ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರ ಗ್ರಾಮಪಂಚಾಯಿತಿಗೆ ಜಿಲ್ಲಾ ಐಇಸಿ ಸಂಯೋಜಕರೊಂದಿಗೆ ಭೇಟಿ ನೀಡಿ ವಿ ಬಿ-ಜಿ ರಾಮ್ ಜಿ ಯೋಜನೆ ಕುರಿತು ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚಿ ಮಾಹಿತಿ ನೀಡಲಾಯಿತು.
ಪಿರಿಯಾಪಟ್ಟಣ ತಾಲ್ಲೂಕು ಅತ್ತಿಗೋಡು ಗ್ರಾಪಂ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರೌಢಶಾಲೆ 2025-26ನೇ ಸಾಲಿನ ಸ್ವಚ್ಛ ವಿದ್ಯಾಲಯ ಪುರಸ್ಕಾರ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದೆ.
ಈ ಶಾಲೆಯ ಅಭಿವೃದ್ಧಿಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 49 ಲಕ್ಷ ರೂ. ನಷ್ಟು ವೆಚ್ಚದಲ್ಲಿ ಕೊಡುಗೆ ನೀಡಲಾಗಿದೆ.
ವಿಕಸಿತ ಭಾರತ್ - ಗ್ಯಾರೆಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್ -ಗ್ರಾಮೀಣ (ವಿಬಿ ಜಿ ರಾಮ್ ) ಯೋಜನೆಯ ಕೂಲಿ ಮೊತ್ತ ಹೆಚ್ಚಳವಾಗಿರುವ ಕುರಿತು ಹಾಗೂ ಯೋಜನೆ ಸೌಲಭ್ಯ ಕುರಿತು ಪ್ರಜಾಸತ್ಯ ಮತ್ತು ಪ್ರತಿನಿಧಿ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿರುವುದು.
ಮಾನ್ಯ ಉಪ ಕಾರ್ಯದರ್ಶಿ(ಅಭಿವೃದ್ಧಿ ಅವರು ತಾಲ್ಲೂಕಿನ ಬೆಟ್ಟದತುಂಗ ಮತ್ತು ಅತ್ತಿಗೋಡು, ಕಿತ್ತೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮ-ನರೇಗಾದಿಂದ ಅನುಷ್ಠಾನಗೊಂಡಿರುವ ಮೆಟ್ಲಿಂಗ್ ರಸ್ತೆ, ಶಾಲಾ ಕಾಂಪೌಂಡ್, ಅಡುಗೆ ಕೋಣೆ, ಸೋಪಾನಕಟ್ಟೆ, ಸ್ವ.ಭಾ.ಮಿ ಯೋಜನೆಯಡಿ ಅನುಷ್ಠಾನಗೊಂಡಿರುವ ಬೂದು ನೀರು ನಿರ್ವಹಣೆ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಸಹಾಯಕ ನಿರ್ದೇಶಕರು(ಪಂ ರಾ) ಹಾಗೂ ಕೂಸಿನಮನೆ ನೋಡಲ್ ಅಧಿಕಾರಿಗಳಾದ ವಸಂತಲಕ್ಷ್ಮೀ ಅವರು ಕೋಮಲಾಪುರ ಹಾಗೂ ಭುವನಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಆರಂಭಿಸಿರುವ ಕೂಸಿನಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಕೋಮಲಾಪುರ ಗ್ರಾಪಂ PDO ಅವಿನಾಶ್, ಭುವನಹಳ್ಳಿ ಗ್ರಾಪಂ SDA ಶೀನ, ತಾಲ್ಲೂಕು ಐಇಸಿ ಸಂಯೋಜಕ ರವಿಕುಮಾರ್ ಹಾಜರಿದ್ದರು.
ಪಿರಿಯಾಪಟ್ಟಣ ತಾಲ್ಲೂಕಿನ ಬೈಲುಕುಪ್ಪೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಂದಿಗುಡ್ಡ ಕಾವಲ್ ಹಾಡಿಯಲ್ಲಿ ದುಡಿಯೋಣ ಬಾ ಹಾಗೂ ಜಾಬ್ ಕಾರ್ಡ್ ಮೇಳ ವಿಶೇಷ ಅಭಿಯಾನ ಹಮ್ಮಿಕೊಂಡು ನರೇಗಾ ಯೋಜನೆ ಕುರಿತು ಮಾಹಿತಿ ನೀಡಲಾಯಿತು.
ಉದ್ಯೋಗ ಚೀಟಿ ಮಾಡಿಸಿಕೊಳ್ಳಲು ಬೇಕಾದ ದಾಖಲೆಗಳ ಮಾಹಿತಿ ನೀಡಿ, ಜಾಬ್ ಕಾರ್ಡ್ ಮಾಡಿಸಿಕೊಳ್ಳುವಂತೆ ಮನವಿ ಮಾಡಲಾಯಿತು.
ಪಿರಿಯಾಪಟ್ಟಣ ತಾಲ್ಲೂಕು ಚೌತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ತಿ, ಹಳೆಕೆರೆ ಹಾಡಿಗೆ ಭೇಟಿ ನೀಡಿ ದುಡಿಯೋಣ ಬಾ ಹಾಗೂ ಸ್ತ್ರೀ ಚೇತನ ವಿಶೇಷ ಅಭಿಯಾನ ನಡೆಸಲಾಯಿತು.
ಮ-ನರೇಗಾ ಯೋಜನೆಯಡಿ ಉದ್ಯೋಗ ಹಾಗೂ ವೈಯಕ್ತಿಕ ಸೌಲಭ್ಯ ಪಡೆದುಕೊಳ್ಳಲು ಉದ್ಯೋಗಚೀಟಿ ಅಗತ್ಯವಾಗಿದ್ದು, ಅಗತ್ಯ ದಾಖಲೆ ನೀಡಿ ಉದ್ಯೋಗ ಚೀಟಿ ಪಡೆದುಕೊಳ್ಳುವಂತೆ ವಿವರಿಸಲಾಯಿತು.
ಪಿರಿಯಾಪಟ್ಟಣ ತಾಲ್ಲೂಕು ಬೈಲುಕುಪ್ಪೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಂದಿಗುಡ್ಡ ಕಾವಲ್ ಹಾಡಿಯಲ್ಲಿ "ದುಡಿಯೋಣ ಬಾ ಹಾಗೂ ಜಾಬ್ ಕಾರ್ಡ್ ಮೇಳ ವಿಶೇಷ ಅಭಿಯಾನ" ಹಮ್ಮಿಕೊಂಡು ನರೇಗಾ ಯೋಜನೆ ಕುರಿತು ಮಾಹಿತಿ ನೀಡಲಾಯಿತು.
ಈ ಸಂದರ್ಭ ಪಿಡಿಓ ಬೋರೆಗೌಡ, ಗ್ರಾಪಂ ಅಧ್ಯಕ್ಷರಾದ ರಘು, ಉಪಾಧ್ಯಕ್ಷರಾದ ಎಲಿಜಬೆತ್, ಐಇಸಿ ಸಂಯೋಜಕ ರವಿಕುಮಾರ್ ಇದ್ದರು.
ಜಾಬ್ ಕಾರ್ಡ್ ವಿತರಣೆ ಮಾಡುವ ಮೂಲಕ ಸಹಾಯಕ ನಿರ್ದೇಶಕ(ಪಂ.ರಾ)ರಾದ ವಸಂತಲಕ್ಷ್ಮೀ ಅವರು ಸ್ತ್ರೀ ಚೇತನ ಅಭಿಯಾನಕ್ಕೆ ಚಾಲನೆ ನೀಡಿದರು.
ಎನ್. ಆರ್.ಎಲ್.ಎಂ ತಾಲ್ಲೂಕು ಮೇಲ್ವೀಚಾರಕಿ ರೋಜಿ, ತಾಲ್ಲೂಕು ಐಇಸಿ ಸಂಯೋಜಕ ರವಿಕುಮಾರ್.ಡಿ, ಎಲ್.ಸಿ.ಆರ್.ಪಿ, ಕೃಷಿ ಸಖಿ, ಪಶು ಸಖಿಗಳು ಹಾಜರಿದ್ದರು.
ಮಾನ್ಯ ಮುಖ್ಯಮಂತ್ರಿಗಳ ಕಾರ್ಯಕ್ರಮದ ನಿಮಿತ್ತ ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವರಾದ ಕೆ.ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಪಿರಿಯಾಪಟ್ಟಣ ತಾ. ಪಂ ಸಭಾಂಗಣದಲ್ಲಿ ಇಂದು ಪೂರ್ವಭಾವಿ ಸಭೆ ನಡೆಸಲಾಯಿತು.ವೇದಿಕೆಯಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿ. ಪಂ ಸಿಇಓ ಎಸ್.ಯುಕೇಶ್ ಕುಮಾರ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಹಂಡಿತವಳ್ಳಿ ಗ್ರಾಮ ಪಂಚಾಯಿತಿಯ ದೊಡ್ಡಕೆರೆಯನ್ನು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ. ಮುಂಗಾರು ಮಳೆಗೆ ಸಂಪೂರ್ಣ ಭರ್ತಿಯಾಗಲಿದ್ದು,ಅಂತರ್ಜಲದ ಹೆಚ್ಚಳದ ಜೊತೆಗೆ ಜಾನುವಾರುಗಳ ನೀರಿನ ಬವಣೆ ತಪ್ಪಿಸಲು ಸಹಕಾರಿಯಾಗಲಿದೆ.