@CPBlr @DCPSOUTHWESTBCP @JbharathiPS1@CybercrimeCID@CenWestCrimePs
KSP has been reported through the Karnataka State Police Department app. Please take appropriate legal action.
Sir, the vehicle display has been submitted through the Bangalore Traffic Astra app but the installation has not been approved yet. Please inform us about this.
@Jointcptraffic
ಒಂದು ಭಾಷೆಯ ಬೆಳವಣಿಗೆ ಮತ್ತು ಜೀವಂತಿಕೆಗೆ ಅದರಲ್ಲಿ ಹುಟ್ಟುವ ಸಾಹಿತ್ಯ ಮತ್ತು ಅದನ್ನು ಹರಡುವ ಸಂಗೀತ ಬಹಳ ಮುಖ್ಯ. ವಿಚಾರಗಳನ್ನು ಸಂಗೀತ ಮತ್ತು ಹಾಡಿನ ಮೂಲಕ ದಾಟಿಸಿದರೆ ಆ ಭಾಷೆ ಬದುಕುತ್ತಾ, ಬೆಳೆಯುತ್ತಾ, ವಿಸ್ತರಿಸುತ್ತಾ ಹೋಗುತ್ತದೆ. ಯಾರೂ ದಿನಬಳಕೆಯಲ್ಲಿ ಬಳಸದೆ ಬಹುತೇಕವಾಗಿ ಸತ್ತೇ ಹೋಗಿರುವ ಸಂಸ್ಕೃತ ಈಗಲೂ ಅಷ್ಟಿಷ್ಟು ಬದುಕಿದೆ ಅಂದರೆ ಅದರಲ್ಲಿರುವ ಪ್ರಾಚೀನ ಸಾಹಿತ್ಯ ಮತ್ತು ಶ್ಲೋಕಗಳನ್ನು ಸಂಗೀತಕ್ಕೆ ಅಳವಡಿಸಿ ಹಾಡಿರುವ ಮತ್ತು ಹಾಡುತ್ತಿರುವ ಕಾರಣಕ್ಕೆ.
ಕಳೆದ ಶತಮಾನದಲ್ಲಿ ತಮ್ಮ ಗಾಯನದ ಮೂಲಕ ಕನ್ನಡದ ಸಮೃದ್ಧಿಗೆ ತಮ್ಮದೇ ಕೊಡುಗೆ ನೀಡಿದವರಲ್ಲಿ ಗಾಯಕಿ ಎಸ್. ಜಾನಕಿಯವರೂ ಒಬ್ಬರು ಮತ್ತು ಅಗ್ರಗಣ್ಯರು. ಅವರ ಪ್ರತಿಭೆ ಅವರು ಹಾಡಿರುವ ಸಾವಿರಾರು ಹಾಡುಗಳಲ್ಲಿ ವಿಧವಿಧವಾಗಿ ವ್ಯಕ್ತವಾಗಿದೆ. ಘಂಟಸಾಲ, ಪಿ.ಬಿ. ಶ್ರೀನಿವಾಸ್, ಪಿ. ಸುಶೀಲ, ಎಸ್. ಜಾನಕಿ, ಎಸ್.ಪಿ. ಬಾಲಸುಬ್ರಮಣ್ಯಂ, ವಾಣಿ ಜಯರಾಮ್, ಡಾ. ರಾಜ್ಕುಮಾರ್, ಹೀಗೆ ಪ್ರತಿಭಾವಂತರ ದಂಡೇ ಕನ್ನಡ ಸಿನಿಮಾವನ್ನು ಮತ್ತು ಭಾಷೆಯನ್ನು ತಮ್ಮ ಗಾಯನ ಪ್ರತಿಭೆ ಮತ್ತು ಕಂಠಸಿರಿಯ ಮೂಲಕ ಸಮೃದ್ಧಗೊಳಿಸಿದರು. ಜನರಲ್ಲಿ ಅಭಿರುಚಿ ಮತ್ತು ಸಂವೇದನೆಗಳನ್ನು ಮೂಡಿಸಿದರು. ಹಾಡಿನ ಸಾಹಿತ್ಯದಲ್ಲಿದ್ದ ಮೌಲ್ಯಗಳನ್ನು ಮತ್ತು ಉತ್ತಮ ವಿಚಾರಗಳನ್ನು ಕೋಟ್ಯಾಂತರ ಜನಸಾಮಾನ್ಯರಿಗೆ ಮೌಖಿಕವಾಗಿ ಮುಟ್ಟಿಸಿದರು.
ಕೋಟ್ಯಾಂತರ ಕನ್ನಡಿಗರ ಮತ್ತು ದಕ್ಷಿಣ ಭಾರತೀಯರ ಮನಸ್ಸು ಮತ್ತು ಹೃದಯಗಳನ್ನು ತಮ್ಮ ಕಂಠದ ಮೂಲಕ ಮುಟ್ಟಿದ್ದ ಮತ್ತು ತಟ್ಟಿದ್ದ ಅಮರಗಾಯಕಿ ಎಸ್. ಜಾನಕಿ ನೆನ್ನೆ ಮೈಸೂರಿನಲ್ಲಿ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಎಲ್ಲೋ ಆಂಧ್ರದಲ್ಲಿ ಹುಟ್ಟಿಬೆಳೆದ ಈ ಮಹಿಳೆ ಹತ್ತಾರು ಭಾಷೆಗಳಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ವಿಚಾರವೇ ಅವರ ಪ್ರತಿಭೆ, ಪರಿಶ್ರಮ, ಶಿಸ್ತು ಎಂತಹ ಉತ್ಕೃಷ್ಟ ಮಟ್ಟದ್ದು ಎನ್ನುವುದನ್ನು ಮನಗಾಣಿಸುತ್ತದೆ.
ನನ್ನ ಬಾಲ್ಯ ಮತ್ತು ಯೌವನದಲ್ಲಿ ಮನಸ್ಸನ್ನು ಅರಳಿಸುವ ತಮ್ಮ ಹಾಡುಗಳ ಮೂಲಕ ನನಗೆ ಭಾಷೆಯನ್ನು ಮತ್ತಷ್ಟು ಹತ್ತಿರ ಮಾಡಿದ ಎಸ್.ಜಾನಕಿಯವರಿಗೆ ಶುಭವಿದಾಯ. ಹೋಗಿಬನ್ನಿ, ತಾಯಿ. ಓಂ ಶಾಂತಿಃ.
-ರವಿ ಕೃಷ್ಣರೆಡ್ಡಿ,
ಗೌರವ ಅಧ್ಯಕ್ಷ ಹಾಗೂ ಸಂಸ್ಥಾಪಕ,
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
12-07-2026.
@osd_cmkarnataka@CMofKarnataka@DKShivakumar@DrVaishnavi14 ಯೋಜನೆಯಿಂದ ಯಾವುದೇ ಲಾಭ ಆಗಿಲ್ಲ ದಯವಿಟ್ಟು ತಮಗೆ ಈ ಮನವಿಯಲ್ಲಿ ಕೇಳುವುದೇನೆಂದರೆ ಹೊಸದಾಗಿ ಗೃಹಜೋತಿ ಅರ್ಜಿಯನ್ನು ಅನುಮೋದನೆ ನೀಡಿ ಹೊಸದಾದ ಸರಾಸರಿ ತೆಗೆದುಕೊಂಡು ನಮಗೆ ಹೆಚ್ಚುವರಿ ಯೂನಿಟ್ ದೊರಕಿಸಿ ಕೊಡಬೇಕೆಂದು ತಮ್ಮಲ್ಲಿ ಕೋರಲಾಗಿದೆ ದಯವಿಟ್ಟು ನಮಗೆ ಆದಷ್ಟು ಬೇಗ ಸ್ಪಂದನೆ ನೀಡಬೇಕು
ಮುಖಾಂತರ ಅರ್ಜಿ ಸಲ್ಲಿಸಲು ಹೋದರೆ ಪಂಡಿತರ ಚೀಟಿಯಲ್ಲಿರುವ ನನ್ನ ಹೆಸರು ಅಯ್ಯಮ್ಮ ಸಿ ತೋರಿಸುತ್ತಿಲ್ಲ ಹೀಗಾಗಿ ನನಗೆ ಆನ್ಲೈನ್ ರಾಷ್ಟ್ರೀಯ ಆದ ರಾಜೀವ್ ಗಾಂಧಿ ವಸತಿ ಯೋಜನೆ ಹಾಗೂ ನಾಡ ಕಚೇರಿಯ ಮುಖಾಂತರ ಆನ್ಲೈನ್ ಅರ್ಜಿಗಳು ಸಲ್ಲಿಸಲು ಸಾಧ್ಯವಾಗುತ್ತಿಲ್ಲ ದಯವಿಟ್ಟು ಶ್ರೀ ತಾಂತ್ರಿಕ ದೋಷವನ್ನು ಸರಿಪಡಿಸಬೇಕೆಂದು ತಮ್ಮಲ್ಲಿ ಕೋರಲಾಗಿದೆ
@DrVaishnavi14@osd_cmkarnataka
I have written a letter to Honorable Dr. K Vaishnavi Madam through post and submitted my grievance. However, she has not resolved any of my grievances. Please look into our grievance and help us.