ಮಂಡ್ಯ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರ ಕಾರ್ಯಾಚರಣೆ https://t.co/Z4fvfJYuDn ಮೂಲಕ ಪರಿಚಯವಾಗಿ ರೈಲ್ಚೇ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 31,34,300/- ರೂ ಹಣವನ್ನು ಆನ್ ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದ ಆರೋಪಿಯ ಬಂಧನ.
ಇಂದು ಮಂಡ್ಯ ನಗರದ ನಂದಾ ವೃತ್ತ ಹಾಗೂ ಇತರೆ ಸ್ಥಳದಲ್ಲಿ "ಐಎಸ್ಐ ಮಾರ್ಕ್ ನ ಗುಣಮಟ್ಟದ ಸುರಕ್ಷಿತ ಹಾಗೂ ಧೀರ್ಘ ಬಾಳಿಕೆಯ ಹೆಲ್ಮೆಟ್ ಧರಿಸಿ" ಎಂಬ ವಿಚಾರದೊಂದಿಗೆ ಅಭಿಯಾನ ಕೈಗೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು....!!
@MandyaPolice@Addlsp_Mandya@DspMandya@MandyaTownCpi
ಈ ದಿನ ಮಂಡ್ಯ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ನಗರದ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿ ಬಿದ್ದ ರಸ್ತೆಯನ್ನು ಜಲಮಂಡಳಿ ಇಲಾಖೆಯ ಅಧಿಕಾರಿ ಹಾಗೂ ಕಾರ್ಮಿಕರುಗಳ ಸಹಕಾರದಿಂದ ರಸ್ತೆಗೆ ಟಾರು ಹಾಕುವ ಮೂಲಕ ಸರಿಪಡಿಸಲಾಯಿತು.
@MandyaPolice@Addlsp_Mandya@DspMandya@MandyaTownCpi
ಈ ದಿನ ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆಯ ಸಂಬಂದ ಪೂರ್ವಭಾವಿ ಸಭೆಯನ್ನು ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಪೊಲೀಸ್ ಅಧಿಕಾರಿಗಳು ಮತ್ತು ಕಾಲೇಜುಗಳ ಪ್ರಾಂಶುಪಾಲರು ಹಾಜರಿದ್ದು ಮಾನ್ಯ ಎ.ಡಿ.ಜಿ.ಪಿ ನೇಮಕಾತಿ ಕಛೇರಿಯಿಂದ ನೀಡಲಾಗಿದ್ದ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ನೀಡಲಾಯಿತು.
ಮದ್ಯಪಾನ ಮಾಡುವುದು ಮನರಂಜನೆಗಾಗಿ ಹೊರತು ಕುಡಿದು ವಾಹನ ಚಾಲನೆಗೆ ಅಲ್ಲ... ಕುಡಿದು ವಾಹನ ಚಲಾಯಿಸಿದಲ್ಲಿ ೧೦,೦೦೦/-ರೂ.ಗಳ ದಂಡವನ್ನು ವಿಧಿಸಲಾಗುತ್ತದೆ...
* ಜೀವದ ಜೊತೆ ಜೂಜಾಡಬೇಡಿ.
ಮಾನವ ಜನ್ಮ ದೊಡ್ಡದು, ಹಾಳುಮಾಡಿಕೊಳ್ಳಬೇಡಿ ಹುಚ್ಚಪ್ಪಗಳೀರಾ ಎಂದು ದಾಸರ ನುಡಿಯನ್ನು ಅರಿತುಕೊಳ್ಳಬೇಕು
@MandyaPolice@Addlsp_Mandya@DspMandya
ಇಂದು ಮಂಡ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್. ಜೆ. ಪಾರ್ಕ್ ನಲ್ಲಿ ಸೇರಿದ ಕ್ಯಾಬ್ ,ಟೆಂಪೋ ಹಾಗೂ ನಗರದ ವಿವಿಧ ಆಟೋ ಸ್ಟ್ಯಾಂಡ್ ಚಾಲಕರಿಗೆ ERSS 112 MANDYA,ಮೋಟಾರು ವಾಹನ ಕಾಯ್ದೆ ಮತ್ತು ಸಂಚಾರಿ ನಿಯಮಗಳ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿರುತ್ತದೆ.
ಈ ದಿನ ಮಂಡ್ಯ ಅಂಬೇಡ್ಕರ್ ಭವನದಲ್ಲಿ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು, ನಗರದ ಎಲ್ಲಾ ಆಟೋ ಮತ್ತು ಮ್ಯಾಕ್ಸಿಕ್ಯಾಬ್ ಗಳ ಚಾಲಕರುಗಳ ಅಹವಾಲುಗಳನ್ನು ಆಲಿಸಿ ಸಂಚಾರ ನಿಯಮಗಳ ಪಾಲನೆ ಬಗ್ಗೆ,ಅಹಿತಕರ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಸಹಕರಿಸುವಂತೆ ಸೂಚನೆಗಳನ್ನು ನೀಡಿದರು.
@IGP_SR_Mysuru
@MandyaPolice@Addlsp_Mandya@DspMandya
ಈ ದಿನ ಮಾನ್ಯ ಆರಕ್ಷಕ ಉಪಅಧೀಕ್ಷಕರು ಮಂಡ್ಯ ಉಪವಿಭಾಗ ರವರಿಂದ , ಉಪವಿಭಾಗದ ವಜ್ರ ಮತ್ತು ನಿರ್ಭಯಾ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಇನ್ನು ಹೆಚ್ಚಿನ ದಕ್ಷತೆಯಿಂದ ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಗಸ್ತು ಚುರುಕುಗೊಳಿಸುವಂತೆ ತಿಳುವಳಿಕೆ ನೀಡಿರುತ್ತಾರೆ. @DspMandya@ps_cen@Addlsp_Mandya@mandya_rural@112Mandya
ಈ ದಿನ ಮಂಡ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಮಾಜಿ ಪ್ರಧಾನಮಂತ್ರಿಗಳಾದ ದಿವಂಗತ. ಶ್ರೀ ರಾಜೀವ್ ಗಾಂಧಿ ರವರ ಜನ್ಮ ದಿನವನ್ನು "ಸದ್ಭಾವನಾ ದಿನ"ವನ್ನಾಗಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸುವ ಮೂಲಕ ಆಚರಿಸಲಾಯಿತು.
ಮಂಡ್ಯ ಜಿಲ್ಲಾ ಪೊಲೀಸ್ ವತಿಯಿಂದ ತುರ್ತು ಸ್ಪಂದನ ಸಹಾಯ ವ್ಯವಸ್ಥೆ [ERSS] ಡಯಲ್-112 ಗೆ ಮಾನ್ಯ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಸಿ.ನಾರಾಯಣಗೌಡ ಹಾಗೂ ಮಂಡ್ಯ ಶಾಸಕರಾದ ಶ್ರೀ ಎಂ.ಶ್ರೀನಿವಾಸ್ ರವರು ಚಾಲನೆ ನೀಡಿದರು. ತುರ್ತು ಪರಿಸ್ಥಿತಿಗಳಲ್ಲಿ ಸಾರ್ವಜನಿಕರು ಡಯಲ್-112 ಸೇವೆಯನ್ನು ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.
ಮಂಡ್ಯ ಜಿಲ್ಲಾ ಪೊಲೀಸ್ ವತಿಯಿಂದ ತುರ್ತು ಸ್ಪಂದನ ಸಹಾಯ ವ್ಯವಸ್ಥೆ [ERSS] ಡಯಲ್-112 ಗೆ ಚಾಲನೆ ನೀಡಲಾಗಿದ್ದು ಸಾರ್ವಜನಿಕರು ತುರ್ತು ಪರಿಸ್ಥಿತಿಗಳಲ್ಲಿ ಡಯಲ್-112 ಸೇವೆಯನ್ನು ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.
ಮಂಡ್ಯ ಸಂಚಾರ ಪೊಲೀಸ್ ಠಾಣೆ ಪ್ರಕಟಣೆ:
ಸಾರ್ವಜನಿಕರೆಲ್ಲಾ ಕರೋನಾ 2.0 ರೋಗವು ಬರದಂತೆ ಹಾಗೂ ದೂರವಿಡಲು ಈ ಕೆಳಕಂಡಂತೆ ಇರುವ ಮಾರ್ಗಸೂಚಿಗಳನ್ನು ಪಾಲಿಸಬೇಕಾಗಿ ವಿನಂತಿ.
*ಮಾಸ್ಕ್ ಧರಿಸಿರಿ.
*ಸ್ಯಾನಿಟೈಸರ್ ಬಳಸಿರಿ.
*ವ್ಯಾಕ್ಸೀನ್ ಹಾಕಿಸಿಕೊಳ್ಳಿ.
*ಸಾಮಾಜಿಕ ಅಂತರ ಕಾಯ್ದುಕೊಳ್ಳಿ.
*ಮನೆಯಲ್ಲಿಯೇ ಇರಿ.