ರಾಜ್ಯ @INCKarnataka ಸರ್ಕಾರದ ಎದೆಯಲ್ಲಿ KPSC ಹಗರಣದ ನಡುಕ ಶುರುವಾಗಿದೆ.
ಗೌರವಾನ್ವಿತ ರಾಜ್ಯ ಹೈಕೋರ್ಟ್ ನಿರ್ದೇಶನದಂತೆ ಕೆಪಿಎಸ್ಸಿ ಹಗರಣದ ತನಿಖೆಗಾಗಿ #SIT ತಂಡಕ್ಕೆ ನೇಮಕಗೊಂಡ ಕೇವಲ 2 ದಿನಗಳಲ್ಲಿಯೇ, ಐಪಿಎಸ್ ಅಧಿಕಾರಿ ಶ್ರೀ ಕುಶಾಲ್ ಚೌಕ್ಸೆ ಅವರನ್ನು ದಿಢೀರನೆ ಚಿತ್ರದುರ್ಗಕ್ಕೆ ಎತ್ತಂಗಡಿ ಮಾಡಿರುವ @DKShivakumar ಸರ್ಕಾರದ ನಡೆ ಹಿಂದಿನ ಮರ್ಮವೇನು? ಡಿಸಿಪಿ (ಆಡಳಿತ) ಹುದ್ದೆಗೆ ಬಂದು ಇನ್ನೂ ಒಂದು ತಿಂಗಳು ಕಳೆಯುವ ಮುನ್ನವೇ ಈ ತರಾತುರಿಯ ವರ್ಗಾವಣೆ ಏಕೆ ಮುಖ್ಯಮಂತ್ರಿಗಳೇ?
ಹೈಕೋರ್ಟ್ ಖುದ್ದಾಗಿ SIT ತಂಡಕ್ಕೆ ಸದಸ್ಯರನ್ನು ನೇಮಿಸಿರುವುದಕ್ಕೆ ತಾವು ನಿನ್ನೆ ವಿರೋಧ ವ್ಯಕ್ತಪಡಿಸಿದಾಗಲೇ ಈ ಅನುಮಾನ ಶುರುವಾಗಿತ್ತು. ಹಗರಣದ ತನಿಖೆ ಚುರುಕುಗೊಂಡರೆ ತಮ್ಮದೇ ನಾಯಕರ ಭ್ರಷ್ಟಾಚಾರ, ಅಧಿಕಾರಿಗಳ ಕರಾಳ ಮುಖವಾಡ ಕಳಚುತ್ತದೆ ಎಂಬ ಭಯ ನಿಮ್ಮ ಸರ್ಕಾರವನ್ನು ಕಾಡುತ್ತಿರುವುದು ಸ್ಪಷ್ಟ.
ಲಕ್ಷಾಂತರ ಯುವಕರ ಭವಿಷ್ಯದೊಂದಿಗೆ ಚೆಲ್ಲಾಟವಾಡಿ, ಹಗರಣದ ರೂವಾರಿಗಳನ್ನು ರಕ್ಷಿಸಲು ಹೊರಟಿರುವ ನಿಮ್ಮ ಸರ್ಕಾರದ 'ಪಾರದರ್ಶಕತೆ'ಯ ಅಸಲಿ ಮುಖ ಇದೇ ನೋಡಿ! ತನಿಖಾಧಿಕಾರಿಗಳನ್ನು ದೂರದ ಊರುಗಳಿಗೆ ಓಡಿಸಿದ ಮಾತ್ರಕ್ಕೆ ಸತ್ಯವನ್ನು ಸಮಾಧಿ ಮಾಡಲು ಸಾಧ್ಯವಿಲ್ಲ.
#KPSC ಹಗರಣದ ತನಿಖೆ ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಈ ಷಡ್ಯಂತ್ರವನ್ನು @JanataDal_S ತೀವ್ರವಾಗಿ ಖಂಡಿಸುತ್ತದೆ. ನಾಡಿನ ಯುವಜನತೆಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ.
#KPSCScam #CongressCoverUp
🎓 ಪದವೀಧರರ ಧ್ವನಿಗಾಗಿ… ಪದವೀಧರರ ಹಿತಕ್ಕಾಗಿ…
ಮುಂಬರುವ MLC ಚುನಾವಣೆ 2026ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕಾಂತಕುಮಾರ್ ಸರ್ ಅವರಿಗೆ ನಿಮ್ಮ ಅಮೂಲ್ಯ ಮತ ನೀಡಿ ಬೆಂಬಲಿಸೋಣ. 🙏
ನಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಪದವೀಧರರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡುವ ಸಮಯ ಇದು.
ವ್ಯವಸ್ಥೆ ಬದಲಾಗಬೇಕು ಎಂದರೆ, ಬದಲಾವಣೆ ನಮ್ಮಿಂದಲೇ ಆರಂಭವಾಗಬೇಕು. ✊
ಸರಿಯಾದ ವ್ಯಕ್ತಿಗೆ ಮತ ನೀಡಿ — ಉತ್ತಮ ವ್ಯವಸ್ಥೆಯ ನಿರ್ಮಾಣಕ್ಕೆ ಕೈಜೋಡಿಸಿ.
🗳️ ನಿಮ್ಮ ಮತ… ನಿಮ್ಮ ಧ್ವನಿ… ನಿಮ್ಮ ಭವಿಷ್ಯ!
ಕಾಂತಕುಮಾರ್ ಸರ್ ಅವರನ್ನು ಬೆಂಬಲಿಸಿ. 🙏
ಎಲ್ಲಾ ನೇಮಕಾತಿಯಲ್ಲೂ ಅಕ್ರಮದ ವಾಸನೆ ಎದ್ದು ಕಾಣುತ್ತಿದೆ.
BBMP AE, WRD AE, ADLR ಆಯಿತು ಇಂದು WRD JE ಹುದ್ದೆಗಳು?
1)ಜ್ಞಾನಿಯಾದವನು ED ಇಂದ ತಪ್ಪಿಸಿಕೊಂಡು ಅಡ್ಡಾಡುವ ಪರಿಸ್ಥಿತಿಯಲ್ಲಿದ್ದಾನೆ .
2) Member ಗಳು /broker ಗಳು ಊರು ಬಿಡುತ್ತಿದ್ದಾರೆ.
3)Score list ಕೇಳಿದರೆ ಅದು confidencial ಅನ್ನುತ್ತಾರೆ.
4) CC tv footage ಗಳನ್ನು ಅಳಿಸಿ ಹಾಕುತ್ತಿದ್ದಾರೆ.
5) KEA ರೀತಿ transperancy ಕೇಳಿದಾಗಲೇ ಕೊಟ್ಟಿದ್ದರೆ, ED ಮುಂದೆ ಇಂದು ನಂಗಾ ನಿಲ್ಲುವ ಪರಿಸ್ಥಿತಿ ಬರುತ್ತಿರಲಿಲ್ಲ. ಇವರು ಕೆರ ಕಡಿಯಲು ಲಾಯಕ್ಕು.
KPSC ಅನ್ನು ಪತಿವ್ರತೆ ಎಂದು ತಿಳಿದು ಮತ್ತಷ್ಟು ನೇಮಕಾತಿ ಮಾಡಲು ಕೊಟ್ಟಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯೇ ಎಂದು ಪ್ರಶ್ನಿಸುವ ಸಂದರ್ಭ ಬಂದಿದೆ.
ಸರ್ಕಾರ ಯಾರನ್ನು ರಕ್ಷಿಸುವ ಪ್ರಯತ್ನ ಮಾಡದೆ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದರೆ ಕಾಂಗ್ರೆಸ್ ಗೆ ಒಳ್ಳೆ ಹೆಸರು ಬರುತ್ತದೆ .
KPSC ಅಂಗಡಿಯನ್ನು ಮುಚ್ಚಿ KEA ಗೆ ಎಲ್ಲಾ ನೇಮಕಾತಿ ಮಾಡುವ ಜವಾಬ್ದಾರಿ ಕೊಡಿ.
@AKSSAofficial@kanthakumarr@BasanagoudaBJP@BJP4Karnataka@dir_ed@CBIHeadquarters@publictvnews@Vijaykarnataka@HosadiganthaWeb@prajavani@Praveenmmagadum@RahulGandhi@tv9kannada@vinaygb@Aksaraofficial2@KEA_karnataka
ಕಾಂತ್ ಕುಮಾರ್ ಸರ್ ಅವರು ರಾಜ್ಯದಲ್ಲಿ ಸರ್ಕಾರಿ ನೇಮಕಾತಿಗಳನ್ನು ಪ್ರಾರಂಭಿಸಲೇಬೇಕೆಂಬ ದೃಢ ಸಂಕಲ್ಪದೊಂದಿಗೆ ಹಗಲಿರುಳು ಶ್ರಮಿಸಿ, ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸುವ ಮೂಲಕ ಸುಮಾರು 75,000 ನೇಮಕಾತಿಗಳಿಗೆ ಸರ್ಕಾರದಿಂದ ಚಾಲನೆ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾದರು.
ಧಾರವಾಡದಲ್ಲಿ ನಡೆದ ಹೋರಾಟದ ವೇಳೆ ಕಾಂತ್ ಕುಮಾರ್ ಸರ್ ಅವರ ಮೊಣಕಾಲು (Knee) ಹಾಗೂ ಬೆನ್ನಿಗೆ (Back) ಗಾಯಗಳಾಗಿದ್ದವು. ಆದರೂ ಸಹ ಅವರು ವಿಶ್ರಾಂತಿ ಪಡೆಯದೆ ಕಲಬುರ್ಗಿ, ಶಿವಮೊಗ್ಗ, ಕೋಲಾರ, ಬೆಂಗಳೂರು, ವಿಜಯಪುರ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸಿ ನೇಮಕಾತಿ ಪ್ರಕ್ರಿಯೆ ಆರಂಭವಾಗುವಂತೆ ಹೋರಾಟ ಮುಂದುವರಿಸಿದರು.
ಇತರರ ಭವಿಷ್ಯಕ್ಕಾಗಿ ಹೋರಾಡಿದ ಆ ಜೀವ ತನ್ನ ಮೊಣಕಾಲಿನ ಚಿಕಿತ್ಸೆಯನ್ನು ಪಡೆಯುತ್ತಿದೆ. ಅವರು ಶೀಘ್ರವಾಗಿ ಸಂಪೂರ್ಣ ಗುಣಮುಖರಾಗಿ ಮತ್ತೆ ಯುವಕರ ಪರ ಹೋರಾಟವನ್ನು ಮುಂದುವರಿಸಲಿ ಎಂದು ನಾವು ಎಲ್ಲರೂ ಹಾರೈಸೋಣ ಮತ್ತು ಪ್ರಾರ್ಥಿಸೋಣ.
ಬರಗಾಲಕ್ಕೆ ಹೆಸರಾಗಿದ್ದ ವಿಜಯಪುರ ಜಿಲ್ಲೆ ಪುನರುಜ್ಜೀವನದ ಸಂಕೇತವಾಗಿದೆ.
ಕೆರೆಗಳು, ಕಾಲುವೆಗಳು, ಬಾಂದಾರ-ಬಾವಡಿಗಳು ಮತ್ತೆ ಜೀವ ಪಡೆದಿವೆ. 1.5 ಕೋಟಿಗೂ ಹೆಚ್ಚು ಮರಗಳು ಅರಳಿ, ಹಸಿರು ಸಿರಿ ಮೇಳೈಸಿದೆ.
ಒಂದು ದಿಟ್ಟ ದೃಷ್ಟಿಕೋನವು ಬರಗಾಲದ ನೆನಪುಗಳಿಂದ ಹಸುರಿನ ನವಚರಿತೆಯನ್ನು ಹೇಗೆ ಪರಿವರ್ತಿಸಿತು ಎಂಬುದಕ್ಕೆ ಬಸವನಾಡು ಅತ್ಯುತ್ತಮ ಸಾಕ್ಷಿಯಾಗಿದೆ. ಅಭಿವೃದ್ಧಿಯ ಈ ಪಯಣ ರಾಷ್ಟ್ರಕ್ಕೂ ಮಾದರಿ!
2030ಕ್ಕೆ 5 ಕೋಟಿ ಮರಗಳನ್ನು ಬೆಳೆಸುವ ಗುರಿ
#kotivrikshaabhiyana #Vijayapura #siddeshwaraswamiji
ಇವರು ಕೇಳಿದ್ದು IPL ಟಿಕೆಟ್ ಅಲ್ಲ..
ಇವರು ಕೇಳಿದ್ದು MLA ಸೀಟ್ ಅಲ್ಲ..
ಇವರು ಕೇಳಿದ್ದು ಬಿಟ್ಟಿ ಭಾಗ್ಯ ಅಲ್ಲ..
ಈ ವ್ಯಕ್ತಿ ಕೇಳಿದ್ದು ರಾಜ್ಯದ ಯುವಕರಿಗೆ ಉದ್ಯೋಗ ಕೊಡಿ, ನೇಮಕಾತಿ ಅಧಿಸೂಚನೆ ಹೊರಡಿಸಿ ಅಂತ ಅಷ್ಟೇ.. ❗
ಆದರ ಪರಿಣಾಮ ಹೀಗೆ ಇದೆ 💔
@siddaramaiah ಅವರೇ ನಮ್ಮ ಹಕ್ಕು ಕೇಳುವುದು ತಪ್ಪೇ?
@AKSSAofficial#KEA
ಧಾರವಾಡದಲ್ಲಿ ನಿನ್ನೆ ನಡೆದ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಯಲ್ಲಿ ಪ್ರತಿಭಟನಾನಿರತರನ್ನು ಬಂಧಿಸಿ ಒಂದು ಲಕ್ಷ ಬಾಂಡ್ ಮತ್ತು ಒಂದು ವರ್ಷ ಹೋರಾಟ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದು ಕೊಡಬೇಕೆಂದು ಪೊಲೀಸರು ಹೇಳಿದ್ದಾರಂತೆ.
ಮಾನ್ಯ ಗೃಹ ಮಂತ್ರಿಗಳಾದ @DrParameshwara ಅವರೇ, ಪೊಲೀಸರಿಗೆ ಈ ರೀತಿ ಮಾಡಲು ಯಾರು ನಿರ್ದೇಶನ ನೀಡಿದ್ದು ?
ಸಂವಿಧಾನ ಬದ್ಧವಾದ ಹೋರಾಟವನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಅಷ್ಟಕ್ಕೂ, ಅವರು ಕೇಳಿದ್ದು ನೌಕರಿಯೇ ಹೊರತು ಬೇರೇನೂ ಅಲ್ಲ. ಪರೀಕ್ಷಾರ್ಥಿಗಳ ಕಿಚ್ಚು ಸರ್ಕಾರಕ್ಕೆ ಇರುಸು ಮುರುಸಾಗಿದೆ.
ಇವರ ನ್ಯಾಯಸಮ್ಮತವಾದ ಹೋರಾಟ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಇದನ್ನು ಹತ್ತಿಕ್ಕಲು ಸರ್ಕಾರ ಯಾವುದೇ ಆದಾಯವಿಲ್ಲದ ಉದ್ಯೋಗಾಕಾಂಕ್ಷಿಗಳಿಗೆ 1 ಲಕ್ಷ ಬಾಂಡ್ ಕೊಡಿ ಮತ್ತು 1 ವರ್ಷ ಹೋರಾಟ ಮಾಡಬಾರದೆಂದು ಧಮ್ಕಿ ಹಾಕುತ್ತಿದ್ದಾರೆ.
ಉದ್ಯೋಗಾಕಾಂಕ್ಷಿಗಳು ಸರ್ಕಾರದ ಗೊಡ್ಡು ಬೆದರಿಕೆಗೆ ಹೆದರದೆ ಯಾವುದೇ ಮುಚ್ಚಳಿಕೆ ನೀಡುವ ಅವಶ್ಯಕತೆ ಇಲ್ಲ. ಸರ್ಕಾರದ ಈ ಸಂವಿಧಾನ ವಿರೋಧಿ ನಡೆಯನ್ನು ಕಾನೂನಾತ್ಮಕವಾಗಿ ಎದುರಿಸೋಣ. ಉದ್ಯೋಗಾಕಾಂಕ್ಷಿಗಳ ಜೊತೆ ನಾನಿದ್ದೇನೆ.
@AKSSAofficial I @CMofKarnataka I
ಎರಡು ಕ್ಷೇತ್ರಗಳ ಉಪ ಚುನಾವಣೆ ಗೆಲ್ಲಲು ಇಡೀ ಸರಕಾರ & ವಿರೋಧ ಪಕ್ಷವೇ ದಾವಣಗೆರೆ, ಬಾಗಲಕೋಟೆಯಲ್ಲಿ ಹೋಗಿ ಕುಳಿತಿರುವಾಗ,
ರಾಜ್ಯದ ಯುವಕರ ಗೋಳು ಕೇಳುವವರು ಯಾರು ❓
ಸರಕಾರದ 30 ದಿನದ ನೇಮಕಾತಿ ಸುಳ್ಳು ಆದೇಶ ನಂಬಿ ಮೋಸ ಹೋದ ರಾಜ್ಯದ ಯುವಕರು.
@AKSSAofficial @Nishkama_Karma1 @ITSCK47@KARGOVTJOBUTS#KPSC#KEA#JOBS
ನಿಷ್ಠಾವಂತ ಅಧಿಕಾರಿ ವರ್ಗಾವಣೆ ಬೇಡ ❌🙏🏻
KEA ನಿರ್ದೇಶಕರಾದ ಪ್ರಸನ್ನ ಸರ್ ಅವರು ಪಾರದರ್ಶಕವಾಗಿ ನೇಮಕಾತಿ ನಡೆಸಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗಿದ್ದಾರೆ.
ಪ್ರಸನ್ನ ಸರ್ ಅವರು KEA ಪೂರ್ಣಾವಧಿ ನಿರ್ದೇಶಕರಾಗಿ ಮುಂದುವರಿಯಬೇಕು, ಸರಕಾರ ಯಾವುದೇ ಕಾರಣಕ್ಕೂ ಅವರನ್ನು ವರ್ಗಾವಣೆ ಮಾಡಬಾರದೆಂದು ಮನವಿ.🙏🏻
@KEA_karnataka
ಸರ್ಕಾರ ಕೂಡಲೇ ಪ್ರಾಮಾಣಿಕ ಅಧಿಕಾರಿಯದಂತಹ ಪ್ರಸನ್ನ ಸರ್ ರವರನ್ನು ವರ್ಗಾವಣೆ ಮಾಡುವುದನ್ನು ನಿಲ್ಲಿಸಿ, @siddaramaiah@khargeಕೂಡಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬೇಕು ಇಲ್ಲದಿದ್ದರೆ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆಯಿಂದ ಏಪ್ರಿಲ್ 8 ರಿಂದ ಧಾರವಾಡದಲ್ಲಿರುವ ಡಿಸಿ ಕಚೇರಿ ಮುಂಭಾಗ ಅನಿರ್ದಿಷ್ಟ ಅವಧಿ ಪ್ರತಿಭಟನೆ ಮಾಡುತಿದ್ದೇವೆ.
ಅಂದು ವಿಕಾಸ್ ಸುರಳ್ಕರ್ ಇಂದು H ಪ್ರಸನ್ನ ಸರ್.
ರಾಜ್ಯದಲ್ಲಿ ನಿಷ್ಠಾವಂತ ಅಧಿಕಾರಿಗಳಿಗೆ ಜಾಗವಿಲ್ಲ ಎಂಬುದು ಮತ್ತೆ ಮತ್ತೇ ಸಾಬೀತು ಆಗುತ್ತಿದೆ.
ಆದರೆ ಈ ಬಾರಿ ನಾವು ಪ್ರಸನ್ನ ಸರ್ ಅವರನ್ನು ಕಳೆದುಕೊಳ್ಳಲು ಸಿದ್ಧವಿಲ್ಲ. @siddaramaiah
ಪ್ರಸನ್ನ ಸರ್ @KEA_karnataka ಪೂರ್ಣಾವಧಿ ನಿರ್ದೇಶಕರಾಗಿರಬೇಕು. 🙏🏻
"ನಾವು ಚಾಪೆ ಕೆಳಗಡೆ ನುಗ್ಗಿದರೆ, ಸರ್ಕಾರ ರಂಗೋಲಿ ಕೆಳಗಡೆ ನುಗ್ಗುತ್ತದೆ" ಎಂಬುದಕ್ಕೆ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳೇ ಜ್ವಲಂತ ಉದಾಹರಣೆ!!!
ಸ್ಪರ್ಧಾತ್ಮಕ ಪರೀಕ್ಷೆಗಳು ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ನಡೆಯಬೇಕು ಮತ್ತು ಭ್ರಷ್ಟಾಚಾರಕ್ಕೆ ಸಂಪೂರ್ಣವಾಗಿ ಕಡಿವಾಣ ಬೀಳಬೇಕು ಎಂಬ ಏಕೈಕ ಸದುದ್ದೇಶದಿಂದ ನಾವೆಲ್ಲರೂ ಒಗ್ಗೂಡಿ ನೇಮಕಾತಿ ಪರೀಕ್ಷೆಗಳ ಜವಾಬ್ದಾರಿಯನ್ನು 'ಕರ್ನಾಟಕ ಪರೀಕ್ಷಾ ಪ್ರಾಧಿಕಾರ'ಕ್ಕೆ (KEA) ವಹಿಸುವಂತೆ ಹಗಲಿರುಳು ಹೋರಾಟ ಮಾಡಿದ್ದೆವು.
ನಮ್ಮ ಆಶಯದಂತೆ KEA ಯಲ್ಲಿ ಒಬ್ಬ ನಿಷ್ಠಾವಂತ, ದಕ್ಷ ಹಾಗೂ ಕಟ್ಟುನಿಟ್ಟಿನ ಅಧಿಕಾರಿಯಾಗಿ ಶ್ರೀ ಹೆಚ್. ಪ್ರಸನ್ನ (IAS) ಸರ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಆಗಮನದ ನಂತರ ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ತರವಾದ ಸುಧಾರಣೆಗಳಾದವು. ಅಕ್ರಮಗಳಿಗೆ, ದಲ್ಲಾಳಿಗಳ ಹಾವಳಿಗೆ ಬ್ರೇಕ್ ಬಿತ್ತು. ಹಗಲಿರುಳು ಓದುವ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ 'ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ' ಎಂಬ ಆಶಾಭಾವನೆ ಮತ್ತೆ ಚಿಗುರೊಡೆದಿತ್ತು.
ಆದರೆ, ಕಳೆಗುಂದಿದ್ದ ವ್ಯವಸ್ಥೆಯನ್ನು ಶುದ್ಧೀಕರಿಸುತ್ತಿರುವ ಇಂತಹ ಪ್ರಾಮಾಣಿಕ ಅಧಿಕಾರಿಯನ್ನು ಸರ್ಕಾರ ಈಗ ದಿಢೀರನೆ ವರ್ಗಾವಣೆ ಮಾಡಲು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿರುವುದು ನಿಜಕ್ಕೂ ವಿಪರ್ಯಾಸ. ಭ್ರಷ್ಟರ ಕೂಪವಾಗಿರುವ ವ್ಯವಸ್ಥೆಯಲ್ಲಿ ಪ್ರಾಮಾಣಿಕರಿಗೆ ಉಳಿಗಾಲವಿಲ್ಲ, ವ್ಯವಸ್ಥೆಯನ್ನು ಸರಿಪಡಿಸಲು ಹೋದರೆ ಎತ್ತಂಗಡಿ ಗ್ಯಾರಂಟಿ ಎಂಬುದನ್ನು ಸರ್ಕಾರ ತನ್ನ ಈ ನಡೆಯ ಮೂಲಕ ಮತ್ತೊಮ್ಮೆ ಸಾಬೀತು ಮಾಡಲು ಹೊರಟಿದೆ.
ತಮ್ಮ ಬೇಳೆ ಬೇಯಿಸಿಕೊಳ್ಳಲು ಮತ್ತು ಭ್ರಷ್ಟ ಪಟ್ಟಭದ್ರ ಹಿತಾಸಕ್ತಿಗಳನ್ನು ರಕ್ಷಿಸಲು ದಕ್ಷ ಅಧಿಕಾರಿಗಳನ್ನೇ ವರ್ಗಾವಣೆ ಮಾಡುವ ಮೂಲಕ ಸರ್ಕಾರ ತನ್ನ ರಾಜಕೀಯ 'ಚಾಣಾಕ್ಷತೆ'ಯನ್ನು ಪ್ರದರ್ಶಿಸುತ್ತಿರಬಹುದು. ಆದರೆ ನೆನಪಿರಲಿ, ಶ್ರೀ ಹೆಚ್. ಪ್ರಸನ್ನ ಅವರಂತಹ ಅಧಿಕಾರಿಯ ವರ್ಗಾವಣೆಯಾದರೆ, ಅದು ಕೇವಲ ಒಬ್ಬ ಅಧಿಕಾರಿಗೆ ಮಾಡುವ ಅನ್ಯಾಯವಲ್ಲ; ಬದಲಾಗಿ ಲಕ್ಷಾಂತರ ನಿರುದ್ಯೋಗಿ ಯುವಜನತೆಯ ಬೆವರಿನ ಶ್ರಮ ಮತ್ತು ಭವಿಷ್ಯದ ಮೇಲೆ ಎಸಗುವ ಅಕ್ಷಮ್ಯ ಅಪರಾಧ.
ಸರ್ಕಾರ ದಕ್ಷ ಅಧಿಕಾರಿಗಳ ಬೆನ್ನಿಗೆ ನಿಲ್ಲಬೇಕೇ ಹೊರತು, ಭ್ರಷ್ಟರ ತಾಳಕ್ಕೆ ತಕ್ಕಂತೆ ಕುಣಿಯಬಾರದು. ನಿಷ್ಠಾವಂತ ಅಧಿಕಾರಿಯ ಈ ವರ್ಗಾವಣೆ ಪ್ರಸ್ತಾವನೆಯನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು. ಇಲ್ಲವಾದಲ್ಲಿ, ಉದ್ಯೋಗಾಕಾಂಕ್ಷಿಗಳ ಮತ್ತು ವಿದ್ಯಾರ್ಥಿ ಸಮುದಾಯದ ಪ್ರಬಲ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ!
@eshwar_khandre@HKPatilINC @NCheluvarayaS @blsanthosh@BJP4Karnataka@INCKarnataka@publictvnews@AsianetNewsSN@prajavani@KannadaPrabha@shalinirajnish@BasanagoudaBJP@Dr_Yathindra_S@RLR_BTM@ashwaveganews@BasanagoudaBJP@PriyankKharge@DKShivakumar@tv9kannada@Sowmyareddyr@KhMuniyappa@byrathi_suresh@sstangadagi@RahulGandhi@iShivanandpatil@MBPatil@dineshgrao@BZZameerAhmedK@krishnabgowda@laxmi_hebbalkar @dsudhakar2727 @DrParameshwara