@arrahman@YM_Movies @offjiostudios @JioCinema@idealentinc Dear @arrahman sir, We Kannadigas who loves your music to the core from lovely hearts. Kindly release #99SongsTheMovie in Kannada as #DubbingInKannada is mainstream now. More than 10+ films have seen lights in Kannada from English, Hindi, Tamil, Malayalam & Telugu coming soon
ಭಾಷಾಭಿಮಾನ ಹಾಗೂ ನಾಡಿನ ಅಸ್ಮಿತೆ ವಿಚಾರಗಳು
ಕರ್ನಾಟಕದ ರಾಜಕಾರಣಿಗಳು(ಕೆಲವರನ್ನ ಬಿಟ್ಟು)ಕೇವಲ ಭಾಷಣ ಹಾಗೂ ಕನ್ನಡ ಧ್ವಜಸ್ತಂಭದ ಬಳಿಗಷ್ಟೇ ಸೀಮಿತ.
ಆದ್ರೆ ತಮಿಳುನಾಡು ರಾಜಕಾರಣಿಗಳು ತಮ್ಮ ನಾಡಾಭಿಮಾನ ಹಾಗೂ ಸ್ವಾಭಿಮಾನನಾ ಕೆಲಸ ಮಾಡಿ ತೋರಿಸುತ್ತಾರೆ.
ಇಷ್ಟೇ ವ್ಯತ್ಯಾಸ.
ನಮ್ಮಲ್ಲಿರೋರು ಗುಲಾಮಗಿರಿ ಮಾಡೋರು,
ಅವರು ತೊಡೆ ತಟ್ಟಿ ನಿಲ್ಲೋರು.
ಎರಡು ಪ್ರಮುಖ ಬೆಳವಣಿಗೆಗಳು ನಮ್ಮ ನೆರೆಯ ರಾಜ್ಯಗಳಲ್ಲಿ ನಡೆದಿವೆ.
1. ತಮಿಳುನಾಡು ಸರ್ಕಾರ ರುಪಾಯಿ ಚಿಹ್ನೆಯನ್ನು ತಮಿಳಿನಲ್ಲಿಯೇ ಸಿದ್ಧಪಡಿಸಿ ಅದನ್ನು ಬಳಸಲು ಆರಂಭಿಸಿದೆ. ತಮಿಳಿಗರ ಸ್ವಾಭಿಮಾನದ ರಾಜಕಾರಣಕ್ಕೆ ಇದು ಸಾಕ್ಷಿ. ತಮಿಳಿಗರು ತಮ್ಮ ಮೇಲೆ ಇನ್ನೊಂದು ನುಡಿ ಹೇರಿಕೆಯಾಗುವುದನ್ನು ಎಂದೂ ಸಹಿಸೋದಿಲ್ಲ. ಕರ್ನಾಟಕ ರಕ್ಷಣಾ ವೇದಿಕೆ ತಮಿಳುನಾಡು ಸರ್ಕಾರದ ಈ ನಡೆಯನ್ನು ಸ್ವಾಗತಿಸುತ್ತದೆ.
ತಮಿಳುನಾಡು ಸರ್ಕಾರದ ಈ ಸ್ವಾಭಿಮಾನದ ನಡೆಯ ನಿರ್ಧಾರವನ್ನು ಅನುಸರಿಸಿ ಕರ್ನಾಟಕ ಸರ್ಕಾರವೂ ರುಪಾಯಿ ಚಿಹ್ನೆಯನ್ನು ಕನ್ನಡ ಲಿಪಿಗೆ ಅನುಗುಣವಾಗಿ ಬದಲಾಯಿಸಬೇಕು. ಕರ್ನಾಟಕದಲ್ಲಿ ಅದನ್ನೇ ಬಳಕೆಗೆ ತರಬೇಕು. ನಮ್ಮ ಅಸ್ಮಿತೆ ಇರುವುದು ಕನ್ನಡ ಲಿಪಿಯಲ್ಲಿ, ಇನ್ಯಾವುದೋ ದೇವನಾಗರಿ ಲಿಪಿಯಲ್ಲಲ್ಲ. ಹೀಗಾಗಿ ರುಪಾಯಿಗೊಂದು ಕನ್ನಡದ ಚಿಹ್ನೆ ಸಿದ್ಧಪಡಿಸಬೇಕು.
2. ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಎಲ್ಲ ಪರೀಕ್ಷೆಗಳೂ ಕನ್ನಡದಲ್ಲೇ ನಡೆಯಬೇಕು ಎಂದು ಇತ್ತೀಚಿಗಷ್ಟೇ ಆಗ್ರಹಿಸಿದ್ದೆ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾದ್ದರಿಂದ ಕರ್ನಾಟಕ ಸರ್ಕಾರದ ಸೇವೆಗೆ ನೇಮಕ ಆಗುವ ಅಧಿಕಾರಿಗಳು ಕನ್ನಡವನ್ನೇ ಬಳಸಬೇಕು, ಕನ್ನಡದ ಜ್ಞಾನವೇ ಅವರಿಗೆ ಅತಿಮುಖ್ಯ ಅರ್ಹತೆ. ಹೀಗಾಗಿ ಕನ್ನಡದಲ್ಲೇ ಕೆಪಿಎಸ್ಸಿ ನಡೆಸುವ ಪರೀಕ್ಷೆಗಳು ಮತ್ತು ಕರ್ನಾಟಕ ಸರ್ಕಾರದ ಸೇವೆಗೆ ನಡೆಯುವ ಇತರ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳೂ ಕನ್ನಡದಲ್ಲೇ ನಡೆಯಬೇಕು ಎಂದು ನಾನು ಹೇಳಿದ್ದೆ.
ವಿಶೇಷವೆಂದರೆ ನನ್ನ ಆಗ್ರಹವನ್ನು ಮರಾಠಿ ನುಡಿಗೆ ಅನ್ವಯಿಸಿ ಮಹಾರಾಷ್ಟ್ರ ಸರ್ಕಾರ ಕಾಯ್ದೆ ರೂಪಿಸಿ ಜಾರಿ ಮಾಡಿದೆ. ಮಹಾರಾಷ್ಟ್ರ ಸರ್ಕಾರದ ಸೇವೆಗೆ ಸಿಬ್ಬಂದಿ ನೇಮಕಕ್ಕೆ ನಡೆಯುವ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳನ್ನು ಮರಾಠಿಯಲ್ಲೇ ನಡೆಸುವ ಕಾಯ್ದೆ ಜಾರಿಯಾಗಿದೆ. ಇದರ ಪರಿಣಾಮವಾಗಿ ಮರಾಠಿ ಮಾಧ್ಯಮದ ಓದುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತೆ. ಮರಾಠಿ ನುಡಿ ಬಳಸುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಈ ನಿರ್ಧಾರಕ್ಕೆ ಮಹಾರಾಷ್ಟ್ರ ಸರ್ಕಾರವನ್ನು ನಾನು ಅಭಿನಂದಿಸುತ್ತೇನೆ.
ಕರ್ನಾಟಕ ಸರ್ಕಾರವೂ ಕೂಡಲೇ ಸೂಕ್ತ ಕಾನೂನು ರೂಪಿಸಿ ಕೆಪಿಎಸ್ಸಿ ಸೇರಿದಂತೆ ಕರ್ನಾಟಕ ಸರ್ಕಾರದ ಸೇವೆಗೆ ನೇಮಕವಾಗುವ ಅಧಿಕಾರಿ, ನೌಕರರ ಆಯ್ಕೆಗೆ ನಡೆಯುವ ಎಲ್ಲ ಪರೀಕ್ಷೆಗಳನ್ನೂ ಕನ್ನಡದಲ್ಲೇ ನಡೆಸುವ ತೀರ್ಮಾನ ಕೈಗೊಳ್ಳಬೇಕು ಎಂದು ಮತ್ತೊಮ್ಮೆ ಆಗ್ರಹಿಸುತ್ತೇನೆ. ತಮ್ಮ ನುಡಿ, ಸಂಸ್ಕೃತಿಯನ್ನ ರಕ್ಷಿಸಲು ನೆರೆಯ ರಾಜ್ಯಗಳು ಕೈಗೊಳ್ಳುತ್ತಿರುವ ತೀರ್ಮಾನಗಳನ್ನು ನೋಡಿಯಾದರೂ ರಾಜ್ಯ ಸರ್ಕಾರ ಕನ್ನಡ ಅಸ್ಮಿತೆ ಉಳಿಸಲು ಉತ್ತಮ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ.
- ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
@siddaramaiah@DKShivakumar@mkstalin@Dev_Fadnavis@Devendra_Office #Kannada #KPSC
ನನ್ನ ಜೀವಮಾನದಲ್ಲೇ ಚಿತ್ರಮಂದಿರದಲ್ಲಿ housefullನ ಅಷ್ಟು ಪ್ರೇಕ್ಷಕರು ಎದ್ದು ನಿಂತು ಕುಣಿದ ಹಾಡನ್ನು ನಾನು ನೋಡಿದ್ದು
*ತಾಲಿಬಾನ್ ಅಲ್ಲ ಅಲ್ಲ *
ಚಿತ್ರ :: ಅಪ್ಪು
ಸ್ಥಳ :: ನರ್ತಕಿ ಚಿತ್ರಮಂದಿರ
ದಿನಾಂಕ :: 14/03/2025
ಯುಪಿಎಸ್ಸಿ ಮಾದರಿಯಲ್ಲಿ ಕೆಪಿಎಸ್ಸಿಯಲ್ಲಿ ಸುಧಾರಣಾ ಕ್ರಮಗಳನ್ನು ಜಾರಿ ಮಾಡಿ, ಪಾರದರ್ಶಕ ಮತ್ತು ನ್ಯಾಯಸಮ್ಮತ ನೇಮಕಾತಿಗೆ ಆದ್ಯತೆ ನೀಡಲಾಗುವುದು.
ನ್ಯಾಯಾಲಯವು ಸೂಚನೆ ಕೊಟ್ಟರೆ ಮರು ಪರೀಕ್ಷೆ ಮಾಡುವಂತೆ ಸಲಹೆ ನೀಡುತ್ತೇನೆ.
ಮೊದಲು ಕನ್ನಡದಲ್ಲಿ ಪ್ರಶ್ನೆಪತ್ರಿಕೆ ತಯಾರಿಸಿ, ಬಳಿಕ ಅದನ್ನು ಇಂಗ್ಲೀಷ್ ಭಾಷೆಗೆ ಭಾಷಾಂತರಿಸಲು ಕ್ರಮ ವಹಿಸಲಾಗುವುದು.
ಕೆಪಿಎಸ್ಸಿ ಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಮುಖ್ಯಮಂತ್ರಿ @siddaramaiah ಅವರ ಉತ್ತರ
#ಕನ್ನಡಸುದ್ದಿ
ಕೆಪಿಎಸ್ಸಿ ಪರೀಕ್ಷೆಯ ಭಾಷಾಂತರದಲ್ಲಿ ಆದ ಲೋಪದ ಕಾರಣಕ್ಕೆ ಅಭ್ಯರ್ಥಿಗಳಿಗೆ ಆಗಿರುವ ಸಮಸ್ಯೆ ಬಗ್ಗೆ ವಿರೋಧ ಪಕ್ಷದ ನಿಲುವಳಿ ಸೂಚನೆ ಮೇಲೆ ಮಾತನಾಡಿದೆ.
ಕೆಪಿಎಸ್ಸಿಯಲ್ಲಿ ಹಲವು ಬಾರಿ ಗೊಂದಲಗಳಾಗಿ, ನ್ಯಾಯಾಲಯಗಳ ಮೆಟ್ಟಿಲು ಏರಿರುವ ಚರಿತ್ರೆ ಇದೆ.
ಭ್ರಷ್ಟಾಚಾರ ಕೆಪಿಎಸ್ಸಿ ಇಂದ ಹೋಗಬೇಕು. ಇದರ ಬಗ್ಗೆ ಎರಡು ಮಾತಿಲ್ಲ. ಹೀಗಾಗಿ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಸಲಹೆಗಳಿಗೆ ನಾವು ಮುಕ್ತರಾಗಿದ್ದೇವೆ.
ದಿನಾಂಕ 4/3/2025 ರಂದು ವಿರೋಧ ಪಕ್ಷದ ಸದಸ್ಯರು ನಿಲುವಳಿ ಸೂಚನೆಯನ್ನು ಮಂಡಿಸಿದ್ದಾರೆ. ನಿಲುವಳಿ ಸೂಚನೆಯನ್ನು ನಿಯಮ 69 ಕ್ಕೆ ಪರಿವರ್ತಿಸಿ ಚರ್ಚೆಗೆ ಅವಕಾಶ ಮಾಡಿಕೊಡಲಾಗಿದೆ. ಈ ಕುರಿತು ವಿರೋಧ ಪಕ್ಷದ ನಾಯಕರಾದಿಯಾಗಿ ಹಲವರು ಮಾತನಾಡಿದ್ದಾರೆ. ನಿಲುವಳಿ ಸೂಚನೆಯು ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆಯಲ್ಲಿ ಕನ್ನಡ ಭಾಷಾಂತರದಲ್ಲಿ ಉಂಟಾಗಿರುವ ಲೋಪಗಳ ಕುರಿತು ಹಾಗೂ ಪರೀಕ್ಷೆಗಳು ನಡೆದು ಸಂದರ್ಶನಗಳನ್ನು ಮಾಡದೆ ಲೋಪ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರು ಕೆ.ಪಿ.ಎಸ್.ಸಿ.ಯನ್ನು ರೋಗಗ್ರಸ್ತ ಸಂಸ್ಥೆಯೆಂದು ಹಾಗೂ ಹುದ್ದೆಗಳಿಗೆ ರೇಟ್ ಫಿಕ್ಸ್ ಮಾಡುವ ಬಗ್ಗೆ ಮಾತನಾಡಿದ್ದಾರೆ.
ವಿರೋಧ ಪಕ್ಷದ ಸದಸ್ಯರುಗಳು ಕೆಪಿಎಸ್ಸಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಪ್ರಸ್ತುತ ನಡೆಯುತ್ತಿರುವ ಗೆಜೆಟೆಡ್ ಪ್ರೊಬೇಷರ್ಸ್ ಪರೀಕ್ಷೆಯಲ್ಲಿ ಕನ್ನಡ ಅನುವಾದಗಳನ್ನು ತಪ್ಪು ಮಾಡಲಾಗಿದೆ. ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ತಪ್ಪು ಮಾಡಿದ ಕಾರಣದಿಂದ ಉಂಟಾಗಿರುವ 30 ಕೋಟಿ ರೂ ನಷ್ಟವನ್ನು ತಪ್ಪಿತಸ್ಥರಿಂದ ವಸೂಲು ಮಾಡಬೇಕು. ಪರೀಕ್ಷೆ ನಡೆಸಲು ಈ ಹಿಂದೆ ಮಾಡಿರುವ ಅಧಿಸೂಚನೆಯನ್ನು ರದ್ದು ಮಾಡಿ ಹೊಸ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಕೆಪಿಎಸ್ಸಿಯ ಸಮಗ್ರ ಬದಲಾವಣೆಯಾಗಬೇಕು ಎಂದೂ ಸಹ ಸಲಹೆ ನೀಡಿದ್ದಾರೆ.
ಕೆಪಿಎಸ್ಸಿ ಸುಧಾರಿಸಬೇಕು ಎಂಬ ಈ ಸದನದ ಕಳಕಳಿ ಸರಿಯಾಗಿದೆ. ನಮ್ಮ ಸರ್ಕಾರದ ಕಳಕಳಿ ಕೂಡ ಅದೇ ಆಗಿದೆ. ಅಧಿಕಾರಿಗಳ ಆಯ್ಕೆ ಪ್ರಕ್ರಿಯೆಗಳು ಕಳಂಕರಹಿತವಾಗಿರಬೇಕು, ದಕ್ಷರೂ, ಪ್ರಾಮಾಣಿಕರೂ ಆದ ಅಧಿಕಾರಿಗಳು ರಾಜ್ಯದ ಆಡಳಿತ ಸೇವೆಗೆ ಬರಬೇಕು ಎಂಬ ಉದ್ದೇಶ, ಕಳಕಳಿ ನಮ್ಮದೂ ಆಗಿದೆ. 1/7
#KPSC #GovtJobs
Action King ARJUN SARJA & MEENA starrer @arrahman's #RAMA (1995) soundtrack released but movie shelved.
Debut director #Ramshetty Producer #VNatarajan associate producer #BSDwarakish Lyrics Kalyan Rarest & finest soundtrack Kannada. Later released as Rhythm with different tracks
Created magic in the history of music by @arrahman through his sound and innovation
@akarjunofficial is key instrumental in connecting Kannada audience & also Tamil, Telugu etc. #Rama (1995) is masterpiece gem CD for lovely fans across globe. Nice to see unreleased #ARRahmanMusic