ಇಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿ.ಪಂ ಬಳ್ಳಾರಿ ಇವರಿಂದ VB- G RAM G & ವಿವಿಧ ಯೋಜನೆಗಳ ಕಾಮಗಾರಿಗಳ ಪರಿಶೀಲನೆ. ಬಳ್ಳಾರಿ ತಾಲೂಕಿನ ಹಲಕುಂದಿ ಮತ್ತು ಎಸ್ ಜಿ ಕೋಟೆ ಗ್ರಾ.ಪಂ ಗಳಿಗೆ ಭೇಟಿ ನೀಡಿ ನೀಡಿ VB-GRAMG ಕಾಮಗಾರಿಗಳು, ಕುಡಿಯುವ ನೀರಿನ ಸಮಸ್ಯೆ, ಆರೋಗ್ಯ ಕೇಂದ್ರ, ಗ್ರಾಂಥಾಲಯಕ್ಕೆ & ಅಂಗನವಾಡಿ ಕೇಂದ್ರಕ್ಕೆ ಭೇಟ
ಇಂದು ಕರ್ನಾಟಕ ಸರ್ಕಾರದ ಮಾನ್ಯ
ಉಪ ಮುಖ್ಯಮಂತ್ರಿಗಳಾದ ಶ್ರೀ ಡಾ. ಜಿ ಪರಮೇಶ್ವರ ರವರು ನಮ್ಮ ಬಳ್ಳಾರಿ ಜಿಲ್ಲೆಯ ಬಳ್ಳಾರಿ ಮತ್ತು ಸಂಡೂರು ತಾಲ್ಲೂಕಿನಲ್ಲಿ ಬರ ಪರಿಸ್ಥಿತಿಯಿಂದ ಹಾನಿಗೊಳಗಾದ ಬೆಳೆಗಳ ವೀಕ್ಷಣೆ ಹಾಗೂ ಬರ ಸಮೀಕ್ಷೆ ಮಾಡಿದರು.ಜಿಲ್ಲಾ ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು/ಸಿಬ್ಬಂದಿ ಹಾಜರಿದ್ದರು
ಇಂದು ಬಳ್ಳಾರಿ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯ ಉದ್ಘಾಟನಾ ಕಾರ್ಯಕ್ರಮವು ಸಿರಿವಾರ ಗ್ರಾಮ ಪಂಚಾಯತಿ ಆವರಣದಲ್ಲಿ ಚಾಲನೆಗೊಂಡಿತು.
ಪ್ರಜಾ ಇಲಾಖೆಯ ಉದ್ಘಾಟನೆಯನ್ನು ಮಾನ್ಯ ಜಿಲ್ಲಾಧಿಕಾರಿಗಳು, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಮಾನ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು, ಉದ್ಘಾಟನೆಯನ್ನು ಮಾಡಿದರು.
ಇಳೆಗೆ ಮಳೆ ಬದುವಿಗೆ ಕಳೆ
ಮಳೆ ನೀರಿನ ಪ್ರವಾಹದಿಂದಾಗುತ್ತಿದ್ದ ಮಣ್ಣಿನ ಸವಕಳಿ, ಫಲವತ್ತತೆ ನಾಶ ತಡೆಯಲು ನರೇಗಾದಡಿ ನಿರ್ಮಿಸಿದ ಕಂದಕ ಬದುಗಳಲ್ಲಿ ಸಾವಿರಾರು ಲೀಟರ್ ಮಳೆ ನೀರು ಸಂಗ್ರಹವಾಗಿದೆ. ಮಳೆ ನೀರು ಸಂಗ್ರಹದಿಂದ ಬದುವಿಗೆ ಕಳೆಕಟ್ಟಿದಲ್ಲದೆ ಭೂ ಸವಕಳಿ ಕೂಡ ತಪ್ಪಿದೆ ಎನ್ನುತ್ತಿದ್ದಾರೆ ರೈತ.
#MGNREGA@MoRD_GoI@CMofKarnataka
ವಿಶೇಷ ಚೇತನರಿಗೂ ಅರಿವಿನ ಭಂಡಾರವಾದ ಬೀಕನ್ ಗ್ರಂಥಾಲಯಗಳು.
ವಿಶೇಷ ಚೇತನ ಮಕ್ಕಳು ಶಿಕ್ಷಣದ ಮುಖ್ಯವಾಹಿನಿಗೆ ಬರಬೇಕು ಹಾಗೂ ಕೀಳರಿಮೆ ಕಳೆದು ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಉದ್ದೇಶದಿಂದ ಮಕ್ಕಳ ಜ್ಞಾನಾರ್ಜನೆಗಾಗಿ ಬ್ರೈಲ್ ಪುಸ್ತಕಗಳು ಹಾಗೂ ಶ್ರವಣ ಸಾಧನಗಳನ್ನೊಳಗೊಂಡ 888 ಬೀಕನ್ ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಲಾಗಿದೆ.
#rdpr
Celebrating International Day of Yoga 2024 at Amrit Sarovar, Karnataka.
People gathered amidst the serene beauty of Amrit Sarovar for rejuvenating yoga. sessions, connecting body, mind, and spirit.
#InternationalDayOfYoga#YogaDay2024#MissionAmritSarovar#YogaForAll
ಕೂಸಿನ ಮನೆಗಳು ನರೇಗಾ ಕೂಲಿಕಾರ್ಮಿಕರ ಮಕ್ಕಳ ಪಾಲನೆ ಪೋಷಣೆಯೊಂದಿಗೆ ಅವರ ಸರ್ವತೋಮುಖ ಅಭಿವೃದ್ಧಿಯ ಗುರಿಯನ್ನು ಹೊಂದಿವೆ. ಇಲ್ಲಿ ಮಕ್ಕಳ ಸುರಕ್ಷತೆಯೊಂದಿಗೆ ಮೇಲ್ವಿಚಾರಣೆ ಮಾಡಲಾಗುತ್ತದೆ. ಮಕ್ಕಳಿಗೆ ಕಲಿಕಾ ಸಾಮಗ್ರಿಗಳು ಮತ್ತು ಆಟಿಕೆಗಳ ಸೌಲಭ್ಯಗಳ ಮೂಲಕ ಶಾಲಾ ಪೂರ್ವ ಕಲಿಕೆಗೆ ಅಡಿಪಾಯ ಹಾಕಲಾಗುತ್ತದೆ.
#RDPR#kusinamane@readingkafka
ನರೇಗಾ ಕೂಲಿಕಾರ್ಮಿಕ ಮಹಿಳೆಯರಿಗೆ ದುಡಿಮೆಯ ಅವಕಾಶ ಹೆಚ್ಚಿಸುವುದು 'ಕೂಸಿನ ಮನೆ' ಸ್ಥಾಪನೆಯ ಮೂಲೋದ್ದೇಶ. ಈ ಮೂಲಕ ಆ ಮಹಿಳೆಯರ 3 ವರ್ಷದೊಳಗಿನ ಮಕ್ಕಳ ಆರೈಕೆಯ ಜವಾಬ್ದಾರಿ ಸರ್ಕಾರದ್ದು. ಹೆಚ್ಚಿನ ದುಡಿಮೆಯ ಅವಕಾಶ ಮಹಿಳೆಯರದ್ದು.
#RDPR#ruraldevelopment#kusinamane@PriyankKharge@readingkafka
"ಸ್ವಚ್ಛ ಪರಿಸರ, ಸ್ವಸ್ಥ ಸಮಾಜ"
ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯಯುತ ಪರಿಸರ ನಿರ್ಮಾಣ ಮಾಡುವಲ್ಲಿ ಬಹುಮುಖ್ಯ ಪಾತ್ರ ವಹಿಸಿ. ವಿಶ್ವ ಪರಿಸರ ದಿನದಂದು ನಮ್ಮ ಪರಿಸರವನ್ನು ಸಂರಕ್ಷಿಸಲು ಪಣತೊಡಿ. ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು.
#RDPR#WorldEnvironmentDay2024
#AmritSanchay | Ramdurg in #Karnataka had a lake that dried up a decade ago, thereby depriving the villagers of fresh, clean drinking water and water for irrigation. The lake was developed under #AmritSarovar and #MGNREGA which also generated jobs for the villagers. #MoRD
ಇಂದು ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಅಂತಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗದಹಳ್ಳಿ ಗ್ರಾಮದಲ್ಲಿ ಕೆಲಸ ಮಾಡುತ್ತಿರುವ ಕೂಲಿಕಾರರಿಗೆ ಆರೋಗ್ಯ ಗ್ರಾಮ ಅಭಿಯಾನದಡಿ ಕಾಮಗಾರಿ ಸ್ಥಳದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಇಂದು ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲ್ಲೂಕಿನ ಚೆಳ್ಳಗುರ್ಕಿ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವ ಕೂಲಿಕಾರರಿಗೆ ಆರೋಗ್ಯ ಗ್ರಾಮ ಅಭಿಯಾನದಡಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು
ಬಳ್ಳಾರಿ ಜಿಲ್ಲೆಯ, ಸಂಡೂರು ತಾಲ್ಲೂಕಿನ ದರೋಜಿ ಗ್ರಾಮ ಪಂಚಾಯಿತಿಯ ಹಳೇ ದರೋಜಿ ಗ್ರಾಮದ ಮಣ್ಣು ಮತ್ತು ನೀರು ಸಂರಕ್ಷಣೆ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಕೂಲಿಕಾರರಿಗೆ ಗ್ರಾಮ ಆರೋಗ್ಯ ಅಭಿಯಾನದಡಿ ಕಾಮಗಾರಿ ಸ್ಥಳದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು ಎಲ್ಲಾ ಕೂಲಿಕಾರ್ಮಿಕರಿಗೆ ಆರೋಗ್ಯ ತಪಾಸಣೆ ಹಮ್ಮಿಕೊಂಡಿದೆ.
ಬಳ್ಳಾರಿ ಜಿಲ್ಲೆಯ, ಸಂಡೂರು ತಾಲ್ಲೂಕಿನ ವಿಠಲಾಪುರ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಒಗ್ಗೂಡಿಸುವಿಕೆಯಡಿ ಅನುಷ್ಠಾನ ಮಾಡಲಾಗುತ್ತಿರುವ ಮಣ್ಣು ಮತ್ತು ತೇವಾಂಶ ಸಂರಕ್ಷಣೆ ಕಾಮಗಾರಿಯಲ್ಲಿ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವುದು.
ಇಂದು ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಬನ್ನಿಹಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವ ಕೂಲಿಕಾರರಿಗೆ ಆರೋಗ್ಯ ಅಮೃತ ಅಭಿಯಾನದಡಿ ಕಾಮಗಾರಿ ಸ್ಥಳದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಇಂದು ಬಳ್ಳಾರಿ ಜಿಲ್ಲೆ ಬಳ್ಳಾರಿ ತಾಲ್ಲೂಕು, ಕಾರೇಕಲ್ಲು ಗ್ರಾಮ ಪಂಚಾಯತಿಯಲ್ಲಿ ಅಮೃತ ಸರೋವರ ಕೆರೆಯಲ್ಲಿ ಕೂಲಿಕಾರರು ಕೆಲಸ ನಿರ್ವಹಿಸುತ್ತಿದ್ದಾರೆ ಗೋಮಾಳದಲ್ಲಿ ಟ್ರೆಂಚ್ ಕಾಮಗಾರಿಯನ್ನು ಸಹ ಪ್ರಾರಂಭಿಸಲಾಗಿದೆ ಮತ್ತು ಕೂಲಿಕಾರರಿಗೆ ಆರೋಗ್ಯ ತಪಾಸಣೆ ಕೈಗೊಳ್ಳಲಾಯಿತು.