಾಧಿಕಾರಿಗಳೇ ಹೊಣೆ ಎಂದು ಮುಖ್ಯ ಮಂತ್ರಿಗಳು ಹೇಳಿರುವುದು ಅವರ ಹೊಣೆಗೇಡಿತನವನ್ನು ತೋರಿಸುತ್ತದೆ. ಈ ಹಿಂದೆಯೂ ಸಹ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತದಲ್ಲಿ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿ, ಅವಘಡ ನಡೆದರೆ ಅಧಿಕಾರಗಳಷ್ಟೇ ಹೊಣೆ, ಸಚಿವರಲ್ಲ ಎಂಬ ಅಲಿಖಿತ ನಿಯಮವನ್ನು ನಿಮ್ಮ ಕಾಂಗ್ರೆಸ್ ಸರ್ಕಾರ ಮಾಡಿತ್ತು .
ದೆಹಲಿಗೆ ಹೋಗಿ NEET ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಧರಣಿ ಕೂರುವ ಮುಖ್ಯ ಮಂತ್ರಿಗಳು ನಮ್ಮ ರಾಜ್ಯದ ನೇಮಕಾತಿಯಲ್ಲಿ ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಆಗುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ 'ಚ' ಕಾರ ವೆತ್ತುವುದಿಲ್ಲ.
ನಮ್ಮ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಮೊದಲು ಸರಿಪಡಿಸಿ. ಪ್ರಶ್ನೆ ಪತ್ರಿಕೆ ಸೋರಿಕೆ, ತಪ್ಪು ಅನುವಾದ, ನೇಮಕಾತಿಯಲ್ಲಿ ಅಕ್ರಮವಾದರೆ ಅದರ ಹೊಣೆಗಾರಿಕೆಯನ್ನು ಸಂಬಂಧಪಟ್ಟ ಸಚಿವರು ಹೊರಬೇಕು. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಮಾಡಬೇಡಿ. ನಗೆಪಾಟಲಾಗಿರುವ ಆಯೋಗವನ್ನು ಮೊದಲು ಸರ್ಜರಿ ಮಾಡಿ.
@AKSSAofficial I @Vijaykarnataka I
https://t.co/4RXNJ3TBz3
ಪ್ರಶ್ನೆ ಪತ್ರಿಕೆ ಸೋರಿಕೆ ಆದರೆ ಜಿಲ್ಲಾಧಿಕಾರಿಗಳೇ ಹೊಣೆ ಎಂದು ಮುಖ್ಯ ಮಂತ್ರಿಗಳು ಹೇಳಿರುವುದು ಅವರ ಹೊಣೆಗೇಡಿತನವನ್ನು ತೋರಿಸುತ್ತದೆ. ಈ ಹಿಂದೆಯೂ ಸಹ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತದಲ್ಲಿ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿ, ಅವಘಡ ನಡೆದರೆ ಅಧಿಕಾರಗಳಷ್ಟೇ ಹೊಣೆ, ಸಚಿವರಲ್ಲ ಎಂಬ ಅಲಿಖಿತ ನಿಯಮವನ್ನು ನಿಮ್ಮ ಕಾಂಗ್ರೆಸ್ ಸರ್ಕಾರ ಮಾಡಿತ್ತು .
ದೆಹಲಿಗೆ ಹೋಗಿ NEET ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಧರಣಿ ಕೂರುವ ಮುಖ್ಯ ಮಂತ್ರಿಗಳು ನಮ್ಮ ರಾಜ್ಯದ ನೇಮಕಾತಿಯಲ್ಲಿ ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಆಗುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ 'ಚ' ಕಾರ ವೆತ್ತುವುದಿಲ್ಲ.
ನಮ್ಮ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಮೊದಲು ಸರಿಪಡಿಸಿ. ಪ್ರಶ್ನೆ ಪತ್ರಿಕೆ ಸೋರಿಕೆ, ತಪ್ಪು ಅನುವಾದ, ನೇಮಕಾತಿಯಲ್ಲಿ ಅಕ್ರಮವಾದರೆ ಅದರ ಹೊಣೆಗಾರಿಕೆಯನ್ನು ಸಂಬಂಧಪಟ್ಟ ಸಚಿವರು ಹೊರಬೇಕು. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ಮಾಡಬೇಡಿ. ನಗೆಪಾಟಲಾಗಿರುವ ಆಯೋಗವನ್ನು ಮೊದಲು ಸರ್ಜರಿ ಮಾಡಿ.
@AKSSAofficial I @Vijaykarnataka I
https://t.co/4RXNJ3TBz3
ಮಾನ್ಯ @DKShivakumar ರಾಜ್ಯದ ವಿದ್ಯಾರ್ಥಿಗಳ ಮನವಿಗಳನ್ನು ಆಲಿಸಿ
ದೆಹಲಿ @NEET ವಿರುದ್ಧ ಹೋರಾಡಿದ ನಿಮ್ಮ ವಿದ್ಯಾರ್ಥಿ ಕಾಳಜಿ ರಾಜ್ಯದಲ್ಲಿ ಏಕಿಲ್ಲ ?
@PDO ಪರೀಕ್ಷೆಯಲ್ಲಿ ಅಕ್ರಮವಾಗಿದ್ದು ಮನವಿಗಳನ್ನು ಸಲ್ಲಿಸಿದರು @CBI ತನಿಕೆಗೆ ಯಾಕೆ ಆದೇಶ ನೀಡುತ್ತಿಲ್ಲ ?
ಅನುಭವದ ಗಣಿಗಳು ಹಾಗೂ ತಜ್ಞರು ನೀವು ಸಹ ಯಾಕೇ ಪ್ರಶ್ನಿಸುತ್ತಿಲ್ಲ ?
Gen Z is now asking @RahulGandhi to respond to alleged Veterinary Doctors recruitment scam in #Karnataka -Where a sting operation by student leader @kanthakumarr purportedly exposed an ₹80 lakh demand for jobs.
Will Rahul Gandhi speak up & take action?
We want JUSTICE ⚖️
ನೋಡಿ ಸ್ವಾಮಿ
@NEET ವಿರುದ್ಧ ಚರ್ಚೆ ಮಾಡಲು ಕನ್ನಡದ ಮಕ್ಕಳನ್ನು ಕರೆಯುವ ಎಲ್ಲಾ ತಜ್ಞರು
ನಮ್ಮದೇ ರಾಜ್ಯದಲ್ಲಿ @secretarykpscಅಕ್ರಮವನ್ನು ಪ್ರಶ್ನಿಸದ ಅನುಭವದ ಗಣಿಗಳು
@KEA_karnatakaನಡೆಸಿದ VA ಪರೀಕ್ಷೆಯಲ್ಲಿ 10 ಅಂಕ ಪಡೆಯಲಾಗದವರು 25 ದಿನಗಳಅಂತರದಲ್ಲಿ @KPSC ನಡೆಸಿದ #PDOಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲು
ಹೇಗೆ ಸಾದ್ಯ?
@secretarykpsc#PDO ನೇಮಕಾತಿಯಲ್ಲಿ ಅಕ್ರಮದ ವಾಸನೆ ಕಂಡು ಬಂದಿದ್ದು #KSVS ವಿದ್ಯಾರ್ಥಿಗಳ ಸಮೂಹ ಕೂಡಲೇ CBI ತನಿಖೆಗೆ ಆದೇಶಿಸಬೇಕೆಂದು @INCKarnataka ಸರ್ಕಾರವನ್ನು ಆಗ್ರಹಿಸುತ್ತದೆ
ಪಾರದರ್ಶಕ ಹಾಗೂ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದೆಲ್ಲೆಡೆ ಬೃಹತ್ ವಿದ್ಯಾರ್ಥಿ ಚಳವಳಿ ನಡೆಯಲಿದೆ
@SCAMPDO
ಮಾನ್ಯ ಮುಖ್ಯಮಂತ್ರಿಗಳೇ (@siddaramaiah ) ಒಳಮೀಸಲಾತಿ ಅಂತಿಮಗೊಂಡರೂ ಇದುವರೆಗೂ ಅಂತಿಮ ರೋಸ್ಟರ್ ಬಿಂದುಗಳನ್ನು ಅಂತಿಮಗೊಳಿಸಿಲ್ಲ , ದಯವಿಟ್ಟು ತುರ್ತಾಗಿ ರೋಸ್ಟರ್ ಬಿಂದುಗಳನ್ನು ಅಂತಿಮಗೊಳಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ನಿರ್ದೇಶನ ನೀಡಿ ಮತ್ತು ಆದಷ್ಟು ಬೇಗನೆ ನೇರ ನೇಮಕಾತಿ ಅಧಿಸೂಚನೆ ಆಗಲಿ.
@NswamyChalavadi