ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನಾಡಿನ ಹಿತರಕ್ಷಣೆ, ಸರ್ವತೋಮುಖ ಅಭಿವೃದ್ಧಿ ಹಾಗೂ "ಸರ್ವರಿಗೂ ಸಮಬಾಳು, 'ಸರ್ವರಿಗೂ ಸಮಪಾಲು, ಸಾಮಾಜಿಕ ನ್ಯಾಯ' ತತ್ವದಡಿಯಲ್ಲಿ ಸಮಾಜದ ಕಟ್ಟಕಡೆಯ ಪ್ರಜೆಯ ಕಲ್ಯಾಣಕ್ಕಾಗಿ ಶ್ರಮಿಸಲು ಭಗವಂತನು ತಮಗೆ ಪೂರ್ಣ ಶಕ್ತಿ, ಆಯುರಾರೋಗ್ಯ ಕರುಣಿಸಲಿ. ರಾಜ್ಯದ ಒಳಿತಿನ ವಿಷಯದಲ್ಲಿ ನಮ್ಮ ಸಕಾರಾತ್ಮಕ ಸಹಕಾರ ಯಾವಾಗಲೂ ಇರಲಿದ್ದು, ನಿಮ್ಮ ಅಧಿಕಾರಾವಧಿಯು ನಾಡಿಗೆ ಶಾಂತಿ, ಸಮೃದ್ಧಿ ತರಲಿ ಎಂದು ಹಾರೈಸುತ್ತೇನೆ.
ನಿಯೋಜಿತ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಇಂದು ಬೆಳಿಗ್ಗೆ ನಮ್ಮ ಸ್ವಗೃಹಕ್ಕೆ ಆಗಮಿಸಿ, ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಅಭಿನಂದಿಸಿ, ಶುಭ ಹಾರೈಸಲಾಯಿತು.
@DKShivakumar
ಈ ಸಲ ನು Cup ನಮ್ದೇ! 🏆
Back. To. Back.
RCB didn’t just win, they dominated. And when the chase was on, there was only one man it was ever going to end with. Virat Kohli, the chase master!
Two trophies. One dynasty!
#RCB#IPLChampions2026
ಭೂಮಾಪಕರ ಧರಣಿಯಿಂದ ರೈತರಿಗೆ ಬೇಕಾದ ಅಗತ್ಯ ಸೇವೆ ಸಿಗದೇ ಪರದಾಡುತ್ತಿದ್ದಾರೆ. ಇತ್ತ ಸರ್ಕಾರ ಅವರ ಸಮಸ್ಯೆಗಳನ್ನು ಆಲಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯದಲ್ಲಿ 45% ರಷ್ಟು ಭೂ ಮಾಪಕರ ಹುದ್ದೆಗಳು ಖಾಲಿ ಇದೆ. ಈ ಬೇಡಿಕೆಯನ್ನು ಪೂರೈಸಲು ಸರ್ಕಾರ ಸುಮಾರು 4,500 ಖಾಸಗಿ ಭೂಮಾಪಕರನ್ನು (private licensed land surveyors) ನಿಯೋಜಿಸಿದೆ. ಖಾಸಗಿ ಭೂ ಮಾಪಕರ ಪ್ರತಿಭಟನೆಯಿಂದ 5.78 ಲಕ್ಷ ಸರ್ವೇ ಅರ್ಜಿಗಳು ಬಾಕಿ ಉಳಿದಿವೆ.
ಮ್ಯುಟೇಷನ್ ಪೂರ್ವ ನಕ್ಷೆ ತಯಾರಿಕೆ, ತತ್ಕಾಲ್ ಪೋಡಿ ಅಳತೆ, ದರಖಾಸ್ತು ಪೋಡಿ, ಮರುಭೂಮಾಪನ, ಕೆರೆ ಅಳತೆ, ನಾಳ, ವಿದ್ಯುತ್ ಮಾರ್ಗ, ಹೆದ್ದಾರಿ, ಮುಜರಾಯಿ ದೇವಸ್ಥಾನಗಳ ಭೂಮಾಪನವನ್ನು ಇವರು ಮಾಡುತ್ತಿದ್ದಾರೆ. ರೈತರು ಭೂ ಹಕ್ಕು ಸಂಬಂಧಿತ ಪ್ರಕ್ರಿಯೆಗಳು ಇವರ ಸೇವೆಯ ಮೇಲೆ ಅವಲಂಬಿತವಾಗಿದೆ.
ಜಮೀನು ಪೋಡಿ ಮಾಡುವುದು, ನಕ್ಷೆ ಸಿದ್ದಪಡಿಸುವುದು, ಖರೀದಿ ನಕ್ಷೆ, ವಿಭಾಗ ನಕ್ಷೆ, ದಾನಪತ್ರ ನಕ್ಷೆ ಹದ್ದುಬಸ್ತು, ದರಖಾಸ್ತು, 11 E ಕೆಲಸಗಳನ್ನು ಭೂ ಮಾಪಕರು ಮಾಡುತ್ತಿದ್ದಾರೆ. ಸರ್ವೇ ಕೆಲಸ ಇಲ್ಲದ ಸಮಯದಲ್ಲಿ ದಾಖಲೆಗಳ ಡಿಜಟಲೀಕರಣ, ನಿರ್ವಹಣೆ, ಹಿಸ್ಸಾ ತಿದ್ದುಪಡಿ, ಜಾಮೀನು ಒಟ್ಟುಗೂಡಿಸುವಿಕೆ ಕೆಲಸವನ್ನು ಸರ್ಕಾರ ನೀಡುತ್ತದೆ.
ಭೂ ಮಾಪಕರ ಬೇಡಿಕೆಗಳಾಗಿರುವ ಗೌರವಯುತ ಬದುಕು ಮತ್ತು ಸೇವಾ ಭದ್ರತೆಯನ್ನು ಸರ್ಕಾರ ಕೂಡಲೇ ನೀಡಬೇಕು. ಮಾನ್ಯ ಮುಖ್ಯ ಮಂತ್ರಿಗಳಾದ @CMofKarnataka ನವರು ಈ ಹಿಂದೆ ಪ್ರತಿಪಕ್ಷ ನಾಯಕರಾಗಿದ್ದಾಗ ಭೂ ಮಾಪಕರ ಪರ ಧ್ವನಿ ಎತ್ತಿದ್ದರು, ಈಗ 'ಜಾಣ ಕಿವುಡು' ಪ್ರದರ್ಶಿಸುತ್ತಿದ್ದಾರೆ. ಭೂ ಮಾಪಕರ ಧರಣಿಯಿಂದ ಜಮೀನು ಸರ್ವೆ ವಿವಾದಗಳು ನಿರ್ಧಾರವಾಗದೆ ರೈತರು ಸರ್ವೇ ಆಗದ ದಾಖಲಾತಿ ಪಡೆಯದ ಕಾರಣ ಅವರಿಗೆ ಬೆಳೆ ಸಾಲ ಸಿಗುತ್ತಿಲ್ಲ.
ಗಾಯದ ಮೇಲೆ ಬರೆ ಇಟ್ಟಂತೆ ಸುಮಾರು 300 ಪ್ರತಿಭಟನಾ ನಿರತ ಭೂ ಮಾಪಕರ ಪರವಾನಗಿಯನ್ನು ರಾತ್ರೋ ರಾತ್ರಿ ಸರ್ಕಾರ ರದ್ದುಗೊಳಿಸಿದೆ. ಮುಖ್ಯ ಮಂತ್ರಿಗಳು ಕೂಡಲೇ ಗಮನ ವಹಿಸಿ ಇವರ ಬೇಡಿಕೆಗಳಿಗೆ ನ್ಯಾಯಯುತವಾದ ಪರಿಹಾರವನ್ನು ಆದ್ಯತೆಯ ಮೇಲೆ ನೀಡಲಿ.
@tv9kannada I @AsianetNewsSN I @Vijayavani_Digi I @Vijaykarnataka I @HosadiganthaWeb I @krishnabgowda I @KannadaRepublic I @AKSSAofficial
ರೈತ ನಾಯಕ, ರಾಜಾಹುಲಿ, ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳಸಿ ಮೊಟ್ಟಮೊದಲ ಬಾರಿಗೆ ಕಮಲವನ್ನು ಅರಳಿಸಿದ ಧೀಮಂತ ನಾಯಕ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಪಯಣಕ್ಕೆ 50 ವರ್ಷ. ಹೀಗಾಗಿ ಕರ್ನಾಟಕ ಬಿಜೆಪಿಯ ಭೀಷ್ಮ ಸಂಘಟನಾ ಚತುರ ಶ್ರೀ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷದ ಅಭಿನಂದನಾ ಕಾರ್ಯಕ್ರಮವು ಮೇ 9, ಶನಿವಾರ, ಚಿತ್ರದುರ್ಗದಲ್ಲಿ ನಡೆಯಲಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ.
ಸರ್ವರಿಗೂ ಸ್ವಾಗತ.
@BSYBJP@BYVijayendra@BYRBJP@BJP4India@BJP4Karnataka@AmitShah@narendramodi
#justiceforlicensedsurveyors
ಮಾನ್ಯ ಸಿದ್ದರಾಮಯ್ಯ ರವರೆ ನಿಮ್ಮದೇ ಸರ್ಕಾರದಲ್ಲಿ ಜೀತ ಪದ್ಧತಿ ಚಾಲ್ತಿಯಲ್ಲಿ ಇದೆ. ಸಂವಿಧಾನದ ಮೇಲೆ ಗೌರವ ಇಟ್ಟಿದ್ದೀರಿ, ಬಸವಣ್ಣನವರ ಮತ್ತು ಕನಕದಾಸರ ವಚನ ಸಾರುವ ಸಮಾನತೆಯ ಪಾಠ ಮಾಡುತ್ತೀರಿ.
ನೀವು 5000 ಲೈಸನ್ಸ್ ಸರ್ವೇಯರ್ಸ್ ಕುಟುಂಬಗಳಿಗೆ ಅನ್ಯಾಯ ಮಾಡುತ್ತಿದ್ದೀರಿ.
2 ತಿಂಗಳಿಂದ ಕೆಲಸ ಸ್ಥಗಿತ ಮಾಡಿ ಮುಷ್ಕರ ಮಾಡುತ್ತಿದರು ಸಹ ಸರ್ಕಾರ ಮೌನ ವಹಿಸಿದ್ದೀರಿ. ಅಳತೆಗೆ ಅರ್ಜಿ ಕಟ್ಟಿದ ರೈತರು ಸಹ ನಮ್ಮ ಜೊತೆ ಕಷ್ಟ ಅನುಭವಿಸುತ್ತಿದ್ದಾರೆ.
2025 ಏಪ್ರಿಲ್ ಸರ್ವೇ ದಿನಾಚರಣೆಯ ತಮ್ಮ ಭರವಸೆ ಏನಾಯಿತು. ಇದೆಯೇ ತಾವು ನುಡಿದಂತೆ ನಡೆಯುವುದು ಎಂದರೆ. ರಾಜಕೀಯ ಬಿಡಿ, ಪ್ರತಿಷ್ಠೆ ಬಿಡಿ, ನೀವು ನಿಜವಾದ ರೈತ ಪರ, ಹಿಂದುಳಿದವರ ಪರ, ಮಹಿಳೆಯರ ಹಾಗೂ ಕನಿಷ್ಠ ಮಾನವೀಯತೆ ಪರ ಆದರೂ ಇದ್ದರೆ.
ಲೈಸನ್ಸ್ ಸರ್ವೇಯರ್ಸ್ ಗಳ ಕಷ್ಟಕ್ಕೆ ಅಂತ್ಯ ಇಟ್ಟು
ಖಾಯಂ ಮಾಡಿ, ವೇತನ ನೀಡಿ, ESI PF ನೀಡಿ, ಹೆಣ್ಣುಮಕ್ಕಳಿಗೆ ಮಾತೃತ್ವ ರಜೆ ನೀಡಿ
#justiceforlicensedsurveyors
@siddaramaiah@DKShivakumar@krishnabgowda@RAshokaBJP@RAshokaBJP@hd_kumaraswamy@tv9kannada@PublicTVnews@tv9kannada@AsianetNewsSN@News18Kannada@KannadaRepublic
⚖️ Govt Surveyor → Permanent + Salary + ESI + PF + Respect
Licensed Surveyor → Same Work + No Benefits + No Security
ಕೆಲಸ ಒಂದೇ ಆದರೆ ಅಂತರ ಆಕಾಶ-ಭೂಮಿ!
@KrishnaBgowda ಇದು ಸಮಾನತೆನಾ?
#justiceforlicensedsurveyors
ಮಹಿಳಾ ಪರವಾನಗಿ ಭೂ ಮಾಪಕರ ನೋವನ್ನು ಒಮ್ಮೆ ನಿಮ್ಮ ಮನೆಯಲ್ಲಿರುವ ಹೆಣ್ಣುಮಕ್ಕಳಿಗೆ ಹೋಲಿಸಿ ನೋಡಿ,@laxmi_hebbalkar ಅವ್ರೇ.
ಅವರಿಗೆ ಕೂಡ ಭವಿಷ್ಯದ ಭದ್ರತೆ ಬೇಕು
ಆದರೆ ಇಂದು
ಅವರ ಪರಿಶ್ರಮಕ್ಕೆ ಗೌರವ ಮತ್ತು ಘನತೆ ಸಿಗುತ್ತಿಲ್ಲ..
ನಿಮ್ಮ ನಿಲುವು ಸಾವಿರಾರು ಮಹಿಳೆಯರ ಬದುಕನ್ನು ತೀರ್ಮಾನಿಸುತ್ತದೆ
#justiceforlicensedsurveyors