ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ವಿಧಾನಸೌಧ ಆವರಣದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿಯನ್ನು ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲು ಆದೇಶ ಹೊರಡಿಸಿರುವುದು ಎಲ್ಲಾ ಬಸವಾಭಿಮಾನಿಗಳಿಗೆ ಹರ್ಷ ತಂದಿದೆ. @BSYBJP@CMofKarnataka
ಟಿವಿ ನೋಡುವ ಹೆಚ್ಚಿನ ಕನ್ನಡಿಗರು ಇವತ್ತು:
"ಇಂದು ಪದ್ಮಾವತ್ ಚಿತ್ರ ಕನ್ನಡದಲ್ಲಿ ಬರುತ್ತಿದೆ..ನೋಡಬೇಕು"
ಅದರಲ್ಲಿ ವಿಶೇಷ ಏನಿದೆ? ಅಲ್ವಾ..
ಒಂದು ವೇಳೆ ಟೈಟಾನಿಕ್, ಬಾಷಾ..ಚಿತ್ರಗಳು ಬಂದಾಗಲೂ ಕೂಡ ಕನ್ನಡದಲ್ಲಿ ಕೊಟ್ಟಿದ್ದರೆ ಹೀಗೆಯೇ ನೋಡುತ್ತಿದ್ದರು.
ದಶಕಗಳ ಕಾಲ ಕನ್ನಡಿಗರ ಆಯ್ಕೆ ಸ್ವಾತಂತ್ರ್ಯ ಕಸಿದದ್ದು ನಾಡದ್ರೋಹ..ಅದು ವಿಶೇಷ.
ಬುದ್ಧ ಬೋಧಿಸಿದ ಪ್ರಮುಖ ಮೂರು ತತ್ವಗಳು - ಸಮತಾ, ಕರುಣಾ, ಪ್ರಜ್ಞಾ.
ಸಾಮಾಜಿಕ ಸಮಾನತೆ, ಸಕಲಜೀವರಾಶಿಗಳಲ್ಲಿ ದಯೆ, ಜ್ಞಾನೋದಯಕ್ಕೆ ಕಾರಣವಾದ ಅರಿವು. ಈ ಮೂರು ಅಂಶಗಳು ನಮ್ಮ ಜೀವನದಲ್ಲಿ ಮುಖ್ಯ. ಬುದ್ಧ ಮತ್ತು ಬಸವಣ್ಣನವರ ವಿಚಾರಗಳಲ್ಲಿ ಸಾಕಷ್ಟು ಸಾಮ್ಯತೆ ಇದೆ.
ಬುದ್ಧ ಪೂರ್ಣಿಮೆಯ ಶುಭಾಶಯಗಳು
#BuddhaPurnima2021#BuddhaPurnima
ಮಹಾಂತ ಜೋಳಿಗೆಯ ಹರಿಕಾರ ಪೂಜ್ಯ ಶ್ರೀ ಮಹಾಂತ ಶಿವಯೋಗಿಗಳ ಲಿಂಗೈಕ್ಯ ಸಂಸ್ಮರಣೆ.
ದುಶ್ಚಟಗಳಿಗೆ ಬಲಿಯಾಗುವುದರ ವಿರುದ್ಧ ಪೂಜ್ಯರು ಅಂದು ಹೋರಾಡಿದ್ದರು. ಈ ಕೊರೊನಾ ಸಂಕಷ್ಟ ಪರಿಸ್ಥಿತಿಯಲ್ಲಿ ಅವರ ಹೋರಾಟ ಬಹಳ ಪ್ರಸ್ತುತವಾಗಿದೆ. ನಮ್ಮ ಆಂತರಿಕ ಆರೋಗ್ಯ ಬಹಳ ಮುಖ್ಯವಾಗಿದೆ.
ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು.
ತಮ್ಮ ವಚನಗಳ ಮೂಲಕವೇ ಸಮಾಜದಲ್ಲಿ ಬೆಳಕು ತಂದವರು ಬಸವಣ್ಣನವರು. ಮೇಲು ಕೀಳು ಎಂಬ ಭೇದ ಬಹಳಷ್ಟು ತೀವ್ರವಾಗಿದ್ದ ಕಾಲದಲ್ಲಿ ಬಸವಣ್ಣನವರು ತಮ್ಮ ವಚನಗಳ ಮೂಲಕವೇ ಸಮಾಜ ತಿದ್ದುವ ಕೆಲಸ ಮಾಡಿದರು. ಕ್ರಾಂತಿಯ ಬೀಜ ಬಿತ್ತಿದರು.
#BasavaJayanti
“ಅಂಜಿದಡೆ ಮಾಣದು, ಅಳುಕಿದಡೆ ಮಾಣದು....ಕಕ್ಕುಲತೆಗೆ (ಚಿಂತೆಗೆ) ಅಗದು ನೋಡಾ. ಧೃತಿಗೆಟ್ಟು, ಮನ ಧಾತುಗೆಟ್ಟಡೆ ಅಪ್ಪುದು ತಪ್ಪದು” – ವಿಶ್ವಗುರು ಬಸವಣ್ಣನವರು. ಅಂಜುವುದರಿಂದ ನಮ್ಮ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ. ಹಾಗಾಗಿ ಧೈರ್ಯದಿಂದ ಈ #ಕೊರೊನಾ ಸಂಕಷ್ಟ ಪರಿಸ್ಠಿತಿಯನ್ನು ನಾವೆಲ್ಲ ಒಗ್ಗಟ್ಟಾಗಿ ಎದುರಿಸೋಣ.#BasavaJayanti