"ಡೈರೆಕ್ಟರ್ ಪ್ರೇಮ್ ಸರ್ ರವರು
ನಮ್ಮ ದೂರದ ಸಂಬಂಧಿಕರು,
ಧ್ರುವ ಸರ್ಜಾರವರು
ನಮ್ಮ ಅರ್ಜುನ್ ಸರ್ಜಾರವರ
ಅಳಿಯ,
ಹಾಗೂ ನಮಗೆ ದೂರ ದೂರದ ಸಂಬಂಧಿ.
ಪ್ರೇಮ್ ರವರು ಸತತ
ಸೋಲುಗಳಿಂದ ಕಂಗೆಟ್ಟಿದ್ದರು,
ಧ್ರುವರವರಿಗೆ ಒಂದು
ದೊಡ್ಡ ಗೆಲುವು ಬೇಕಾಗಿತ್ತು.
ಹಾಗಾಗಿ,
ಧ್ರುವ ರವರು ನನಗೆ
ಖುದ್ದಾಗಿ ಕರೆ ಮಾಡಿ,
"K. D ಬಗ್ಗೆ Review ಬರೀರಿ"
ಅಂದ್ರು,
ನಾನು ಇಲ್ಲ ಸರ್ ನಾನು ಬರಿಯಲ್ಲ ಅಂದೆ.
ಅದಕ್ಕೆ,
ಪ್ರೇಮ್ ರವರು Conference call
ನಲ್ಲಿ ಬಂದು,
"ನೋಡಿ ಪ್ರವೀಣ, ಅದು ಎಷ್ಟಾಗುತ್ತದೋ ಆಗ್ಲಿ, ಪ್ರೋಡೂಸರ್ ರವರು Pay ಮಾಡೋಕೆ ರೆಡಿ ಇದ್ದಾರೆ. So ಒಂದ್ ನಾಲ್ಕ್ ಸಾಲ್ ಬರೀರಿ ಅಂದ್ರು"
ನಾನು ಸರಿ ಸರ್ ಅಣ್ಕೊಂಡು ಈ ಕೆಳಗಿನ Review ಬರದೆ."
ಎಂದು ಕೆಲವರು ತಪ್ಪಾಗಿ ಭಾವಿಸಿದ್ದಾರೆ.
ಆತ್ಮೀಯರೇ,
ಜೋಗಿ ಮತ್ತು ರಾಜ್ ನನ್ನ ಫೇವರಿಟ್ ಸಿನಿಮಾಗಳಲ್ಲಿ Top ನಲ್ಲಿ ನಿಲ್ಲುತ್ತವೆ.
ರಾಜ್ ನಲ್ಲಿ ಅಪ್ಪುರವರ ಪಾತ್ರ ಇನ್ನೂ ಕಾಡುತ್ತದೆ. ನಟನಾಗುವ ದೊಡ್ಡ ಬಯಕೆಯ ಅಮಾಯಕ ಯುವಕನ ಪಡಿಪಾಟಲನ್ನ ಎದೆಯ ಕವಾಟ ಬಡಿಯುವಂತೆ ಪ್ರೇಮ್ ಕಟ್ಟಿಕೊಟ್ಟಿದ್ದರು.
ಹಾಗಾಗಿ,
ಆ ಜೋಗಿ ಮತ್ತು ರಾಜ್ ದುರ್ಬೀನಿನಿಂದ ಚಿತ್ರ ನೋಡಿದವರಿಗೆ K D ನಿಜಕ್ಕೂ ಇಷ್ಟವಾಗಬಹುದು.
ಜತೆಗೆ,
ಇತ್ತೀಚೆಗೆ 1 ವರ್ಷದಲ್ಲಿ ನಾನು ನೋಡಿದ ಸಿನೆಮಾಗಳಲ್ಲಿ ಈ ಚಿತ್ರಕ್ಕೆ ಬಿದ್ದ ಶಿಳ್ಳೆ-ಚಪ್ಪಾಳೆ-ಕೇಕೆಗಳು ಬೇರೆ ಚಿತ್ರಕ್ಕೆ ಬಿದ್ದಿಲ್ಲ.
ಆದ್ದರಿಂದ ನಾನು ಈ ರಿವೀವ್ ಬರೆಯಲೇ ಬೇಕಾಯಿತೇ ಹೊರತು,
ಇಲ್ಲಿ ಅನ್ಯ Settlements ನಡೆದಿಲ್ಲ.
ಭಾವನೆಗಳನ್ನು ಮಾರಿಕೊಳ್ಳುವಂತೆ
ನನ್ನಪ್ಪ ನನ್ನ ಬೆಳೆಸಿಲ್ಲ.
ಉದಯ - ಉಷೆ ಚಾನೆಲಗಳಲ್ಲಿ ಪ್ರತಿದಿನ ಸಂಜೆ ಸಿನಿಮಾ ನೋಡುತ್ತ ಬೆಳೆದ 90's Kid ನಾವು.
ಪ್ರೇಮ್ ಮತ್ತು ಧ್ರುವ ಸರ್ಜಾ ರವರು ನಮ್ಮ ಸಂಬಂಧಿಕರೂ ಅಲ್ಲ.
K D ಕುರಿತು ಅನಿಸಿದ್ದನ್ನು ತಿಳಿಸಿದ್ದೇನೆ.
ಇನ್ನು ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಲು ನೀವು ಸ್ವತಂತ್ರರು.
ಹೋಗೋ ಮುನ್ನ,
ಈ ಕೆಳಗಿನ ಕೆ ಸಿ ಶಿವಪ್ಪರವರ ಸಾಲನ್ನೊಮ್ಮೆ ಓದಿ ಹೋಗಿ...
ಚಿತ್ರಾನ್ನ ಅವನಿಷ್ಟ ಮೊಸರನ್ನ ಇವನಿಷ್ಟ
ಬಾದಾಮಿ ಗೊಡಂಬಿ ಮತ್ತೊಬ್ಬನಿಷ್ಟ
ಅವರವರ ನಾಲಿಗೆಗೆ ಅದರದರ ರುಚಿಬೇರೆ
ತಿನಿಸಂತೆ ರುಚಿ ಭಿನ್ನ - ಮುದ್ದುರಾಮ
-
ಪ್ರವೀಣ ಮ ಮಗದುಮ್ಮ
@directorprems@DhruvaSarja
ರೋಸ್ಟರ್ ಬಿಂದುವನ್ನು ನೇಮಕಾತಿಯಲ್ಲಿ ಅಳವಡಿಸಬೇಕೆಂದು 3A, 3B ವರ್ಗದ ಅಭ್ಯರ್ಥಿಗಳು ಇಂದು ವಿಜಯಪುರದಲ್ಲಿ ಕೈಗೊಂಡಿದ್ದ ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲವಿದೆ. ಸರ್ಕಾರದ ಅತಾರ್ಕಿಕ ನೀತಿಗಳಿಂದ ಈ ವರ್ಗದ ಅಭ್ಯರ್ಥಿಗಳಿಗೆ ಸಾಕಷ್ಟು ಅನ್ಯಾಯವಾಗಲಿದೆ. ಸರ್ಕಾರ ಕೂಡಲೇ ಎಚೆತ್ತುಕೊಂಡು ಇವರಿಗೆ ನ್ಯಾಯ ದೊರಕಿಸಿಕೊಡಲಿ. ಇದಲ್ಲದೆ, ಬಾಕಿ ಇರುವ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಬೇಕು ಹಾಗೂ ನೇಮಕಾತಿಯನ್ನು ಭ್ರಷ್ಟ ಮುಕ್ತವಾಗಿ ನಡೆಸಬೇಕೆಂದು ಆಗ್ರಹಿಸುತ್ತೇನೆ
@AKSSAofficial |