ಇವರಿಗೆ,
ಮಾನ್ಯ ಶ್ರೀ ಸಿದ್ಧರಾಮಯ್ಯನವರು
@siddaramaiah
ಸನ್ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು
ಮಾನ್ಯರೆ,
384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯದ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಸತತ ಚಳವಳಿ ಸಂಘಟಿಸುತ್ತ ಬಂದಿರುವುದು ತಮಗೆ ತಿಳಿದ ವಿಷಯ. ಈ ಕುರಿತು ವಿಧಾನಮಂಡಲದ ಉಭಯ ಸದನಗಳಲ್ಲಿ ಚರ್ಚೆಯೂ ನಡೆದಿದೆ. ಚರ್ಚೆಯ ನಂತರ ಉತ್ತರ ನೀಡುವ ಸಂದರ್ಭದಲ್ಲಿ ಈ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ನ್ಯಾಯಾಲಯದ ತೀರ್ಪಿನ ನಂತರವೂ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವ ಸನ್ನಿವೇಶ ನಿರ್ಮಾಣವಾದರೆ ಸರ್ವಪಕ್ಷ ಸಭೆ ಕರೆದು ಸೂಕ್ತ ತೀರ್ಮಾನ ಕೈಗೊಂಡು ನ್ಯಾಯ ಒದಗಿಸುವುದಾಗಿ ನೀವು ಭರವಸೆ ನೀಡಿದ್ದಿರಿ. ಈಗ ಅಂತಹ ಸಂದರ್ಭ, ಸನ್ನಿವೇಶ ನಿರ್ಮಾಣವಾಗಿದೆ.
ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ನೀಡಲಾದ ಪ್ರಶ್ನೆಪತ್ರಿಕೆಯಲ್ಲಿ ಸುಮಾರು 80 ಪ್ರಶ್ನೆಗಳು ದೋಷಪೂರಿತವಾಗಿದ್ದಲ್ಲದೆ, ಸುಮಾರು 30ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವೇ ಇರಲಿಲ್ಲ. ಈ ಕುರಿತು ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ ಹಲವು ವಿದ್ಯಾರ್ಥಿಗಳು ಮೊರೆ ಹೋಗಿದ್ದರು. ಇತ್ತೀಚಿಗಷ್ಟೇ ಕರ್ನಾಟಕ ಆಡಳಿತ ನ್ಯಾಯಮಂಡಳಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ತೀರ್ಪು ನೀಡಿ ಅರ್ಜಿಯನ್ನು ವಿಲೇವಾರಿ ಮಾಡಿತ್ತು. ವಿದ್ಯಾರ್ಥಿಗಳು ಎತ್ತಿತೋರಿಸುತ್ತಿರುವ ದೋಷಪೂರಿತ ಪ್ರಶ್ನೆಗಳನ್ನು ಮತ್ತೊಮ್ಮೆ ತಜ್ಞರ ಸಮಿತಿ ಮುಂದೆ ಇಟ್ಟು ಸೂಕ್ತ ನಿರ್ಧಾರ ಕೈಗೊಳ್ಳಿ ಎಂದು ಕೆಪಿಎಸ್ಸಿಗೆ ಕೆಎಟಿ ಆದೇಶ ನೀಡಿತ್ತು. ಇದು ಕಣ್ಣೊರೆಸುವ ತೀರ್ಪು ಮಾತ್ರವಲ್ಲ, ವಿದ್ಯಾರ್ಥಿಗಳಿಗೆ ಮಾಡಿದ ಘೋರ ಅನ್ಯಾಯವಾಗಿತ್ತು. ಕಳ್ಳನ ಕೈಗೆ ಕೀಲಿ ಕೊಟ್ಟರೆ ಏನಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕೆಎಟಿ ಆದೇಶ ನೀಡಿದ ಮೇಲೂ ಕೆಪಿಎಸ್ಸಿ ಮುಖ್ಯ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಬರುವ ಮೇ.3ರಿಂದ ಪರೀಕ್ಷೆಗಳು ನಡೆಯಲಿವೆ.
ಕೆಎಟಿ ನೀಡಿದ ಆದೇಶವನ್ನು ಪ್ರಶ್ನಿಸಿ ಅನೇಕ ವಿದ್ಯಾರ್ಥಿಗಳು ಕರ್ನಾಟಕದ ಉಚ್ಛ ನ್ಯಾಯಾಲಯದ ಮೊರೆ ಹೋದರು. ಕರ್ನಾಟಕ ರಕ್ಷಣಾ ವೇದಿಕೆಯೂ ಸಹ ಹಲವು ವಿದ್ಯಾರ್ಥಿಗಳಿಂದ ಒಂದು ರಿಟ್ ಪಿಟಿಷನ್ ಹಾಕಿಸಿತು. ಇವತ್ತು ಅಂದರೆ, ದಿನಾಂಕ 24-4-2025ರಂದು ಈ ಎಲ್ಲ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಈ ಅರ್ಜಿಗಳನ್ನು ಸಲ್ಲಿಸಿದ ಎಲ್ಲ 32 ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ಒದಗಿಸಿ ಆದೇಶ ನೀಡಿದೆ.
ಆದರೆ ದುರದೃಷ್ಟದ ವಿಷಯವೆಂದರೆ ಈ ವಿದ್ಯಾರ್ಥಿಗಳಿಗೆ ಸಿಕ್ಕಿರುವ ಅವಕಾಶ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿರುವ 70 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಿಕ್ಕಿಲ್ಲ. ಇದೊಂದು ರೀತಿಯ ವಿಲಕ್ಷಣ ಸನ್ನಿವೇಶ. ಪರೀಕ್ಷೆಯಲ್ಲಿ ಅನ್ಯಾಯವಾಗಿರುವ ಕಾರಣಕ್ಕಾಗಿಯೇ ಹೈಕೋರ್ಟ್ 32 ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆಯಲ್ಲಿ ಬರೆಯುವ ಅವಕಾಶ ಒದಗಿಸಿದೆ. ಹಾಗಿದ್ದ ಮೇಲೆ ಉಳಿದ 70 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಏನು ಪಾಪ ಮಾಡಿದ್ದರು? ಈ ಎಲ್ಲ 70 ಸಾವಿರ ವಿದ್ಯಾರ್ಥಿಗಳು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವೇ? ಹೈಕೋರ್ಟ್ ಮುಂದೆ ಬರದ ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆ ಬರೆಯುವ ಅವಕಾಶ ಇಲ್ಲವೆಂದರೆ ಅವರೇನು ಮಾಡಬೇಕು? ಕೊನೆಯ ಪಕ್ಷ ಈಗಲಾದರೂ ಹೈಕೋರ್ಟ್ ಬಾಗಿಲು ತಟ್ಟೋಣ ಎಂದರೆ ಅವರಿಗೆ ಕಾಲಾವಕಾಶವೂ ಇಲ್ಲ.
ಮಾನ್ಯ ಮುಖ್ಯಮಂತ್ರಿಗಳೇ,
ಆಗಿರುವ ಅನ್ಯಾಯ ಎಲ್ಲರಿಗೂ ಗೊತ್ತಿದೆ, ನ್ಯಾಯಾಲಯವೂ ಅದೇ ನಿಟ್ಟಿನಲ್ಲಿ ಅರ್ಜಿದಾರರಿಗೆ ಮುಖ್ಯ ಪರೀಕ್ಷೆ ಬರೆಯುವ ಅವಕಾಶ ನೀಡಿದೆ. ಹೀಗಿರುವಾಗ ಅನ್ಯಾಯವಾಗಿರುವ 70 ಸಾವಿರ ವಿದ್ಯಾರ್ಥಿಗಳನ್ನು ಮುಖ್ಯ ಪರೀಕ್ಷೆಯಿಂದ ಹೊರಗೆ ಇಡುವುದು ಅತ್ಯಂತ ಘೋರ ಅನ್ಯಾಯವಾಗುತ್ತದೆ. ಇದು ಸಲ್ಲದು. ನಿಮ್ಮಂಥ ಜನಪರ ಮುಖ್ಯಮಂತ್ರಿಯಾಗಿರುವಾಗ ಇಂಥ ಅನ್ಯಾಯಗಳು ನಡೆಯಕೂಡದು.
ದಯಮಾಡಿ ಈಗಲಾದರೂ ಈ ಬಡಪಾಯಿ ವಿದ್ಯಾರ್ಥಿಗಳ ಕಡೆ ನಿಮ್ಮ ಗಮನ ಹರಿಸಿ. ನೀವೇ ಹೇಳಿದ್ದ ಮಾತನ್ನು ಉಳಿಸಿಕೊಳ್ಳಿ. ಕೂಡಲೇ ಸರ್ವಪಕ್ಷ ಸಭೆ ಕರೆದು ಸೂಕ್ತ ತೀರ್ಮಾನ ತೆಗೆದುಕೊಳ್ಳಿ. ಅದಕ್ಕೂ ಮುನ್ನ ಮೇ.3ರಿಂದ ನಡೆಯಬೇಕಿರುವ ಮುಖ್ಯ ಪರೀಕ್ಷೆಯನ್ನು ಕೂಡಲೇ ಸ್ಥಗಿತಗೊಳಿಸಿ.
ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಮಾತ್ರ ಅನ್ಯಾಯವಾಗಿದೆ ಎಂದು ಭಾವಿಸಬೇಡಿ, ಕನ್ನಡಕ್ಕೆ ಅನ್ಯಾಯವಾಗಿದೆ, ಕನ್ನಡತನಕ್ಕೆ ಅನ್ಯಾಯವಾಗಿದೆ. ಕನ್ನಡ ಮಾಧ್ಯಮದಲ್ಲಿ ಓದುವ ಗ್ರಾಮೀಣ ಭಾಗದ ಮಕ್ಕಳು, ಶೋಷಿತ ಸಮುದಾಯಗಳ ಮಕ್ಕಳಿಗೆ ಅನ್ಯಾಯವಾಗಿದೆ. ನಿಮ್ಮ ಸುತ್ತ ಇರುವ ಹೊಟ್ಟೆ ತುಂಬಿದ ಅಧಿಕಾರಶಾಹಿಯ ಮಾತು ಕೇಳಬೇಡಿ. ಅವರಿಗೆ ಬಡವರ ಮಕ್ಕಳೆಂದರೆ ತಾತ್ಸಾರ. ಅಂಥವರು ಯಾವತ್ತಿಗೂ ಸಾಮಾನ್ಯ ಜನರ ನೋವಿಗೆ ಸ್ಪಂದಿಸಲಾರರು. ನೀವು ಜನರಿಂದ ಆಯ್ಕೆಯಾದವರು. ಜನರ ದುಃಖ ದುಮ್ಮಾನಗಳನ್ನು ನೀವು ಬಲ್ಲವರು. ಹೀಗಾಗಿ ಕೂಡಲೇ ಆಗಿರುವ ಅನ್ಯಾಯವನ್ನು ಸರಿಪಡಿಸಿ. ನೋಟಿಫಿಕೇಷನ್ ರದ್ದು ಮಾಡಿ ಹೊಸದಾಗಿ ನೋಟಿಫಿಕೇಷನ್ ಹೊರಡಿಸಿ ಎಂದು ಆಗ್ರಹಿಸುತ್ತೇನೆ.
ಆದರಪೂರ್ವಕವಾಗಿ
ತಮ್ಮ ವಿಶ್ವಾಸಿ
(ಟಿ.ಎ.ನಾರಾಯಣಗೌಡ)
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ
ಅನರ್ಹ ಸದಸ್ಯರು ಅರ್ಹರಿಗೆ ಹೇಗೆ ಸಂದರ್ಶನ ನಡೆಸಲು ಸಾಧ್ಯ - ಹೈ ಕೋರ್ಟ್.
ವಿಚಾರಣೆಯಲ್ಲೇ ಇಷ್ಟು ವಿಷಯ ಹೊರಬರುತ್ತಿದ್ದರೆ,CBI ತನಿಖೆ ಆದರೆ ಎಷ್ಟು ಹೊರಬರಬಹುದು.
KPSC ಯನ್ನು ಒಮ್ಮೆ ಸ್ವಚ್ಛ ಮಾಡಲು ಇದೇ ಸುವರ್ಣವಕಾಶ. ಎಲ್ಲರೂ CBI ತನಿಖೆಗೆ ಆಗ್ರಹಿಸಲು ಬೆಂಬಲಿಸಿ.ಧನ್ಯವಾದಗಳು @prajavani 🙏 #KPSCmosa
ಕೆಪಿಎಸ್ಸಿ ಅನ್ಯಾಯದ ವಿರುದ್ಧ ಹೋರಾಟ ರೂಪಿಸಲು ಇಂದು ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ನಗರ ಘಟಕದ ಸಭೆ ಏರ್ಪಡಿಸಲಾಗಿತ್ತು. ಹೋರಾಟವನ್ನು ತೀವ್ರಗೊಳಿಸಬೇಕು ಎಂಬ ತೀರ್ಮಾನವನ್ನು ಕೈಗೊಳ್ಳಲಾಯಿತು.
ಈಗ ನಾವು ಮತ್ತೊಂದು ಹೋರಾಟಕ್ಕೆ ಸಜ್ಜಾಗೋಣ. ಸೋಮವಾರದಿಂದಲೇ ಆಹೋರಾತ್ರಿ ಧರಣಿ ಆರಂಭಿಸೋಣ. ಸರ್ಕಾರ ಕೆಎಎಸ್ ಪರೀಕ್ಷೆ ಮರು ಅಧಿಸೂಚನೆ ಹೊರಡಿಸುವವರೆಗೆ ನಮ್ಮ ಹೋರಾಟ ನಿಲ್ಲಿಸುವುದು ಬೇಡ.
ಸರ್ಕಾರದ ಪರವಾಗಿ ಮುಖ್ಯಮಂತ್ರಿಗಳು ಸೋಮವಾರ ಹೇಳಿಕೆ ನೀಡುತ್ತಾರೆ ಎಂದು ಕಾನೂನು ಸಚಿವರಾದ ಎಚ್.ಕೆ.ಪಾಟೀಲರು ವಿಧಾನ ಪರಿಷತ್ ನಲ್ಲಿ ಹೇಳಿದ್ದಾರೆ. ಸೋಮವಾರ ಮರು ಅಧಿಸೂಚನೆಯ ಘೋಷಣೆ ಹೊರಬೀಳದೇ ಇದ್ದಲ್ಲಿ ನಮ್ಮ ಹೋರಾಟ ತೀವ್ರಗೊಳಿಸೋಣ.
ಸೋಮವಾರದಿಂದ ನಡೆಯುವ ಪ್ರತಿಭಟನೆಯಲ್ಲಿ ರಾಜ್ಯದ ಪ್ರಮುಖ ಸಾಹಿತಿಗಳು, ಸಂಘಸಂಸ್ಥೆಗಳ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ. ಸೋಮವಾರ ಬೆಳಿಗ್ಗೆ 10 ಗಂಟೆಗೆ ಅನ್ಯಾಯಕ್ಕೆ ಒಳಗಾದ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಸ್ವಾತಂತ್ರ್ಯ ಉದ್ಯಾನವನದಲ್ಲಿ ನಮ್ಮನ್ನು ಕೂಡಿಕೊಳ್ಳಲು ಮನವಿ ಮಾಡುತ್ತೇನೆ. ಆಹೋರಾತ್ರಿ ಚಳವಳಿಯಾದ್ದರಿಂದ ನಿಮಗೆ ಸಣ್ಣಪುಟ್ಟ ಅನಾನುಕೂಲವಾಗಬಹುದು. ಆದರೆ ಚಳವಳಿಯಲ್ಲಿ ಇದೆಲ್ಲ ಸಾಮಾನ್ಯ. ಛಲ ಬಿಡದೇ ಹೋರಾಡೋಣ, ಎಲ್ಲರೂ ಬನ್ನಿ.
#KPSCMosa #KPSCDroha #KPSC @siddaramaiah@DKShivakumar@HKPatilINC@MBPatil@RAshokaBJP
ದಿನಾಂಕ 25.02.2025 ರಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗೆ ನಡೆಯಲಿರುವ ಪರೀಕ್ಷೆಯನ್ನು ಆಂಗ್ಲದಲ್ಲಿ ಬರೆಯಬೇಕು ಎಂದು ಕರ್ನಾಟಕ ಲೋಕ ಸೇವಾ ಆಯೋಗವು ಅಭ್ಯರ್ಥಿಗಳಿಗೆ ನೀಡಿರುವ ಪ್ರವೇಶ ಪತ್ರದಲ್ಲಿ ನಮೂದಿಸಿದೆ.
ಅರ್ಹತಾದಾಯಕ ಕನ್ನಡ ಪತ್ರಿಕೆಯನ್ನು ಹೊರತುಪಡಿಸಿ ಉಳಿದ ಎಲ್ಲ ಪ್ರಶ್ನೆ ಸಹಿತ ಉತ್ತರ ಪುಸ್ತಿಕೆಗಳಲ್ಲಿನ ಪ್ರಶ್ನೆಗಳು ಆಂಗ್ಲ ಭಾಷೆಗಳಲ್ಲಿ ಇರುವ ಕಾರಣ ನಿಯಮಾನುಸಾರ ಆಂಗ್ಲಭಾಷೆಯಲ್ಲಿಯೇ ಬರೆಯತಕ್ಕದ್ದು ಎಂದು ಹೇಳಿದೆ.
ಇದು ಕನ್ನಡ ಮಾಧ್ಯಮ ಪರೀಕ್ಷಾರ್ಥಿಗಳಿಗೆ ಮಾಡುತ್ತಿರುವ ಮತ್ತೊಂದು ಅನ್ಯಾಯ. ಲೋಕ ಸೇವಾ ಆಯೋಗವು ಪ್ರಶ್ನೆ ಪತ್ರಿಕೆಯನ್ನು ಕನ್ನಡದಲ್ಲೂ ನೀಡಬೇಕು ಹಾಗೂ ಕನ್ನಡದಲ್ಲೇ ಉತ್ತರ ಬರೆಯಲು ಅವಕಾಶ ಕೊಡಬೇಕು. ಆಯೋಗವು ನಡೆಸುವ ಯಾವುದೇ ಪರೀಕ್ಷೆಯಲ್ಲಿ ಪ್ರಶ್ನೆಗಳು ಕನ್ನಡದಲ್ಲಿರಬೇಕು ಹಾಗೂ ಕನ್ನಡಲ್ಲೇ ಉತ್ತರ ಬರೆಯಲು ಅವಕಾಶ ನೀಡಬೇಕು. ಭಾಷಾಂತರ ಮಾಡಲು ಸಂಪನ್ಮೂಲದ ಕೊರತೆ, ಸಮಯಾವಕಾಶದ ಕೊರತೆ ಎಂದು ಕಾರಣ ನೀಡಿದರೆ ಆಯೋಗದ ಅಸಮರ್ಥತೆ ಮತ್ತೊಮ್ಮೆ ಬಯಲಾಗುತ್ತದೆ. ಕನ್ನಡ ಮಾಧ್ಯಮದ ಪರೀಕ್ಷಾರ್ಥಿಗಳಿಗೆ ಮೋಸ, ಅನ್ಯಾಯ ಆಗದಂತೆ ಆಯೋಗವು ಎಚ್ಚರವಹಿಸಲಿ
@Prash_devadig I #KPSCMosa I @AKSSAofficial I
@prajavani I @HosadiganthaWeb I @OneindiaKannada
KAS 2024 ರ PRELIMS ಫಲಿತಾಂಶ
ಬಿಡುಗಡೆ ಮಾಡುವುದರೊಂದಿಗೆ,
KAS ಮರು ಪರೀಕ್ಷೆ ದೋಷಗಳಿಗೆ ಕೃಪಾಂಕ ನೀಡದೆ, Ratio ಕೂಡ ಹೆಚ್ಚಿಸಲು ಹೋಗದೆ,
ನಾವು ಕನ್ನಡವನ್ನು ಕೊಲ್ಲುತ್ತೇವೆ,
ಕತ್ತು ಹಿಚುಕಿ ಅಮುಕುತ್ತೇವೆ,
ನಮ್ಮನ್ನು ಹೇಳುವವರು ಕೇಳುವವರು
ಯಾರು ಇಲ್ಲ,
ಇಲ್ಲಿ ನಮ್ಮದೇ ಸಾಮ್ರಾಜ್ಯ,
ಶಕ್ತಿ ಇದ್ದರೆ ಕಾಪಾಡಿಕೊಳ್ಳಿಯೆಂದು
ಈ ಮೂಲಕ ಪರೋಕ್ಷವಾಗಿ KPSC ಸವಾಲೆಸೆದಿದೆ,
ಇದು
ಆಕಾಂಕ್ಷಿಗಳು V/S KPSC ಅಲ್ಲ,
ಇದು,
ಕನ್ನಡ V/S KPSC!
ಹೊರಾಡಲು ಸಿದ್ಧರಾಗಿ,
ಮೊಳಗಲಿ ಸಮರ ಕಹಳೆ📯!
ಇದೇ 18ನೇ ತಾರೀಕಿನಂದು ಒಂದ್ 10,000 ಸಾವಿರ ಜನ Freedom Park ಗೆ ಬಂದು ಬಿಡ್ರಪ್ಪಾ ದಶಕಗಳ ಕಷ್ಟ ನೀಗುತ್ತದೆ! 🔥
ಕಾಲ ಕೂಡಿ ಬಂದಿದೆ,
ಕಬ್ಬಿಣ ಕಾದಿದೆ,
ಹಾಕಿ ಸರಿಯಾಗಿ ಬಡಿಯೋಣ!
ಜೈ ಕರ್ನಾಟಕ! 🔥
@vinaygb@RekhaBasavaraju@ChekrishnaCk@AKSSAofficial@kanthakumarr@prajavani@kpscadda@Kavirajlyricist@karnatakaparty1@SuhasDuga@pbilimale #KAS2024 #KPSCMOSA #KASREEXAM
ಈ ಕೂಡಲೇ ಈ ಕೆಳಕಂಡ ವಿಷಯಗಳ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ಕರ್ನಾಟಕ ಲೋಕಸೇವಾ ಆಯೋಗವನ್ನು AKSSA ಸಂಘಟನೆಯು ಒತ್ತಾಯಿಸುತ್ತಿದೆ. @KpscSecretary@siddaramaiah
✴️ ಅಕ್ಟೋಬರ್ 20ರಂದು ನಿಗದಿಯಾಗಿರುವ ಕಲ್ಯಾಣ ಕರ್ನಾಟಕ ವೃಂದದ ಗ್ರೂಪ್ ಬಿ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ನಡೆಸುವುದು ಅಥವಾ ಮುಂದೂಡುವುದರ ಬಗ್ಗೆ ಈವರೆಗೂ ಕರ್ನಾಟಕ ಲೋಕಸೇವಾ ಆಯೋಗವು ಯಾವುದೇ ಸ್ಪಷ್ಟನೆ ನೀಡಿರುವುದಿಲ್ಲ.
✴️ ಉಳಿಕೆ ಮೂಲ ವೃಂದದ(RPC) AC SAAD ಹುದ್ದೆಗಳ ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿರುವುದಿಲ್ಲ ಆದರೆ ಮುಖ್ಯ ಪರೀಕ್ಷೆಯನ್ನು ಡಿಸೆಂಬರ್ 17 ರಿಂದ ನಡೆಸಲು ದಿನಾಂಕ ನಿಗದಿಗೊಳಿಸಲಾಗಿದೆ. ಇನ್ನೆರಡು ದಿನಗಳ ಒಳಗೆ ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಬೇಕು.
ಈ ಎರಡು ವಿಷಯಗಳ ಬಗ್ಗೆ ಕೂಡಲೇ ಆಯೋಗದ ಕಾರ್ಯದರ್ಶಿಗಳು ಸ್ಪಷ್ಟನೆಯನ್ನು ನೀಡಬೇಕೆಂದು ಸಂಘಟನೆಯ ಒತ್ತಾಯವಾಗಿದೆ.
@DKShivakumar@CMofKarnataka@siddaramaiah
"ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ?
ಜಲಸಂಪನ್ಮೂಲ ಇಲಾಖೆಯಲ್ಲಿ WRD AE/JE 1020 ಹುದ್ದೆಗಳು ಖಾಲಿ ಉಳಿದಿದ್ದು ಕೇವಲ 94 ಹುದ್ದೆಗಳನ್ನು ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಅನುಮೋದಿಸಿ ಅಧಿಸೂಚನೆ ಹೊರಡಿಸಲು ವಿನಂತಿಸಿಕೊಳ್ಳುತ್ತೇವೆ
@KEA_karnataka ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಉಳಿದಿದ್ದ 670 ಹುದ್ದೆಗಳಿಗೆ ಪರೀಕ್ಷೆ ನಡೆಸಿ ವರ್ಷವಾಗುತ್ತಾ ಬಂದಿದೆ ಇನ್ನೂ ಕೂಡ ಅಂತಿಮ ಪಲಿತಾಂಶ ಪ್ರಕಟಗೊಂಡಿಲ್ಲ ಸ್ವಲ್ಪ ಬದ್ಧತೆ ಇದ್ದಾರೆ ಕೂಡಲೇ ಪಲಿತಾಂಶ ಬಿಡುಗಡೆಗೊಳಿಸಿ ;
ಇಲ್ಲದಿದ್ದರೆ ಮುಂದಿನ ದಿನದಲ್ಲಿ ವಿದ್ಯಾರ್ಥಿಗಳ ಆಕ್ರೋಶವನ್ನು ಎದುರಿಸಬೇಕಾಗುತ್ತದೆ
@drmcsudhakar
ಕೆಪಿಎಸ್ಸಿ ಪರೀಕ್ಷೆಯ ಗೊಂದಲಗಳ ನಡುವೆ ಹಠಕ್ಕೆ ಬಿದ್ದವರಂತೆ ಪರೀಕ್ಷೆ ನಡೆಸಿದ್ದ ರಾಜ್ಯ ಸರ್ಕಾರ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ನ್ಯೂನತೆ ಬಯಲಾದ ಬೆನ್ನಲ್ಲೇ ಮತ್ತೆ ಮರು ಪರೀಕ್ಷೆಗೆ ಆದೇಶ ಹೊರಡಿಸಿ ಸಾವಿರಾರು ಪರೀಕ್ಷಾರ್ಥಿಗಳ ಶಾಪಕ್ಕೆ ಗುರಿಯಾಗಿತ್ತು.
ಇದೀಗ ಅಂತದ್ದೇ ಮತ್ತೊಂದು ಎಡವಟ್ಟು ಮಾಡಲು ಸರ್ಕಾರ ಮುಂದಾಗಿದೆ. ಸೆಪ್ಟೆಂಬರ್ 22ರಂದು ಯುಪಿಎಸ್ಸಿ ಹಾಗೂ ಎಸ್.ಎಸ್.ಸಿ ಪರೀಕ್ಷೆಗಳ ದಿನಾಂಕ ನಿಗದಿಯಾಗಿದ್ದು, ಅದೇ ದಿನ ಪಿಎಸ್ಐ ಪರೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಉದ್ಯೋಗಾಕಾಂಕ್ಷಿಗಳ ವಿರೋಧಿ ಧೋರಣೆ ಅಲ್ಲದೆ ಬೇರೇನೂ ಅಲ್ಲ.
ವಿವಿಧ ಗ್ರೂಪ್ ಬಿ ಹುದ್ದೆಗಳಿಗೆ ಸೆಪ್ಟೆಂಬರ್ 14 ಮತ್ತು 15ರಂದು ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೆಪ್ಟೆಂಬರ್ 5 ರಂದೇ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಕೆಲವು ಅಭ್ಯರ್ಥಿಗಳ ಪರೀಕ್ಷಾ ಕೇಂದ್ರಗಳ ಹಂಚಿಕೆಯಲ್ಲಿಯೂ ವ್ಯತ್ಯಯ ಕಂಡುಬಂದಿದ್ದು ತಾತ್ಕಾಲಿಕವಾಗಿ ಪ್ರವೇಶ ಪತ್ರದ ಡೌನ್ಲೋಡ್ ಪ್ರಕ್ರಿಯೆಯನ್ನೂ ಸಹ ಸ್ಥಗಿತಗೊಳಿಸುವ ಮೂಲಕ ಕೆಪಿಎಸ್ಸಿ ಹಾಗೂ ಸರ್ಕಾರದ ಹುಳುಕು ಬಯಲಾಗಿದೆ.
ಉದ್ಯೋಗವನ್ನು ಅರಸಿ ಪರೀಕ್ಷೆಗಳನ್ನು ಬರೆಯುವ ಉದ್ಯೋಗಾಕಾಂಕ್ಷಿಗಳನ್ನು ಮತ್ತೊಮ್ಮೆ ಸಂಕಷ್ಟಕ್ಕೆ ದೂಡುವ ಮುನ್ನವೇ ರಾಜ್ಯದ ಸರ್ಕಾರ ಸೆಪ್ಟೆಂಬರ್ 22 ರಂದು ನಡೆಸಲು ನಿರ್ಧರಿಸಿರುವ ಪಿಎಸ್ಐ ಪರೀಕ್ಷೆ ಮುಂದೂಡಿಕೆ ಮಾಡಿ ಹಾಗೂ ಗ್ರೂಪ್ ಬಿ ಹುದ್ದೆಗಳ ಪರೀಕ್ಷೆಯ ಪ್ರವೇಶ ಪತ್ರ ಹಾಗೂ ಪರೀಕ್ಷಾ ಕೇಂದ್ರಗಳ ಗೊಂದಲ ನಿವಾರಿಸಿ ಪರೀಕ್ಷಾರ್ಥಿಗಳಿಗೆ ತೊಂದರೆಗಳಾಗದಂತೆ ಎಚ್ಚರ ವಹಿಸುವಂತೆ ಆಗ್ರಹಿಸುತ್ತೇನೆ.
2 December to make people aware of the modern slavery that works against human https://t.co/1xhGkRODMV this modern days also the slavery system is (continue)going on Karnataka licence surveyor plz save us from this slavery. #saveLicensesurveyorfromslayery#AbolitionOfSlavery
@RAshokaBJP ಬಹು ವರ್ಷಗಳಿಂದ ಇಲಾಖೆಗೆ,ರೈತರಿಗೆ ಸೇವೆ ಸಲ್ಲಿಸುತ್ತಿದ್ದರೂ ನಮ್ಮ ಕನಿಷ್ಠ ಮೂಲಭೂತ ಬೇಡಿಕೆಗಳನ್ನು ಈಡೇರಿಸದಿರುವುದು ವಿಷಾದನೀಯ. ಇತ್ತೀಚಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಇಲಾಖೆಗೆ ಸೇರಿಕೊಂಡ ಯುವ ಪರವಾನಿಗಿ ಭೂಮಾಪಕರ ಭವಿಷ್ಯ ಹೇಳತೀರದಾಗಿದೆ. @BSBommai@CMofKarnataka@RAshokaBJP@PMOIndia