ಕಂದಾಯ ಇಲಾಖೆಯಲ್ಲಿ ಭೂ ಮಾಪಕರ ಪಾತ್ರ ಪ್ರಮುಖವಾದದ್ದು. ಭೂ ಮಾಪಕರ ಮುಷ್ಕರದಿಂದ ಕಡತಗಳು ವಿಲೇವಾರಿಯಾಗದೆ ಸ್ಥಗಿತಗೊಂಡಿದೆ. ಹದ್ದುಬಸ್ತು, 11 E ಸ್ಕೆಚ್, ಜಮೀನು ಸರ್ವೇ, ಗಡಿ ಗುರುತು ಹಾಗೂ ಇತರೆ ಭೂ ದಾಖಲೆ ಸಿಗದೇ ರೈತರು ಪರದಾಡುವ ಸ್ಥಿತಿ ಬಂದಿದೆ. ಹದ್ದುಬಸ್ತು, 11 E ಸ್ಕೆಚ್ ಸಿಗದೇ ರೈತರಿಗೆ ಬ್ಯಾಂಕ್ ಸಾಲ ಸಿಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಜಾಮೀನು ವ್ಯಾಜ್ಯಗಳು ಹೆಚ್ಚುತ್ತಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಸಹ ಕರ್ನಾಟಕ ಲೋಕ ಸೇವಾ ಆಯೋಗದಿಂದ (KPSC) 750 ಭೂಮಾಪಕರ ನೇಮಕಾತಿ ಆಗುವ ಲಕ್ಷಣಗಳು ಕಾಣುತ್ತಿಲ್ಲ.
ಕಂದಾಯ ಇಲಾಖೆಯ ಬೆನ್ನೆಲುಬಾದ ಭೂ ಮಾಪಕರ ಕಥೆ ಹೇಳ ತೀರದಂತಾಗಿದೆ. ಇತ್ತ, ಭೂಮಾಪಕರ ಅನುಪಸ್ಥಿತಿಯಿಂದ ರೈತರಿಗೂ ತೊಂದರೆಯಾಗುತ್ತಿದೆ.
ಹಗಲು ರಾತ್ರಿ ಎನ್ನದೆ ಕಳೆದ ಎರಡು ದಶಕಗಳಿಂದ ಸೇವೆ ಮಾಡುತ್ತಿರುವ ಪರವಾನಗಿ ಭೂಮಾಪಕರ ಸೇವೆಯನ್ನು ಸರ್ಕಾರ ಖಾಯಂ ಗೊಳಿಸಿ ಅವರ ಕುಟುಂಬಗಳಿಗೆ ಆಸರೆಯಾಗಲಿ.
@Vijayavani_Digi I @CMofKarnataka I @AKSSAofficial I
ಸುಶಿಕ್ಷಿತ ಯುವ ಜನತೆಗೆ ಉದ್ಯೋಗ ನೀಡಿ...
ರಾಜ್ಯದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿಯಿದ್ದರೂ ನೇಮಕಾತಿ ಮಾಡದ ರಾಜ್ಯ ಸರ್ಕಾರದ ವಿರುದ್ಧ ಯುವ ಜನತೆಯ ಆಕ್ರೋಶ...
#CongressFailsKarnataka
ರಾಜ್ಯದಲ್ಲಿ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ.
ಪೋಲಿಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ನಿವೃತ್ತ ನೌಕರರಿಗೆ ಭರ್ತಿ ಮಾಡ್ತಿದ್ದಾರೆ.
ಪೋಲಿಸ್ ಉದ್ಯೋಗಕ್ಕಾಗಿ ಕಾದು ಕುಳಿತಿರುವ ಲಕ್ಷಾಂತರ ಯುವಕರ ಬಾಯಿಗೆ @INCKarnataka ಮಣ್ಣು ಹಾಕಿದೆ.
ಗೃಹ ಸಚಿವರೇ ಏನಿದು, ಮತ್ತೊಂದು ಮೋಸ ❓
@KARGOVTJOBUTS@AKSSAofficial
ನುಡಿದಂತೆ ನಡೆಯುವ ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ಸಾವಿರಾರು ಖಾಲಿ ಹುದ್ದೆಗಳ ನೇಮಕಾತಿಗೆ ಮುಂದಾಗಿದೆ.
ಆರೋಗ್ಯ ಇಲಾಖೆಯಲ್ಲಿ 2500, ವಿಶ್ವವಿದ್ಯಾಲಯಗಳಲ್ಲಿ 1000, ಶಾಲಾ ಶಿಕ್ಷಕರ 15,000 ಹುದ್ದೆಗಳು ಹಾಗೂ ವಿವಿಧ ಇಲಾಖೆಗಳಲ್ಲಿ 54,432 ಹುದ್ದೆಗಳ ನೇಮಕಾತಿಗೆ ಮುಂದಾಗಿದೆ.
ಒಳ ಮೀಸಲಾತಿ ವಿಚಾರವಾಗಿ ಇದ್ದ ಗೊಂದಲ ನಿವಾರಿಸಿ ನೇಮಕಾತಿ ಪ್ರಕ್ರಿಯೆ ಹಾದಿ ಸುಗಮಗೊಳಿಸಲಾಗಿದೆ.
ಥೂ....! ನಿಮ್ಮ ಈ ಸುಳ್ಳಿನ ಸರಕಾರಕ್ಕೆ...
ಯಾವ ನೇಮಕಾತಿ ಮಾಡದೇ, ನೇಮಕಾತಿ ಮಾಡಿರುವ ಹಾಗೆ ಜಾಹಿರಾತು ಕೊಡ್ತತ್ತಾ ದಿನಗಳನ್ನು ಮುಂದೆ ತಳ್ಳುತ್ತಿರುವ ನಿಮ್ಮ ಸರ್ಕಾರಕ್ಕೆ ಯುವಕರ ಕಡೆಯಿಂದ ಧಿಕ್ಕಾರವಿರಲಿ🧐
@BJP4Karnataka@INCKarnataka ನೀವು ಮೊದಲು ಬಿದಿಗಿಳಿದು ಪ್ರತಿಭಟನೆ ಮಾಡಿ ನಂತರ ಕಾಂಗ್ರೆಸ್ ನ ವಿರೋಧ ಮಾಡಿ.....
ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡಿ ಯಾಕೆ ಯುವಕರನ್ನು ದಾರಿ ತಪ್ಪಿಸತೀರಾ...
ಸ್ವಲ್ಪಾನಾದ್ರೂ ವಿರೋಧ ಪಕ್ಷದತರಾ ನಡೆದುಕೊಳ್ಳಿ....
ವಿದ್ಯಾರ್ಥಿಗಳ ಬಳಿ ಹಣ ಲೂಟಿ ಮಾಡಲು ಲಕ್ಷಾಂತರ ಹುದ್ದೆ ಖಾಲಿ ಇದ್ದರೂ ಕೇವಲ 6 ಹುದ್ದೆಗಳಿಗೆ ನೇಮಕಾತಿ
ಪರೀಕ್ಷಾ ಶುಲ್ಕ 750 ಇದು ಗ್ರಾಮೀಣ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆ
6 ಪೋಸ್ಟ್ ನೇಮಕಾತಿ ಇದು ಯಾವ ಸೀಮೆ ನೇಮಕಾತಿ ಎಸ್ಟೇ ಪೋಸ್ಟ್ ಇದ್ದರೂ ಲಕ್ಷ ಲಕ್ಷ ಅಪ್ಲಿಕೇಶನ್ ಹೋಗ್ತವೆ
@KEA_karnataka ಪರೀಕ್ಷಾ ಶುಲ್ಕ ಕಡಿಮೆ ಮಾಡಿ.
ಸರಕಾರಕ್ಕೆ ನೇಮಕಾತಿ ಮಾಡುವ ಯಾವುದೇ ಆಸಕ್ತಿ ಇಲ್ಲ, ಯಾವ ಪುರುಷಾರ್ಥಕ್ಕೆ ನಾಳೆ ಮೂರು ವರ್ಷದ ಸಾಧನ ಸಮಾವೇಶ ಮಾಡಬೇಕು?
ಪ್ರಗತಿಯತ್ತ ಕರ್ನಾಟಕ ಅಂತೆ, ಪ್ರಗತಿ ಎಲ್ಲಿದೆ?
ಅಭಿವೃದ್ಧಿಯಲ್ಲಿ ಶೂನ್ಯ ರೀ ಶೂನ್ಯ!
ಕನ್ನಡದ Gen Z ಹುಡುಗರು ನೇಮಕಾತಿಗಾಗಿ ಮತ್ತೊಮ್ಮೆ ಬೀದಿಗೆ ಇಳಿಯುವ ಮುನ್ನ ನೇಮಕಾತಿ ಆರಂಭ ಮಾಡಿ!!!
ಏನಾದರೂ ಜಾಗತಿಕ ಸುಳ್ಳಿನ ಸೂಚ್ಯಂಕ ಇದ್ದಿದ್ದರೆ ಮೊದಲ ಸ್ಥಾನಕ್ಕೆ ಅರ್ಹತೆ ಪಡೆಯುತ್ತಿದ್ದ @INCKarnataka 👏
ಅಭಿನಂದನೆಗಳು..
👆 ನಿಮ್ಮ 3 ವರ್ಷಗಳ ಈ ಅಪೂರ್ವ ಸಾಧನೆ ವರ್ಣಿಸಲು ಪದಗಳಿಲ್ಲ.
1 ವಾರದಲ್ಲಿ ನೇಮಕಾತಿ ಎನ್ನುತ್ತ ಯಶಸ್ವಿಯಾಗಿ 3 ವರ್ಷ ಪೂರೈಸಿದ ಸಾಧನೆ.
ನಾಳಿನ ನಿಮ್ಮ ಸಾಧನೆಯ ಸಾಧನ ಸಮಾವೇಶಕ್ಕೆ ಅಭಿನಂದನೆಗಳು !!
“ಮಾಡೋಕೆ ಕೆಲಸ ಇಲ್ಲದೆ, ಬೆಕ್ಕಿನ ಬಾಲ ಬೋಳಿಸಿದನಂತೆ” - ಈ ಗಾದೆ ಮಾತು ಅಕ್ಷರಶಃ ನಮ್ಮ ಅವಿದ್ಯಾವಂತ, ಅನಕ್ಷರಸ್ಥ ಶಿಕ್ಷಣ ಸಚಿವ @Madhu_Bangarapp ಅವರಿಗೆ ಹೇಳಿ ಮಾಡಿಸಿದಂತಿದೆ.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತಾಂಡವವಾಡುತ್ತಿದೆ. ಶಿಕ್ಷಕರ ನೇಮಕಾತಿಗೆ ಗ್ರಹಣ ಹಿಡಿದಿದೆ. ಅದೆಷ್ಟೋ ಉದ್ಯೋಗಾಕಾಂಕ್ಷಿಗಳು ಆಸೆಗಣ್ಣಿನಿಂದ ಕಾದು ಕುಳಿತಿದ್ದಾರೆ.
ಆದರೆ ನೇಮಕಾತಿಯ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದೆ, ಹಿಜಾಬ್ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯ ಹಂತದಲ್ಲಿದ್ದರೂ, ಹಿಜಾಬ್ ಧರಿಸಲು ಆತುರಾತುರವಾಗಿ ಅವಕಾಶ ನೀಡಿದ್ದಾರೆ.
ಶಿಕ್ಷಣ ಇಲಾಖೆಯನ್ನು ಓಲೈಕೆ ರಾಜಕಾರಣಕ್ಕೆ ಬಳಸಿಕೊಂಡಿರುವುದು ತುಷ್ಟೀಕರಣದ ರಾಜಕಾರಣದ ಸುಸ್ಪಷ್ಟ ನಿದರ್ಶನ.
#CongressFailsKarnataka
ಸರ್ವೋಚ್ಛ ನ್ಯಾಯಾಲಯದಲ್ಲಿ ಶಾಲಾ ಮಕ್ಕಳು ಹಿಜಾಬ್ ಧರಿಸಬಹುದೇ ಇಲ್ಲವೇ ಎಂಬುವ ವಿಷಯದ ಪ್ರಕರಣ ಬಾಕಿ ಇರುವ ಸಂದರ್ಭದಲ್ಲಿ ಶಾಲಾ ಮಕ್ಕಳು ತಮ್ಮ ಸಮವಸ್ತ್ರದೊಂದಿಗೆ ಹಿಜಾಬ್ ಕೂಡ ಧರಿಸಬಹುದು ಎಂದು ಸುತ್ತೋಲೆ ಹೊರಡಿಸಿರುವ ಕರ್ನಾಟಕ ಸರ್ಕಾರದ ನಿಲುವು ಅಲ್ಪಸಂಖ್ಯಾತರ ಮತ ಬ್ಯಾಂಕ್ ಅನ್ನು ಭದ್ರಪಡಿಸಿಕೊಳ್ಳುವ ಮತ್ತೊಂದು ಪ್ರಯತ್ನ.
ಸರ್ವೋಚ್ಚ ನ್ಯಾಯಾಲಯದಲ್ಲಿ ಸದರಿ ಪ್ರಕರಣ sub-judice ಇರುವ ಸಂದರ್ಭದಲ್ಲೇ ಸಿದ್ದರಾಮಯ್ಯ ಸಂಪುಟದ ಮುಕುಟಮಣಿಗಳು ಹಿಜಾಬ್ ಧರಿಸಿ ಶಾಲೆಗೆ ಹೋಗಬಹುದು ಎಂಬ ಸುತ್ತೋಲೆ ಹೊರಡಿಸಿದ್ದಾರೆ.
ಸರ್ಕಾರದ ತರ್ಕಾನುಸಾರವೇ ಮುಸಲ್ಮಾನ ಹೆಣ್ಣು ಮಕ್ಕಳಿಗೆ ಹಿಜಾಬ್ ಧರಿಸಬಹುದಾದರೆ ಹಿಂದೂಗಳಿಗೆ ಕೇಸರಿ ಶಾಲನ್ನು ಧರಿಸಲು ಅವಕಾಶ ನೀಡಬೇಕು ಹಾಗೂ ಹಿಂದೂ ವಿದ್ಯಾರ್ಥಿ ಸಮೂಹಕ್ಕೆ ನಾನೆ ಸ್ವತಃ ಕೇಸರಿ ಶಾಲನ್ನು ಕೊಡುವ ವ್ಯವಸ್ಥೆಯನ್ನು ಮಾಡುತ್ತೇನೆ. ಮುಸಲ್ಮಾನ ಹೆಣ್ಣುಮಕ್ಕಳು ಹಿಜಾಬ್ ಧರಿಸಿಬಹುದಾದರೆ, ಎಲ್ಲ ಶಾಲಾ ಕಾಲೇಜುಗಳಲ್ಲಿ ಗಣಪತಿಯ ಹಾಗೂ ಸರಸ್ವತಿಯ ಮೂರ್ತಿಯನ್ನಿಟ್ಟು ನಿತ್ಯ ಪೂಜೆ ಮಾಡುವ ವ್ಯವಸ್ಥೆಯನ್ನು ಕಲ್ಪಿಸುತ್ತೇವೆ.
ಪಶ್ಚಿಮ ಬಂಗಾಲ, ಅಸ್ಸಾಂ ನಲ್ಲಿ ಆದ ಹಿಂದೂ ಮತಗಳ ಕ್ರೋಡೀಕರಣದಿಂದ ಕಾಂಗ್ರೆಸ್ ಪಕ್ಷದ ಧುರೀಣರ ನಿದ್ದೆಗೆಡಿಸಿದೆ. ಶಾಲಾ ಮೂಲಸೌಕರ್ಯ, ಶಿಕ್ಷಣದ ಗುಣಮಟ್ಟ, ಶಿಕ್ಷಕರ ನೇಮಕಾತಿ, ಸಕಾಲದಲ್ಲಿ ಶೂ-ಸಾಕ್ಸ್, ಪಠ್ಯಪುಸ್ತಕ ವಿತರಿಸಬೇಕಾಗಿದ್ದ ಸರ್ಕಾರ ತನ್ನ ಆದ್ಯತೆಗಳನ್ನು ಬದಿಗಿಟ್ಟು ಹಿಜಾಬ್ ಧರಿಸುವುದಕ್ಕೆ ಅನುಮತಿ ನೀಡಿರುವುದು ಇವರ ಖುರ್ಚಿಯ ಕಾಲುಗಳು ನಡುಗುತ್ತಿವೆ ಎಂಬುದಕ್ಕೆ ಸಾಕ್ಷಿ.
ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಗೆ ಯುವ ಮತದಾರರು ಬುದ್ದಿ ಕಲಿಸುವುದು ನಿಶ್ಚಿತ.
@tv9kannada I @AsianetNewsSN I @IndiaToday I
@prajavani I @CMofKarnataka I @KannadaRepublic I
@VistaraNews I
ಉದ್ಯೋಗಾಕಾಂಕ್ಷಿಗಳು ಉದ್ಯೋಗ ನೀಡುವಂತೆ ನಿರಂತರವಾಗಿ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ನೇಮಕಾತಿ ನಡೆಸದೆ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ.
ಉದ್ಯೋಗ ಕೊಡಿ, ದುಡಿದು ತಿನ್ನುತ್ತೇವೆ ಎಂದು ಯುವ ಸಮೂಹ ಆಕ್ರೋಶ ವ್ಯಕ್ತಪಡಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಮಾತ್ರ ಅಧಿಕಾರದ ಕಿತ್ತಾಟ, ದಕ್ಷಿಣ ಭಾರತ, ಉತ್ತರ ಭಾರತ ಎಂದು ಧ್ರುವೀಕರಣದ ರಾಜಕೀಯದಲ್ಲಿ ನಿರತವಾಗಿದೆ.
#CongressFailsKarnataka