ಎಲ್ಲರೂ @RAshokaBJP@BYVijayendra@Tejasvi_Surya@JanataDal_S@JoshiPralhad ಬೀದಿಗೆ ಬನ್ನಿ ಕೆಎಎಸ್ ಕನ್ನಡ ಮಾಧ್ಯಮದ ಅಭ್ಯರ್ಥಿಗಳ ಪರ ನಿಲ್ಲಿ ಬರೀ ಟ್ವಿಟರ್ ನಲ್ಲಿ ಮಾಧ್ಯಮಗಳ ಮುಂದೆ ಹೇಳಿಕೆ ಬೇಡ ನಿಮ್ಮ ಮೊಸಳೆ ಕಣ್ಣೀರುನಮಗೆ ಬೇಡ ನಿಜವಾಗಿ ನಿಮಗೆ ಕಾಳಜಿ ಇದ್ರೆ ಬನ್ನಿ ಇಲ್ಲದಿದ್ದರೆ ನಮ್ಮ ಬಗ್ಗೆ ಏನೂಮಾತನಾಡದೆ ತೆಪ್ಪಗೆ ಇರಿ
KPSC ಮತ್ತು KAS ನ ಅಕ್ರಮದಲ್ಲಿ,
ಸರ್ಕಾರ ಮತ್ತು ವಿರೋಧ ಪಕ್ಷಗಳ ಆಟ,
"ನೀ ಹೊಡದಂಗೆ ಮಾಡು,
ನಾ ಅತ್ತಂಗ್ ಮಾಡ್ತೀನಿ" ಅನ್ನೋತರ ಇದೆ!
ಎಲ್ರೂ ಕಳ್ರೇ...
ಬಡವರ
ಹಿಂದುಳಿದವರ
.
ಅದರಲ್ಲೂ ವಿದ್ಯಾರ್ಥಿಗಳ ಬೆಳವಣಿಗೆ ಯಾವ ರಾಜಕಾರಣಿಗೂ ಬೇಡ!
ಯಾಕಂದ್ರೆ, ವಿದ್ಯಾರ್ಥಿ ಬೆಳೆದ್ರೆ, ಮುಂದೆ ಪ್ರಶ್ನೆ ಮಾಡ್ತಾನಲ್ಲ!
ಅದ್ಕೆ!
ಶುದ್ಧ, ಕಳ್ಳರ ಸಂತೆ.
"ಮಾನ್ಯರೆ,
@krishnabgowda
LAND SURVEYOR ಪರೀಕ್ಷೆಗೆ ಕೇವಲ 5 ದಿನಗಳು ಮಾತ್ರ ಬಾಕಿಯಿವೆ. ಇದುವರೆಗೆ ಈ ಸಂಬಂಧ ಯಾವುದೇ ಪ್ರೆಸ್ ನೋಟ್ನ್ನು KPSC ಬಿಡುಗಡೆ ಮಾಡಿಲ್ಲ.ಕೊನೆಗೂ MAY 10,11ರಂದು ಪರೀಕ್ಷೆಗಳು ನಡೆಯಲಿವೆಯೋ ಇಲ್ಲವೋ ಎಂಬುದು ಸ್ಪಷ್ಟವಿಲ್ಲ.ದಯವಿಟ್ಟು ಸ್ಪಷ್ಟತೆ ನೀಡಬೇಕು.
ಧನ್ಯವಾದಗಳು."
@secretarykpsc@RekhaTipaturu
#KPSC ಯ ಅನ್ಯಾಯ ಇಡೀ ರಾಜ್ಯದ ತುಂಬ ಸುದ್ದಿಯಾಗಿದ್ದರೂ, ಅನ್ಯಾಯಕ್ಕೆ ಒಳಗಾದ ಕನ್ನಡದ ಮಕ್ಕಳು ಕಣ್ಣೀರಿಡುತ್ತಿದ್ದರೂ,
"ಕೆಪಿಎಸ್ಸಿ ಅದಿರ್ಲಿ" ಎಂಬ ನಿರ್ಲಕ್ಷ್ಯದ ಮಾತು ಆಡುತ್ತಿರುವ @siddaramaiah ಅವರೇ..
ರಾಜ್ಯದ ಮಕ್ಕಳ ನೋವನ್ನು ಕೇಳದ ನೀವು
ಮುಖ್ಯಮಂತ್ರಿ ಸ್ಥಾನಕ್ಕೆ ಅಸಮರ್ಥರು.
#ResignCM@CMofKarnataka@siddaramaiah
ಕನ್ನಡ ಅರ್ಹತಾ ಪ್ರಶ್ನೆ ಪತ್ರಿಕೆಯೋ; ಕನ್ನಡ ಅನರ್ಹತಾ ಪ್ರಶ್ನೆ ಪತ್ರಿಕೆಯೋ ?
ಅಪೂರ್ಣ ವಾಕ್ಯ ರಚನೆ, ಗೊಂದಲಮಯ ಪದಗಳು, ಅರ್ಥವಾಗದ ಪದಪುಂಜ, ಸಾಲು ಸಾಲು ದೋಷಗಳು, ಒತ್ತಕ್ಷರಗಳಿಲ್ಲ, ವ್ಯಾಕರಣ ಶುದ್ದಿಯಂತೂ ಇಲ್ಲವೇ ಇಲ್ಲ.
ಇದು ಮೂರನೇ ತರಗತಿಯೋ, ನಾಲಕ್ಕನೆ ತರಗತಿಯೋ ಓದುವ ಮಗು ಬರೆದಿರುವುದಲ್ಲ
ಇದು ಕನ್ನಡ ಅರ್ಹತಾ ಪರೀಕ್ಷೆಗೆ ಕರ್ನಾಟಕ ಲೋ(ಪ)ಕ ಸೇವಾ ಆಯೋಗ ಕೊಟ್ಟಿರುವ ಪ್ರಶ್ನೆ ಪತ್ರಿಕೆ. ಸದನದಲ್ಲಿ ಸಂಧಿ, ಸಮಾಸ, ಗಣಿತ, ಮಗ್ಗಿ ಪಾಠ ಮಾಡುವ; ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರೂ ಹಾಲಿ ಮುಖ್ಯ ಮಂತ್ರಿಗಳೂ ಆಗಿರುವ ಸಿದ್ದರಾಮಯ್ಯ ನವರ ಆಡಳಿತದಲ್ಲಿ ಆಗುತ್ತಿರುವ ಕನ್ನಡದ ಕಗ್ಗೊಲೆ.
ಆಯೋಗಕ್ಕೆ ಪ್ರಶ್ನೆ ಪತ್ರಿಕೆ ತಯಾರು ಮಾಡುವುದಕ್ಕೆ, ಅರ್ಥಗರ್ಭಿತವಾಗಿ ತರ್ಜುಮೆ ಮಾಡುವುದಕ್ಕೆ ಸಾಧ್ಯವಿಲ್ಲದಿದ್ದರೆ ನನ್ನ ಕಚೇರಿಗೆ ಕೊಡಿ. ನಾವೇ ಆಯೋಗದ ಎಲ್ಲ ನಿಯಮಾವಳಿಗಳನ್ನು ಪೂರೈಸಿ, ಸುರಕ್ಷತೆಗೆ ಧಕ್ಕೆ ಬರದಿರುವ ರೀತಿಯಲ್ಲಿ, ಪರೀಕ್ಷಾರ್ಥಿ ಸ್ನೇಹಿಯಾಗಿ ತಯಾರು ಮಾಡಿಕೊಡುತ್ತೇವೆ. ತನ್ಮೂಲಕ ಕನ್ನಡ ಸೇವೆ ಮಾಡಲು ನಾವು ಸಿದ್ದರಿದ್ದೇವೆ.
ಈ ರೀತಿ ದೋಷಪೂರಿತ ಪ್ರಶ್ನೆ ಪತ್ರಿಕೆ ತಯಾರಿಸಿ ಇದಕ್ಕೆ ಕನ್ನಡ ಅರ್ಹತಾ ಪ್ರಶ್ನೆ ಪತ್ರಿಕೆ ಎಂದು ಹೆಸರಿಟ್ಟು ಅವಮಾನಿಸಬೇಡಿ
@AKSSAofficial I @KannadaPrabha I @tv9kannada I @prajavani
ರಾಜ್ಯ ಕಾಂಗ್ರೆಸ್ ಸರ್ಕಾರ ಕೆಪಿಎಸ್ಸಿ ಕರ್ಮಕಾಂಡಗಳನ್ನು ಮುಚ್ಚಿಹಾಕಲು ಕೆಪಿಎಸ್ಸಿ ಅಭ್ಯರ್ಥಿಗಳ ಮೇಲೆ ದೈಹಿಕ ದೌರ್ಜನ್ಯ ಎಸಗುತ್ತಿದೆ. ಸರ್ಕಾರದ ಅನ್ಯಾಯವನ್ನು ಪ್ರಶ್ನಿಸಿದರೆ ಪೊಲೀಸ್ ಬಲ ಪ್ರಯೋಗಿಸಿ ಜನಧ್ವನಿಯನ್ನು ಅಡಗಿಸುವ ಕೆಲಸಕ್ಕೆ ಕೈ ಹಾಕಿದೆ.
ಒಂದು ಪರೀಕ್ಷೆಯನ್ನು ಸರಿಯಾಗಿ ನಡೆಸಲು ಬಾರದ ಈ ಅಸಮರ್ಥ @INCKarnataka ಸರ್ಕಾರ ಪರೀಕ್ಷಾರ್ಥಿಗಳನ್ನು ಮಾತ್ರ ಹೀನಾಯವಾಗಿ ನಡೆಸಿಕೊಳ್ಳುತ್ತಿದೆ.
#KPSCMosa #WakeUpKarnataka #CongressFailsKarnataka