ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ( ಮೊಟ್ಟೆ ) ನೀಡುವುದೂ ಸೇರಿದಂತೆ ನಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ಶ್ಲಾಘಿಸಿ ಪತ್ರ ಬರೆದಿದ್ದ ಧಾರವಾಡ ಜಿಲ್ಲೆ ಕುಂದಗೋಳದ ಆಶಾ ನೆಹರು ಪಾಟೀಲ್ ಎಂಬ ವಿದ್ಯಾರ್ಥಿನಿಯನ್ನು ಇಂದು ಭೇಟಿಮಾಡಿದೆ. ಕೃಷಿ ಮೇಳ ಉದ್ಘಾಟನೆಗೆ ಧಾರವಾಡಕ್ಕೆ ತೆರಳಿದ್ದ ವೇಳೆಯಲ್ಲಿ ವಿದ್ಯಾರ್ಥಿನಿಯನ್ನು ಭೇಟಿಯಾಗಿ ಮಾತನಾಡಿದ್ದು ನನಗೆ ಖುಷಿ ಕೊಟ್ಟಿದೆ.
ನಮ್ಮ ಸರ್ಕಾರವು ಗ್ಯಾರಂಟಿ ಯೋಜನೆಗಳು, ವಿದ್ಯಾರ್ಥಿಸ್ನೇಹಿ ಕಾರ್ಯಕ್ರಮಗಳ ಮೂಲಕ ನಾಡಿನ ಜನತೆಗೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ಸ್ವಾವಲಂಬಿ ಬದುಕಿನ ಕನಸಿಗೆ ಬೆಂಬಲವಾಗಿ ನಿಂತಿದೆ. ನಮ್ಮ ಈ ಯೋಜನೆಗಳ ಫಲಾನುಭವಿಯಾದ ಪುಟ್ಟ ಹುಡುಗಿಯೊಬ್ಬಳು ನನ್ನೊಂದಿಗೆ ಪತ್ರದ ಮೂಲಕ ತನ್ನ ಸಂತಸ ಹಂಚಿಕೊಂಡು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿದ್ದಳು. ಪತ್ರ ಓದಿದಾಗಿಂದ ಆ ಮಗುವನ್ನು ಒಮ್ಮೆ ಭೇಟಿಯಾಗಬೇಕೆಂದು ಬಯಸಿದ್ದೆ, ಅದು ಇಂದು ಸಾಧ್ಯವಾಯಿತು.
ಇಂತಹ ಮುಗ್ಧ ಮಕ್ಕಳ ಭವಿಷ್ಯದ ಕನಸುಗಳು ನಮ್ಮ ಸರ್ಕಾರದ ಕೈಗಳಲ್ಲಿ ಸುರಕ್ಷಿತವಾಗಿದೆ. ಈ ಮಕ್ಕಳ ಕನಸನ್ನು ನನಸು ಮಾಡುವುದು ನಮ್ಮ ಕರ್ತವ್ಯವೆಂದು ಭಾವಿಸಿ, ಆ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇವೆ.
कांग्रेस पार्टी की छत्तीसगढ़ सरकार की प्राथमिकता खेत से खलिहान तक है, बालकों से नौजवान तक है, महिलाओं से लेकर बुजुर्ग तक है।
नीति आयोग की रिपोर्ट में आया हैं कि 5 सालों में छत्तीसगढ़ में 40 लाख लोग ग़रीबी के दायरे से बाहर हुए हैं।
जहां कांग्रेस सरकार ये सब काम कर रही, वहीं केंद्र की मोदी सरकार छत्तीसगढ़ के साथ सौतेला व्यवहार कर रही है !
पर छत्तीसगढ़ की जनता का भरोसा कांग्रेस पर क़ायम रहेगा और वो भाजपा को आने वाले चुनाव में मुँहतोड़ जवाब देगी।
#CongressBharosaSammelan
ಜಿ20 ಸಮಾವೇಶಕ್ಕೆ ಬರುತ್ತಿರುವ ವಿದೇಶಿ ಗಣ್ಯರಿಗೆ ಮೋದಿ‘ಜಿ’ ಅವರ ಅಭಿವೃದ್ಧಿಯ ಅಚ್ಚೆ ದಿನಗಳನ್ನು ಮುಚ್ಚಿಡಲು ಪರದೆ ಹಾಕಲಾಗಿದೆ!
ಬಡವರನ್ನು, ಬಡತನವನ್ನು ನೋಡದಿದ್ದರೆ ಆಯ್ತು ಬಡತನ ನಿರ್ಮೂಲನೆ ಮಾಡಿದಂತಾಗುತ್ತದೆ ಎಂಬುದು ‘ಬಡ ತಾಯಿಯ ಮಗನ’ ನಂಬಿಕೆಯಾಗಿದೆ!
ದೆಹಲಿಯ ಸ್ಲಮ್ ಗಳಿಗೆ ಪರದೆ ಹಾಕಿರುವ ಕೇಂದ್ರ ಸರ್ಕಾರ ಜಿ20 ಸಮಾವೇಶಕ್ಕಾಗಿ ದೆಹಲಿಯ ಸುಂದರೀಕರಣಕ್ಕೆ ಮಾಡಿದ ಖರ್ಚು ಬರೋಬ್ಬರಿ ₹4,200 ಕೋಟಿ.
👉ಜಿ20 ಸಮಾವೇಶಕ್ಕಾಗಿ ಬಜೆಟ್ಟಿನಲ್ಲಿ ಮೀಸಲಿಟ್ಟ ಮೊತ್ತ ₹990 ಕೋಟಿ.
👉ಅತಿಥಿ ಸತ್ಕಾರಕ್ಕಾಗಿ ಮಾಡಿದ ಖರ್ಚು ₹2,700 ಕೋಟಿ
ದೆಹಲಿಯ ಸುಂದರೀಕರಣಕ್ಕೆ ₹4,200 ಕೋಟಿ..
ಈ ಎಲ್ಲಾ ಖರ್ಚಿನಲ್ಲಿ ಬಡವರನ್ನು ಮುಚ್ಚಿಡುವ ಬದಲು ಬಡತನವನ್ನೇ ನಿರ್ಮೂಲನೆ ಮಾಡಬಹುದಿತ್ತಲ್ಲವೇ?
ನಮ್ಮ ನಾಯಕರಾದ ಶ್ರೀ @RahulGandhi ಅವರ ಭಾರತ್ ಜೋಡೋ ಯಾತ್ರೆಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಮನಗರದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೆಮ್ಮೆಯ ಕ್ಷಣಗಳು.
#BharatJodoYatra
ಭಾರತದ ಇತಿಹಾಸದಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡ, ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ರಾಷ್ಟ್ರಭಕ್ತಿಯ ನಿದರ್ಶನವಾಗಿದೆ. ಸಹಸ್ರಾರು ಅಮಾಯಕ ಭಾರತೀಯರ ಮೇಲೆ ಬ್ರಿಟಿಷರು ಗುಂಡಿನ ಮಳೆಗರೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಸಂಭವಿಸಿದ ಈ ದಿನದಂದು, ಹುತಾತ್ಮರಾದವರಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸೋಣ.
- @prasad_abbayya
ಕನ್ನಂಬಾಡಿ ಕಟ್ಟೆ ಕಟ್ಟಿಸಿ ರೈತರ ಬದುಕು ಹಸನಾಗಿಸಿದ ಧೀಮಂತ ಅಭಿಯಂತರ, ಮೈಸೂರಿನ ಹೆಮ್ಮೆಯ ದಿವಾನರಾಗಿದ್ದ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ಪುಣ್ಯಸ್ಮರಣೆ ಸಂದರ್ಭದಲ್ಲಿ ನೆನೆಯೋಣ.
- @prasad_abbayya@INCKarnataka
International Day of Human Space Flight marks the celebration of the first human #space flight by Yuri Gagarin. Remembering this historical event, let’s encourage our kids to fly high & conquer all their dreams. - @prasad_abbayya@INCKarnataka
ಚಿತ್ರರಂಗದ ಮರೆಯಲಾರದ ವ್ಯಕ್ತಿತ್ವ, ಮಾದರಿ ನಟ, ನಟಸಾರ್ವಭೌಮ ಶ್ರೀ ಡಾ.ರಾಜ್ಕುಮಾರ್ ಅವರ ಪುಣ್ಯಸ್ಮರಣೆಯಂದು ಆದರಪೂರ್ವಕ ಪ್ರಣಾಮಗಳು. ಸರಳ, ಸಜ್ಜನಿಕೆಯ ನಡತೆಯಿಂದಾಗಿ ಎಲ್ಲರ ಮನೆ ಮಗನಾಗಿ, ಬಂಗಾರದ ಮನುಷ್ಯನಾಗಿ ಬಾಳಿದ ಅವರನ್ನು ಈ ದಿನ ಸ್ಮರಿಸೋಣ.
- @prasad_abbayya#DrRajkumar@INCKarnataka@rssurjewala@MBPatil
ಸತ್ಯಶೋಧಕ ಸಮಾಜದ ಸ್ಥಾಪಕರು, ಮಹಿಳೆಯರ ಶಿಕ್ಷಣಕ್ಕಾಗಿ ಶ್ರಮಿಸಿದ ಮಹಾನ್ ಸಮಾಜ ಸುಧಾರಕರು, ಹಿಂದುಳಿದ ವರ್ಗಗಳ ಏಳಿಗೆಗೆ ಅವಿರತವಾಗಿ ಶ್ರಮಿಸಿದ ಮಹಾತ್ಮ ಜ್ಯೋತಿಬಾ ಫುಲೆ ಅವರ ಜನ್ಮದಿನದಂದು ಗೌರವ ನಮನಗಳು.
- @prasad_abbayya#ಮಹಾತ್ಮ_ಜ್ಯೋತಿಬಾ_ಫುಲೆ@INCKarnataka
ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನ
ಮಹಾತ್ಮ ಗಾಂಧೀಜಿಯವರ ಪತ್ನಿಯವರಾದ ಶ್ರೀಮತಿ ಕಸ್ತೂರ ಬಾ ಅವರ ಜನ್ಮದಿನದಂದು ಅವರಿಗೆ ನಮ್ಮ ಗೌರವಪೂರ್ವಕ ನಮನಗಳು. - @prasad_abbayya@INCKarnataka
ಶ್ರೀಕ್ಷೇತ್ರ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಪರಮಪೂಜ್ಯ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರ ಜನ್ಮದಿನದಂದು ಅವರಿಗೆ ನನ್ನ ಭಕ್ತಿಪೂರ್ವಕ ಪ್ರಣಾಮಗಳು.
ಪೂಜ್ಯ ಶ್ರೀಗಳ ಆಶೀರ್ವಾದ ಹಾಗೂ ಮಾರ್ಗದರ್ಶನ ನಾಡಿನ ಸಮಸ್ತ ಜನತೆಗೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.
- @prasad_abbayya@rssurjewala@HubliInc@SmHubli
ಹೋಮಿಯೋಪತಿ ಔಷಧಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ವಿಶ್ವದಾದ್ಯಂತ ಹೋಮಿಯೋಪಥಿ ಔಷಧದ ಬಳಕೆಯನ್ನು ಹೆಚ್ಚಿಸುವ ಸಲುವಾಗಿ ಪ್ರತಿವರ್ಷ ಏಪ್ರಿಲ್ 10ರಂದು ವಿಶ್ವ ಹೋಮಿಯೋಪತಿ ದಿನವನ್ನು ಭಾರತ ಸೇರಿದಂತೆ ವಿಶ್ವದಾದ್ಯಂತ ಆಚರಿಸಲಾಗುತ್ತದೆ. - @prasad_abbayya#ವಿಶ್ವಹೋಮಿಯೋಪತಿದಿನ@INCKarnataka@HubliInc
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ರಾಜ್ಯಸಭಾ ಸದಸ್ಯರು, ಶ್ರೇಷ್ಠ ಚಿಂತಕರೂ ಆದ ಶ್ರೀ @Jairam_Ramesh ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. - @prasad_abbayya