@publictvnews ಇವರಿಗೂ ಇವರ ಬಾಸ್ ರಾಹುಲ್ ಗೂ ಏನೂ ವ್ಯತ್ಯಾಸ ಇಲ್ಲ.ರಾಹುಲ್ ಲೋಕಸಭೆಯಲ್ಲಿ ತಾನೇ ಮೈಕ್ ಆಫ್ ಮಾಡಿ ನನಗೆ ಮಾತಾಡಲು ಮೈಕ್ ಆಫ್ ಮಾಡಿದ್ದಾರೆ ಎನ್ನುತ್ತಾರೆ, ಇವರು ತಾವಿರುವ ಊರಿನಲ್ಲಿ blo ಬಂದಾಗ SIR form ತುಂಬಿ ಕೊಡುವುದನ್ನು ಬಿಟ್ಟು ಈಗ ನನ್ನನ್ನು ಲಿಸ್ಟ್ ನಿಂದ ತಗೆದಿದ್ದಾರೆ ಎಂದು ತಗಾದೆ ತಗೆದಿದ್ದಾನೆ.ಇವರು ಮಹಸ ನಟರು😛
ನೀವು ಗಾಂಧಿ ಗಾಂಧಿ ಅಂತ ಕೂಗಿದರೆ ನಡೆಯುತ್ತೆ, ನಾವು ಡಿ ಕೆ ಡಿ ಕೆ ಅನ್ನಬಾರದಾ?ಇಷ್ಟು ದಿನ ದೇಶವನ್ನು ಬಳಿದು ಕಸಗೂಡಿಸಿದ್ದೀರಿ,ನಿಮ್ಮ ಅಂತರಾತ್ಮ ನಿಮ್ಮ ನಾಲಿಗೆಯಿಂದ ನುಡಿಸಿದೆ ಅಷ್ಟೇ.
ಡಿ.ಕೆ ಡಿ.ಕೆ ಅಂತ ನೀವು ಕೂಗುತ್ತಿದ್ದರೆ ಬಾಕಿ ಉಳಿದವರು ಏನು ಕಸ ಗುಡಿಸೋದಕ್ಕೆ ಬಂದಿದ್ದಾರಾ, ಆಯ್ತಾ...ನೀವು ಇಲ್ಲಿ ಕೂಗಿದರೆ ಇಡೀ ದೇಶ ನಿಮ್ಮ ಕೈಗೆ ಸಿಕ್ಕಿದಂತೆ ಆಗುತ್ತದೆಯೇ, ಯೂಸ್ ಲೆಸ್ ಫೆಲೋಸ್ ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
#MallikarjunKharge#DKShivakumar#Siddaramaiah #BengaluruPalaceGrounds
@JoshiPralhad ಗೋಲಗುಂಬಜ Exp ರೈಲು ಗದಗ ಬೈಪಾಸ್ ಮೂಲಕ ಹಾದು ಹೋಗಲು @VSOMANNA_BJP@AshwiniVaishnaw ಅವರಿಗೆ ಶಿಪಾರಸು ಮಾಡಿ ಆದೇಶ ಹೊರಡಸಿದ್ದಾರೆ.ಗದಗ ಜನರಿಗೆ ಪಂಢರಪುರ ಹಾಗೂ ಬೆಂಗಳೂರು ಪಟ್ಟಣ ಸೇರಲು ದೂರ ಮಾಡುವ ಮೂಲಕ ಗದಗ ಬೆಟಗೇರಿ ಅವಳಿ ನಗರದ ಬಡ ಹಾಗೂ ಮಧ್ಯಮ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ @BJP4Karnataka@SWRRLY
@ChekrishnaCk ಇವರ ಮಾಲೀಕರಿಗೇ (ನೆಹರು,ಇಂದಿರಾ,ರಾಜೀವ ಮತ್ತು ಸೋನಿಯಾ,ರಾಹುಲ್)ಆಗಿಲ್ಲ ಗುಲಾಮರೇನು ಮಾಡಬಲ್ಲರು?ಹಾಗೇನಾದರೂ ಮಾಡಿದರೆ ಇರುವ ನಾಲ್ಕು ರಾಜ್ಯಗಳೂ ಕೈ ಬಿಡುತ್ತವೆ. ಆ ಪಾಪ ಮಾಡದಿರಲು ನಿಮ್ಮ ಗುಲಾಮನಿಗೆ ಬುದ್ದಿ ಹೇಳಿ ಪುಣ್ಯ ಕಟ್ಟಿಕೊಳ್ಳಿ.
@siddaramaiah@narendramodi@BJP4India ನಮ್ಮಂತೆ ಎಲ್ಲರೂ ಅಂತ ಭಾವಿಸಿದಂತಿದೆ ನಿಮ್ಮ ಮನ.ಭಾರತದ ಮೊದಲ ಪ್ರಧಾನಿ ಚುನಾಯಿತ ಜನ ಪ್ರತಿನಿಧಿಯಲ್ಲ.ದೇಶವನ್ನು ಎರಡು ಭಾಗ ಮಾಡಿ ಪ್ರಧಾನಿಯಾದವರು.
@GadagRailUsers@SWRRLY@HKPatilINC@BSBommai ಇನ್ನೂ ಮುಂದೆ ನೋಡಿ,ಗದಗ ಎಲವಿಗಿ ಮಾರ್ಗ ಬಿಂಕದಕಟ್ಟಿಗೆ ಕೂಡಿಸಿದರೆ ಎಲ್ಲಾ ರೈಲುಗಳು ಬೈಪಾಸದಿಂದಲೇ ಹೊರಡುತ್ತವೆ. ಈಗಿನಿಂದಲೇ ನೀವು ಬಳ್ಳಾರಿ ಗೇಟ್ ಗೆ ಎಲವಿಗಿ ಮಾರ್ಗ ಜೋಡಿಸಲು ನಿಮ್ಮ ಶಾಸಕರಿಗೆ ಒತ್ತಾಯ ಮಾಡಿರಿ.ಅಂದರೆ ಬೆಂಗಳೂರಿನಿಂದ ಬರುವ ಎಲ್ಲಾ ರೈಲುಗಳು ಇಂಜಿನ್ ಬದಲಿಸದೇ ಸೀದಾ ಬಾಗಲಕೋಟೆಯ ಕಡೆಗೆ ಹೋಗುವಂತಾಗುತ್ತದೆ.ಈಗಿನಿಂದಲೇ
@SuhasDuga ಇದು" ದಿಖಾವಾ"ಅಷ್ಟೊಂದು ಸರಳತೆ,ಸಂವಿಧಾನಕ್ಕೆ ಮರ್ಯಾದೆ ಕೊಡುವವರಾಗಿದ್ದರೆ ಸೋತ ಮರು ಕ್ಷಣವೇ ರಾಜಿನಾಮೆ ಕೊಡಬಹುದಿತ್ತು.ಜನರಿಗೆ ಬೇಡವಾದ ಮೇಲೆ ಅರಮನೆಯಲ್ಲಿದ್ದರೇನು ಗುಡಿಸಲಲ್ಲಿದ್ದರೇನು?ಬಾಂಗ್ಲಾ ನುಸುಳುಕೊರರಿಗೆ ಅನುಕೂಲ ಮಾಡಿಕೊಡಲು, ಗಡಿಗೆ ಬೇಲಿ ಹಾಕಲು ಅವಕಾಶ ಕೊಡಲಿಲ್ಲ ಇದೇ ದೀದಿ,
ದಕ್ಷಿಣ ಕರ್ನಾಟಕದ @KSRTC_Journeys ಸಾರಿಗೆ ನಿಗಮವು ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರ-ಪ್ರಮುಖ ನಗರ-ಯಾತ್ರಾ ಸ್ಥಳ-ಪ್ರವಾಸಿ ಸ್ಥಳಗಳಿಗೆ ಬಸ ಸೇವೆಯನ್ನು ನೀಡುತ್ತದೆ. ಆದ್ರೆ ವಿಭಾಗೀಯ ಕೇಂದ್ರ ಕಲಬುರಗಿಗೆ ಮಾತ್ರ KSRTC ಬಸಗಳು ಬರುವುದಿಲ್ಲ ಯಾಕೆ. ಕಲಬುರಗಿ ಕರ್ನಾಟಕದ ಭಾಗ ಅಲ್ಲವೇ
@S_PrakashPatil@Manyakheta@rlyhydka
ದಕ್ಷಿಣದ ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಂತೆ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿಯೂ ಬಿಜೆಪಿಯ ಕೋಮುವಾದಿ ರಾಜಕಾರಣಕ್ಕೆ ಪ್ರವೇಶ ಇಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿರುವ ಎರಡು ರಾಜ್ಯಗಳ ಮತದಾರರನ್ನು ದೇಶದ ಎಲ್ಲ ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ಜನರ ಪರವಾಗಿ ಅಭಿನಂದಿಸುತ್ತೇನೆ.
ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ನಿರೀಕ್ಷಿತವಾಗಿತ್ತು. ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಪ್ರಚಾರದ ಕಾರ್ಯತಂತ್ರದ ವರೆಗೆ ಎಲ್ಲವನ್ನೂ ಆ ರಾಜ್ಯದ ಕಾಂಗ್ರೆಸ್ ನಾಯಕರು ಸಂಘಟಿತರಾಗಿ ನಡೆಸಿದ್ದಾರೆ. ಕೇರಳ ರಾಜ್ಯದೊಂದಿಗೆ ವಿಶೇಷವಾದ ಬಾಂಧವ್ಯವನ್ನು ಬೆಳೆಸಿಕೊಂಡಿರುವ ನಮ್ಮ ಪಕ್ಷದ ನಾಯಕರಾದ @RahulGandhi ಹಾಗೂ @priyankagandhi ಅವರು ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಅವರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಶೀಘ್ರದಲ್ಲಿಯೇ @INCKerala ಪಕ್ಷದ ಶಾಸಕಾಂಗ ಸಭೆಯು ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದೆ. ಕರ್ನಾಟಕದ ಜೊತೆಯಲ್ಲಿ ಕೇರಳ ರಾಜ್ಯದಲ್ಲಿ ಕೂಡಾ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದು ಇಡೀ ದೇಶಕ್ಕೆ ರೋಲ್ ಮಾಡೆಲ್ ಆಗಿರುವ ಆಡಳಿತವನ್ನು ನೀಡಲಿದೆ ಎಂಬ ನಂಬಿಕೆ ನಮಗಿದೆ. ನೆರೆಯ ರಾಜ್ಯವಾದ ಕೇರಳದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಕರ್ನಾಟಕದ ಕಾಂಗ್ರೆಸ್ ಪಕ್ಷದ ಬಲವನ್ನು ಹೆಚ್ಚಿಸಿದೆ.
ಕಳೆದ ಮೂರು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ವಿರುದ್ಧ ಸಹಜವಾಗಿಯೇ ಪ್ರಬಲ ಆಡಳಿತ ವಿರೋಧಿ ಅಲೆ ಇತ್ತು. ಇದರ ಜೊತೆಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿನ ಮೋಸದಾಟವೂ ಸೇರಿದಂತೆ ಕೇಂದ್ರ ಚುನಾವಣಾ ಆಯೋಗದ ಕೈವಾಡದಿಂದಾಗಿ ಮಮತಾ ಬ್ಯಾನರ್ಜಿಯವರು ಸೋತಿದ್ದಾರೆ. ಎಸ್ ಐಆರ್ ನಿಂದ ಮಮತಾ ಬ್ಯಾನರ್ಜಿಯವರ ಪರವಾಗಿದ್ದ ಲಕ್ಷಾಂತರ ಮತದಾರರ ಹೆಸರು ಕೈಬಿಟ್ಟು ಹೋಗಿತ್ತು. ಭಾರತೀಯ ಜನತಾ ಪಕ್ಷ ಸರ್ಕಾರಿ ಯಂತ್ರದ ದುರ್ಬಳಕೆ, ತೋಳ್ಬಲ ಮತ್ತು ಹಣದ ಬಲವನ್ನು ರಾಜಾರೋಷವಾಗಿ ಬಳಸಿ ಈ ಗೆಲುವನ್ನು ಸಾಧಿಸಿದೆ.
ಪಶ್ಚಿಮ ಬಂಗಾಳದಲ್ಲಿನ ಬಿಜೆಪಿ ಗೆಲುವು ನಿಜವಾದ ಅರ್ಥದಲ್ಲಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಸೋಲಾಗಿದೆ. ಧಾರ್ಮಿಕವಾಗಿ ಮತಗಳ ಧ್ರುವೀಕರಣದ ಕುತಂತ್ರ ರಾಜಕಾರಣವನ್ನು ಪಶ್ಚಿಮ ಬಂಗಾಳದಲ್ಲಿಯೂ ಬಿಜೆಪಿ ಪ್ರಯೋಗಿಸಿ ಯಶಸ್ಸನ್ನು ಕಂಡಿದೆ. ಪಶ್ಚಿಮ ಬಂಗಾಳದ ಪ್ರಜ್ಞಾವಂತ ಮತದಾರರಿಗೆ ಶೀಘ್ರದಲ್ಲಿ ತಾವು ಮಾಡಿರುವ ತಪ್ಪಿನ ಅರಿವಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲಿದ್ದಾರೆ.
ತಮಿಳುನಾಡು ಚುನಾವಣೆಯಲ್ಲಿ ಈ ಫಲಿತಾಂಶವನ್ನು ನಾನು ನಿರೀಕ್ಷಿಸಿರಲಿಲ್ಲ. ಆಡಳಿತ ವಿರೋಧಿ ಅಲೆ ಇದ್ದರೂ ಡಿಎಂಕೆ ಸರ್ಕಾರದ ಜನಪರ ಆಡಳಿತ ಮತ್ತು ಕಾರ್ಯಕ್ರಮಗಳನ್ನು ಅಲ್ಲಿನ ಜನ ಮೆಚ್ಚಿಕೊಂಡಿದ್ದರು. ಬಿಜೆಪಿಯ ಕೋಮುವಾದಿ ರಾಜಕಾರಣವನ್ನು ಎಂದೂ ಸಹಿಸದ ತಮಿಳು ಮತದಾರರು ಇಂದಿನ ವರೆಗೆ ಪ್ರಜ್ಞಾವಂತಿಕೆಯಿಂದ ಮತ ಚಲಾಯಿಸುತ್ತಾ ಬಂದವರು. ಹೀಗಿದ್ದೂ ತಮಿಳುನಾಡಿನ ಯುವಜನರು ಮತ್ತು ಮಹಿಳೆಯರಲ್ಲಿ ಸಿನೆಮಾ ನಟ ವಿಜಯ್ ಅವರ ಬಗೆಗಿನ ಆಕರ್ಷಣೆಗೆ ಬಲಿಯಾಗಿರುವುದು ವಿಷಾದನೀಯ.
ಡಿಎಂಕೆ ಪಕ್ಷದ ಸೋಲು ದ್ರಾವಿಡ ಚಳುವಳಿಯ ಉಪ ಉತ್ಪನ್ನವಾದ ತಮಿಳುನಾಡಿನ ದ್ರಾವಿಡ ರಾಜಕೀಯಕ್ಕೆ ಆಗಿರುವ ಗಂಭೀರ ಹಿನ್ನಡೆಯಾಗಿದೆ. ಮುಖ್ಯಮಂತ್ರಿ ಸ್ಟಾಲಿನ್ ಅವರು ಈ ಸೋಲಿನಿಂದ ಶೀಘ್ರದಲ್ಲಿ ಚೇತರಿಸಿಕೊಳ್ಳಲಿದ್ದಾರೆ ಎಂದು ಹಾರೈಸುತ್ತೇನೆ. ಇದೇ ವೇಳೆ ಅನಿರೀಕ್ಷಿತವಾಗಿ ಅಭೂತಪೂರ್ವ ಗೆಲುವು ಸಾಧಿಸಿದ ನಟ ವಿಜಯ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
#ElectionResults2026
ಭೂಸ್ವಾಧೀನ ಪ್ರಕ್ರಿಯೆಯನ್ನು ಕಡಿಮೆ ಮಾಡಲು ಗದಗ ಉಪ ವಿಭಾಗಾಧಿಕಾರಿಗೆ ಅರ್ಜಿ ಕೊಟ್ಟು ಎರಡು ವರ್ಷವಾಗುತ್ತಾ ಬಂದರೂ ಇನ್ನೂ ಓಡಾಡಿಸುತ್ತಿದ್ದಾರೆ.ಎರಡು ಜೊತೆ ಚಪ್ಪಲಿ ಸವೆದವು. ತಮ್ಮ ಆಭಿಮಾನಿ ಈರಪ್ಪ ಎಲಿಗಾರ.ಕಲಕೇರಿ ತಾ:ಮುಂಡರಗಿ.ಜಿಲ್ಲಾ ಗದಗ.ಪೋನ ನಂ 8123803380
ಮಧ್ಯವರ್ತಿಗಳು ಎಲ್ಲೆಡೆ ಇರುತ್ತಾರೆ ಆದರೆ ಅವರನ್ನು ಕಚೇರಿಯೊಳಗೆ ಬಿಟ್ಟುಕೊಳ್ಳದೇ ಹೊರಗೆ ಕಳಿಸಬೇಕು.
ಅಧಿಕಾರಿಗಳು ಯಾವುದೇ ಕಾರಣಕ್ಕೂ ವಿಳಂಬ ಮಾಡದೇ, ಶೀಘ್ರವಾಗಿ ಕಡತಗಳನ್ನು ವಿಲೇವಾರಿ ಮಾಡಬೇಕು. ವಿಳಂಬ ನೀತಿ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತದೆ.
ಕೆಎಎಸ್ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ, ಪ್ರಾಮಾಣಿಕವಾಗಿ ಮಾಡಬೇಕು. ಕೆಎಎಸ್ ಅಧಿಕಾರಿಗಳ ಸಂಘಕ್ಕೆ ನೂರು ವರ್ಷಗಳ ಇತಿಹಾಸವಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ರಾಜ್ಯಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಸಾಮಾಜಿಕ, ಆರ್ಥಿಕ , ಮೂಲಭೂತ ಸೌಕರ್ಯಗಳು, ಕೈಗಾರಿಕೆಗಳ ಬೆಳವಣಿಗೆಗೆ ಕಾರಣೀಭೂತಗಿದ್ದಾರೆ. ಅವರ ಕಾಲದಲ್ಲಿ ದಿವಾನರಾಗಿದ್ದವರು ಸಂಘದ ಅಧ್ಯಕ್ಷರಾಗಿದ್ದರು ಎನ್ನುವುದು ಈ ಸಂಘದ ಹೆಗ್ಗಳಿಕೆ. ಅವರೆಲ್ಲರು ದಕ್ಷ ಆಡಳಿತದ ಮೂಲಕ ನಮಗೆ ದಾರಿದೀಪವಾಗಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ ಹಾಗೂ ಶಾಸಕಾಂಗ ಒಟ್ಟಾಗಿ ಕೆಲಸ ಮಾಡಬೇಕು. ಈ ಎರಡೂ ಜನರ ಪ್ರತಿನಿಧಿಗಳಾಗಿ ಜನರ ಹಿತವನ್ನು ಕಾಪಾಡುವುದು ನಮ್ಮ ಕರ್ತವ್ಯ.
ನಿಮಗೆ ನಿವೃತ್ತರಾಗುವವರೆಗೆ ಜನಸೇವೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶವಿದೆ. ಅಸಮಾನತೆ ಇರುವ ಸಮಾಜದಲ್ಲಿ ದುರ್ಬಲ ವರ್ಗಕ್ಕೆ ಸ್ಪಂದಿಸಬೇಕು. ಅಧಿಕಾರಿಗಳಿಗೆ ಕಾನೂನಿನ ಅರಿವಿನ ಜೊತೆಗೆ ಬಡವರ ಕಾಳಜಿ, ಸಮಾಜದ ಬಗ್ಗೆ ಅರಿವು ಇರಬೇಕು. ಆಗ ಮಾತ್ರ ಜನರಿಗೆ ಸ್ಪಂದಿಸಲು ಸಾಧ್ಯ.
ನಮ್ಮ ಕೆಲಸವನ್ನು ನಾವು ಪ್ರೀತಿಸಬೇಕು. ಗ್ರಾಮೀಣ ಜನರನ್ನು ಪ್ರೀತಿಯಿಂದ ಮಾತನಾಡಿಸಿ ಅವರ ಸಮಸ್ಯೆ ಅರ್ಥೈಸಿಕೊಂಡು ಬಗೆಹರಿಸಿದರೆ ಅವರು ನಿಮ್ಮನ್ನು ಮರೆಯುವುದಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ. ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾಯಿಸಲಾಗುತ್ತಿದೆ.
ಸರ್ಕಾರ ರೂಪಿಸುವ ನೀತಿಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವಲ್ಲಿ ಅಧಿಕಾರಿಗಳ ಪಾತ್ರ ಹಿರಿದು. ಜನಸೇವೆಗೆ ದೊರಕಿರುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು. ತೃಪ್ತಿದಾಯಕವಾಗಿ ಕೆಲಸ ಮಾಡಿರುವುದಕ್ಕಿಂತ ದೊಡ್ಡ ಪ್ರಮಾಣಪತ್ರ ಇನ್ನೊಂದಿಲ್ಲ. ಈ ಬಗ್ಗೆ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜೀವನ ಸಾರ್ಥಕವಾಗಿ ಸೇವೆ ತೃಪಿಕರವಾಗಿ ಮಾಡಿದ್ದೇನೆ ಎಂಬ ಭಾವನೆ ನಿಮ್ಮಲ್ಲಿ ಇರಬೇಕು.
ಪದೋನ್ನತಿ ಬಗ್ಗೆ ಕಂದಾಯ ಸಚಿವರು ಕಾರ್ಯೋನ್ಮುಖರಾಗಿದ್ದು, ಶ್ರೀಘ್ರವಾಗಿ ಪದೋನ್ನತಿ ಆಗಲಿದೆ. ಶೇ. 33% ಅಧಿಕಾರಿಗಳನ್ನು ಸಿಇಒಗಳಾಗಿ ಬಡ್ತಿ ನೀಡಲು ಸರ್ಕಾರ ಕ್ರಮ ವಹಿಸಲಿದೆ.
- ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಒಕ್ಕೂಟ ಸಂಘವು ಆಯೋಜಿಸಿದ್ದ ಸಮಾರಂಭದಲ್ಲಿ ನನ್ನ ಮಾತುಗಳು