ಯಾವ ಕಂಪನಿಗೆ ಬಂದು ಮಾಹಿತಿಗೆ ಆಗ್ರಹಿಸಬೇಕು ಅಂತ ಧೈರ್ಯವಾಗಿ ಹೇಳಿ, ಕಂಪನಿಗಳ ಹೆಸರನ್ನು list ಮಾಡಿಕೊಂಡು ಕಂಪನಿಯ ಪ್ರತಿನಿಧಿಯಿಂದ ಮಾಹಿತಿಗೆ ಆಗ್ರಹಿಸೊಕ್ಕೆ ಅನುಕೂಲವಾಗುತ್ತೆ..
reply ನಲ್ಲಿ ಕಂಪನಿಯ ಮಾಹಿತಿಯನ್ನು ಧೈರ್ಯವಾಗಿ ಕೊಡಿ.
ಐಟಿ ಬಿಟಿ ಸಂಸ್ಥೆಗಳೂ ಸೇರಿದಂತೆ ಕರ್ನಾಟಕದ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಎಷ್ಟು ಪ್ರಮಾಣದಲ್ಲಿ ನೀಡಲಾಗುತ್ತಿದೆ, ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ತಾರತಮ್ಯ ಎಸಗಲಾಗುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಕರ್ನಾಟಕ ರಕ್ಷಣಾ ವೇದಿಕೆ ಇಂದು ʻಆಗ್ರಹ ಅಭಿಯಾನʼವನ್ನು ಆರಂಭಿಸಿದೆ.
ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು ಇಂದು ಹಲವು ತಂಡಗಳಲ್ಲಿ ಬೆಂಗಳೂರಿನ ಹಲವು ಭಾಗಗಳಲ್ಲಿ ಇರುವ ಖಾಸಗಿ ಸಂಸ್ಥೆಗಳಿಗೆ ಭೇಟಿ ನೀಡಿ ಆಗ್ರಹ ಪತ್ರವನ್ನು ಸಲ್ಲಿಸಿದರು. ಖಾಸಗಿ ಸಂಸ್ಥೆಗಳಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದ್ದು, ಮಾಹಿತಿ ಒದಗಿಸುವ ಮತ್ತು ಕನ್ನಡಿಗರಿಗೆ ಉದ್ಯೋಗ ಖಾತರಿಪಡಿಸುವ ಭರವಸೆಗಳು ದೊರಕಿವೆ.
ನಾನು ಹಿಂದೆಯೇ ಹೇಳಿದಂತೆ ಇದು ಅಭಿಯಾನ, ಪ್ರತಿಭಟನೆ ಅಲ್ಲ. ಗೊಂದಲ ಸೃಷ್ಟಿಸುವ ಅಥವಾ ನೈತಿಕ ಪೊಲೀಸ್ ಗಿರಿ ಮಾಡುವ ಚಟುವಟಿಕೆ ಅಲ್ಲ. ನಮ್ಮ ಮುಖಂಡರು ಎಲ್ಲ ಖಾಸಗಿ ಸಂಸ್ಥೆಗಳ ಮುಖ್ಯಸ್ಥರು/ಪ್ರತಿನಿಧಿಗಳ ಜೊತೆ ಗೌರವಯುತವಾಗಿ ನಡೆದುಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಉದ್ಯೋಗಾವಕಾಶಗಳ ಸಿಂಹಪಾಲನ್ನು ಕನ್ನಡಿಗರಿಗೇ ನೀಡಬೇಕು ಎಂಬುದು ನಮ್ಮ ಆಗ್ರಹ. ಈ ಸಂಸ್ಥೆಗಳ ನೈತಿಕ, ಸಾಮಾಜಿಕ ಹೊಣೆಗಾರಿಕೆಯನ್ನು ನೆನಪಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ.
ಕರ್ನಾಟಕ ರಕ್ಷಣಾ ವೇದಿಕೆ ಐಟಿ-ಬಿಟಿ ಸೇರಿದಂತೆ ಯಾವುದೇ ಖಾಸಗಿ ಸಂಸ್ಥೆಗಳ ವಿರುದ್ಧವೂ ಪೂರ್ವಾಗ್ರಹ ಹೊಂದಿಲ್ಲ. ಕನ್ನಡಿಗರಿಗೆ ಉದ್ಯೋಗ ದೊರೆಯಬೇಕೆಂಬ ನಮ್ಮ ನಿಲುವನ್ನು ತಾತ್ವಿಕವಾಗಿ ಅವರೂ ಒಪ್ಪುತ್ತಾರೆ ಎಂಬ ಭರವಸೆ ನಮಗಿದೆ. ಆದರೆ ಈ ಸಂಸ್ಥೆಗಳ ಪ್ರತಿನಿಧಿಗಳೆಂಬಂತೆ, ರಾಯಭಾರಿಗಳೆಂಬಂತೆ ಮಾತನಾಡುವ ಕೆಲವರು ಕನ್ನಡಿಗರ ಹಕ್ಕುಗಳ ವಿರುದ್ಧ ಮಾತನಾಡುತ್ತ ಗೊಂದಲ ಸೃಷ್ಟಿಸುತ್ತಿದ್ದಾರೆ.
ಆಗ್ರಹ ಅಭಿಯಾನ ರಾಜ್ಯದ ಎಲ್ಲ ಭಾಗಗಳಲ್ಲೂ ಆರಂಭಗೊಂಡಿದೆ. ಈ ಅಭಿಯಾನ ನವೆಂಬರ್ ತಿಂಗಳಿನ ಉದ್ದಕ್ಕೂ ನಡೆಯಲಿದೆ. ಇದಾದ ಖಾಸಗಿ ಸಂಸ್ಥೆಗಳು ಉದ್ಯೋಗಾವಕಾಶಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಒದಗಿಸಿದ ನಂತರ ರಾಜ್ಯ ಸರ್ಕಾರಕ್ಕೆ ಒಂದು ಸಮಗ್ರ ವರದಿಯನ್ನು ಸಲ್ಲಿಸಲಾಗುವುದು.
Working in post office doesn’t required rocket science. Hire Kannada people for post offices in Karnataka. Or else all kannadigas boycott Post office services.
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS) ಮಾಡಿದ ಆರೋಪಗಳು ಸುಳ್ಳಾಗಲಿಲ್ಲ. ಹಲವು ಬಾರಿ ಪರಿಶೀಲಿಸಿ, ಸೂಕ್ತ ದಾಖಲೆಗಳನ್ನು ಸಂಗ್ರಹಿಸಿದ ಬಳಿಕವೇ ನಾವು ಅಕ್ರಮದ ವಿರುದ್ಧ ಧ್ವನಿ ಎತ್ತಿದ್ದೇವೆ.
ಹಗಲು-ರಾತ್ರಿ ಶ್ರಮಿಸುವ ಪ್ರಾಮಾಣಿಕ ವಿದ್ಯಾರ್ಥಿಗಳ ಪರವಾಗಿ ನಮ್ಮ ಹೋರಾಟ ಸದಾ ಮುಂದುವರಿಯಲಿದೆ. ಯಾರಿಗೂ ಅನ್ಯಾಯವಾಗದಂತೆ @KEA_karnataka ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಪರೀಕ್ಷೆಗಳನ್ನು ನಡೆಸಲಿ.
ಅಕ್ರಮದ ಅಂಶಗಳನ್ನು ಹೊರತರುವಲ್ಲಿ ಶ್ರಮಿಸಿದ #ಪೊಲೀಸ್ ಇಲಾಖೆ ಹಾಗೂ #KEA ಕಾರ್ಯನಿರ್ವಾಹಕ ನಿರ್ದೇಶಕರಾದ ಸನ್ಮಾನ್ಯ ಪ್ರಸನ್ನ ಕುಮಾರ್ IAS ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
ನಮ್ಮ ಹೋರಾಟ ಅನ್ಯಾಯದ ವಿರುದ್ಧ, ಪ್ರಾಮಾಣಿಕ ವಿದ್ಯಾರ್ಥಿಗಳ ಪರವಾಗಿ! ಸದಾ ನಿರಂತರವಾಗಿ ಮುಂದುವರಿಯಲಿದೆ...
ಯಾವುದೇ ವಿದ್ಯಾರ್ಥಿಗಳು ದಯವಿಟ್ಟು ನಿಮ್ಮ ಪ್ರತಿಬೆಯನ್ನು ನಂಬಿ ಅಕ್ರಮದ ಹಾದಿ ಬೇಡ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ
ಬದುಕಲು ಸ್ಪರ್ಧಾತ್ಮಕ ಪರೀಕ್ಷೆ ಒಂದೇ ದಾರಿಯಲ್ಲಿ ಅದರ ಆಚೆಗೂ ಹಲವಾರು ಉತ್ತಮ ಅವಕಾಶಗಳಿವೆ...🙏🙏
@Sandeepraiii@CMofKarnataka@DKShivakumar@DeepakThimaya@tv9kannada@siddaramaiah@JarkiholiSatish@krishnabgowda@PriyankKharge@DrParameshwara@BSBommai@hd_kumaraswamy@BJP4Karnataka@INCKarnataka@JanataDal_S@Sandeepraiii@prajavani@DeccanHerald@Vijayavani_Digi@publictvnews
#karnataka #kpsc #kea #scst #reservation
– ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (KSVS)
ಐಟಿ-ಬಿಟಿ ಸಂಸ್ಥೆಗಳಿಗೆ ʻಆಗ್ರಹ ಅಭಿಯಾನʼ ನಿಲ್ಲುವುದಿಲ್ಲ.
ಅಭಿಯಾನ ನಿಲ್ಲಿಸಲು ಮುಂದಾದರೆ ಸರ್ಕಾರವೇ ಸಂಘರ್ಷಕ್ಕೆ ಆಹ್ವಾನಿಸಿದಂತಾಗುತ್ತದೆ.
ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್
@CMofKarnataka@DKShivakumar ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಷಯವನ್ನು ಗಮನಿಸಿದೆ.
ಬೆಂಗಳೂರಿನ ಐಟಿ-ಬಿಟಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನಿರಾಕರಿಸಲಾಗುತ್ತಿದೆ ಮತ್ತು ಮಾತೃಭಾಷಿಕರನ್ನು ಕಡೆಗಣಿಸಲಾಗುತ್ತಿದೆ ಎಂಬ ದೂರುಗಳನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿರುವುದಾಗಿ ಅವರು ಹೇಳಿದ್ದಾರೆ.
ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು. ನಮ್ಮ ನೆಲದ ಯುವಕ-ಯುವತಿಯರ ಉದ್ಯೋಗದ ಹಕ್ಕು, ಸ್ವಾಭಿಮಾನ ಹಾಗೂ ಅವಕಾಶಗಳನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಸರ್ಕಾರ ಕಿಂಚಿತ್ತೂ ಸಹಿಸುವುದಿಲ್ಲ. ಕನ್ನಡಿಗರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುವ ಯಾವುದೇ ಖಾಸಗಿ ಸಂಸ್ಥೆಯಾಗಿದ್ದರೂ, ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಕೂಡ ಅವರು ಹೇಳಿದ್ದಾರೆ.
ಈ ವಿಚಾರದಲ್ಲಿ ಸರ್ಕಾರವೇ ನೇರವಾಗಿ ಎಚ್ಚರಿಕೆ ವಹಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ. ಹೀಗಾಗಿ, ಯಾವುದೇ ಸಂಘಟನೆಗಳು ಐಟಿ-ಬಿಟಿ ಕಂಪನಿಗಳಿಗೆ ನೇರವಾಗಿ ತೆರಳಿ ಮನವಿ ಸಲ್ಲಿಸುವ ಅಥವಾ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ, ನಾಡಿನ ಯುವಜನತೆಯ ಉದ್ಯೋಗ ಭದ್ರತೆ ಮತ್ತು ಹಿತರಕ್ಷಣೆಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಸರ್ಕಾರದ ಕಾಳಜಿ ಸ್ವಾಗತಾರ್ಹ. ಇದು ಕೇವಲ ಮಾತುಗಳಲ್ಲಿ ಕಾಣಿಸಿಕೊಂಡರೆ ಸಾಕಾಗುವುದಿಲ್ಲ. ಸರ್ಕಾರ ಕ್ರಿಯೆಗೆ ಇಳಿಯಬೇಕು. ಎಷ್ಟೋ ಸರ್ಕಾರಗಳು ಬಂದು ಹೋದವು. ಸಮಸ್ಯೆಗಳನ್ನು ಬಗೆಹರಿಸುವುದಿರಲಿ, ಕನ್ನಡಿಗರ ಕಷ್ಟಗಳಿಗೆ ಕನಿಷ್ಠ ಕಿವಿಯಾಗುವ ಕೆಲಸವನ್ನೂ ಅವರು ಮಾಡಲಿಲ್ಲ.
ನಾವು ಐಟಿ-ಬಿಟಿ ಸಂಸ್ಥೆಗಳಿಗೆ ತೆರಳಿ ಮನವಿ ಸಲ್ಲಿಸುವ ʻಆಗ್ರಹ ಅಭಿಯಾನʼವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಇದರಿಂದ ಗೊಂದಲ ಸೃಷ್ಟಿಯಾಗುತ್ತದೆ ಎಂದು ಮುಖ್ಯಮಂತ್ರಿಯಾದಿಯಾಗಿ ಯಾರೂ ಭಾವಿಸಬೇಕಿಲ್ಲ. ನಾವು ಹೋಗುತ್ತಿರುವುದು ಸಂಘರ್ಷ ಸೃಷ್ಟಿಸಲು ಅಲ್ಲ; ಸಂಸ್ಥೆಗಳಲ್ಲಿ ಕನ್ನಡಿಗರ ಪ್ರಾತಿನಿಧ್ಯ ಎಷ್ಟು ಇದೆ ಎಂಬುದನ್ನು ತಿಳಿದುಕೊಳ್ಳಲು. ಹಾಗೆಯೇ ಯಾವ ಸಂಸ್ಥೆಗಳಲ್ಲಿ ಕನ್ನಡಿರಿಗೆ ಉದ್ಯೋಗಾವಕಾಶ ನಿರಾಕರಿಸಲಾಗುತ್ತಿದೆ ಎಂಬುದನ್ನು ನೇರವಾಗಿ ಪರಿಶೀಲಿಸಬೇಕಿದೆ. ಇದೇ ಸಂದರ್ಭದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ಖಾತರಿ ಪಡಿಸುವಂತೆ ನಾವು ಸಂಸ್ಥೆಗಳನ್ನು ಆಗ್ರಹಿಸಲಿದ್ದೇವೆ.
ಈ ಅಭಿಯಾನದಲ್ಲಿ ಭಾಗವಹಿಸುವ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು. ಯಾವುದೇ ಪ್ರತಿಭಟನೆ, ಘರ್ಷಣೆಗಳನ್ನು ನಡೆಸಲು ಅವರು ಹೋಗುತ್ತಿಲ್ಲ. ಆ ವಿವೇಕ, ತಿಳಿವಳಿಕೆ, ಸಾಮಾಜಿಕ ಪ್ರಜ್ಞೆ ನಮಗೆ ಇದೆ. ಹೀಗಾಗಿ ಮುಖ್ಯಮಂತ್ರಿಗಳು ಆತಂಕಪಡುವ ಯಾವ ಅಗತ್ಯವೂ ಇಲ್ಲ.
ನಮ್ಮ ಅಭಿಯಾನವನ್ನು ನಿಲ್ಲಿಸಿ ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆಯ ದೇಶ. ಎಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ನಮಗಿದೆ. ಸರ್ಕಾರಗಳು ಇಷ್ಟು ವರ್ಷ ಏನನ್ನು ಮಾಡಿವೆ ಎಂಬುದನ್ನು ನಾವೂ ಕೂಡ ನೋಡುತ್ತ ಬಂದಿದ್ದೇವೆ. ಇನ್ನಷ್ಟು ವರ್ಷಗಳ ಕಾಲ ಕಾಯುವ ತಾಳ್ಮೆಯೂ ನಮಗಿಲ್ಲ. ಕನ್ನಡಿಗರ ಬದುಕು ಮೂರಾಬಟ್ಟೆಯಾಗಿ ಹೋಗುತ್ತಿದೆ. ಅದು ಸಂಪೂರ್ಣ ನಾಶವಾಗುವ ಮುನ್ನ ನಾವು ಎಚ್ಚೆತ್ತುಕೊಳ್ಳದೆ ವಿಧಿಯಿಲ್ಲ.
ಸರ್ಕಾರ ನಮ್ಮ ಅಭಿಯಾನ ನಿಲ್ಲಿಸಲು ಬಲಪ್ರಯೋಗದಂಥ ಕೃತ್ಯಗಳನ್ನು ಅಸಾಂವಿಧಾನಿಕವಾಗಿ ನಡೆಸಲು ಮುಂದಾದರೆ ಸರ್ಕಾರವೇ ನೇರವಾಗಿ ಸಂಘರ್ಷಕ್ಕೆ ಆಹ್ವಾನ ನೀಡಿದಂತಾಗುತ್ತದೆ. ಅದು ಅನಗತ್ಯವಾಗಿ ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಕನ್ನಡ ಪ್ರೇಮಿಗಳನ್ನು ಕೆರಳಿಸುತ್ತದೆ. ಹೀಗೇನಾದರೂ ಆದರೆ ರಾಜ್ಯದ ಮೂಲೆ ಮೂಲೆಯಲ್ಲೂ ಸರ್ಕಾರದ ವಿರುದ್ಧವೇ ನಾವು ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸುತ್ತಿದ್ದೇನೆ.
ನಮ್ಮ ಅಭಿಯಾನ ಪೂರ್ಣಗೊಂಡ ನಂತರ ನಮಗೆ ಈ ಸತ್ಯಶೋಧನೆಯಲ್ಲಿ ತಿಳಿದುಬರುವ ಅಂಶಗಳನ್ನು ಒಳಗೊಂಡ ಸಮಗ್ರ ವರದಿಯನ್ನು ನಾವೇ ಸರ್ಕಾರಕ್ಕೆ ಸಲ್ಲಿಸುತ್ತೇವೆ. ನಂತರ ಸರ್ಕಾರ ತನ್ನ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸುತ್ತದೆ ಎಂಬ ವಿಶ್ವಾಸವಿದೆ.
-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ
ಬೆಂಗಳೂರಿನ ಐಟಿ-ಬಿಟಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನಿರಾಕರಿಸಲಾಗುತ್ತಿದೆ ಮತ್ತು ಮಾತೃಭಾಷಿಕರನ್ನು ಕಡೆಗಣಿಸಲಾಗುತ್ತಿದೆ ಎಂಬ ದೂರುಗಳನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.
ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು. ನಮ್ಮ ನೆಲದ ಯುವಕ-ಯುವತಿಯರ ಉದ್ಯೋಗದ ಹಕ್ಕು, ಸ್ವಾಭಿಮಾನ ಹಾಗೂ ಅವಕಾಶಗಳನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಸರ್ಕಾರ ಕಿಂಚಿತ್ತೂ ಸಹಿಸುವುದಿಲ್ಲ. ಕನ್ನಡಿಗರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುವ ಯಾವುದೇ ಖಾಸಗಿ ಸಂಸ್ಥೆಯಾಗಿದ್ದರೂ, ಅವರ ವಿರುದ್ಧ ಕ್ರಮ ಜರುಗಿಸಲಾಗುವುದು.
ಈ ವಿಚಾರದಲ್ಲಿ ಸರ್ಕಾರವೇ ನೇರವಾಗಿ ಎಚ್ಚರಿಕೆ ವಹಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ. ಹೀಗಾಗಿ, ಯಾವುದೇ ಸಂಘಟನೆಗಳು ಐಟಿ-ಬಿಟಿ ಕಂಪನಿಗಳಿಗೆ ನೇರವಾಗಿ ತೆರಳಿ ಮನವಿ ಸಲ್ಲಿಸುವ ಅಥವಾ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ನಾಡಿನ ಯುವಜನತೆಯ ಉದ್ಯೋಗ ಭದ್ರತೆ ಮತ್ತು ಹಿತರಕ್ಷಣೆಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ.
Our Government has taken serious note of complaints that Kannadigas are being denied employment opportunities and native Kannada speakers are being overlooked in Bengaluru’s IT-BT sector.
The rights, dignity and employment opportunities of Kannadigas are of utmost importance to our government. We will not tolerate any deliberate discrimination against the youth of our state, and appropriate action will be taken against any private establishment found engaging in such practices.
I want to assure everyone that the government will directly look into this matter and take all necessary steps to address these concerns. Therefore, I appeal to all organisations not to visit IT-BT companies directly or take matters into their own hands. Such issues must be resolved through dialogue and within the framework of the law. Our government remains firmly committed to protecting the rights and interests of Kannadigas.
1/4
Request to @KEA_karnataka MD Sir 🙏
Land Surveyor exam Oct 2026 & FDA/SDA exam Jan 2027 have many common candidates. Many will join Land Surveyor & then resign to join FDA/SDA as it is higher cadre.
Agni assisted me during making of SSE Side B, and I remember his passion for cinema. He is ready with his debut feature 'Rudhiravana'
I know he has put a ton of passion, blood, sweat, and tears to make this film.
I'm incredibly proud and happy to present the first teaser of #Rudhiravana to the world. Here's wishing Agni and the entire team the very best. Can't wait for all of you to experience this on the big screen! Its got the superb @GowdaPaavana in the lead.
All the very best @Agni_cool
https://t.co/YjvZbGbbMl
ಶ್ರೀ ಪ್ರಸನ್ನ, ಹೆಚ್. ಭಾ,ಆ,ಸೇ. 🙏🏻❤️
ಕರ್ನಾಟಕ ರಾಜ್ಯ ಪಡೆದ ಅತ್ಯುತ್ತಮ IAS ಅಧಿಕಾರಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಾತಿಯಲ್ಲಿ ಪಾರದರ್ಶಕತೆಗೆ ಶ್ರಮಿಸಿದ್ದೀರಿ.
ಸ್ಪರ್ಧಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ವ್ಯವಸ್ಥೆಯಲ್ಲಿ Center wise OMR Scanned Copy Upload ಹಾಗೂ Merit wise Marks list ಮತ್ತು 3 Layer OMR Copy ಎಂಬ ಐತಿಹಾಸಿಕ ಪದ್ಧತಿ ಜಾರಿಗೆ ತಂದಿದ್ದೀರಿ.
#KEA ನಡೆಸುವ ಶೀಘ್ರ ನೇಮಕಾತಿ ಪ್ರಕ್ರಿಯೆ ಲಕ್ಷಾಂತರ ಅರ್ಹ ಅಭ್ಯರ್ಥಿಗಳಿಗೆ ನಿಗದಿತ ಸಮಯದಲ್ಲಿ ಸರಕಾರಿ ಹುದ್ದೆ ಸಿಗುವಂತಾಗಿದೆ.
#SDA/#FDA 2026 ರ ನೇಮಕಾತಿಯಲ್ಲಿ ಕೌನ್ಸಲಿಂಗ್ ಮಾದರಿ ಆಯ್ಕೆ ಜಾರಿ ಮಾಡಿ ಒಬ್ಬ ವಿದ್ಯಾರ್ಥಿ 4-5 ಹುದ್ದೆ ಪಡೆದು ನಂತರ ಕೊನೆಗೆ ಒಂದು ಆಯ್ಕೆಮಾಡಿ ಉಳಿದ ಹುದ್ದೆಗಳು ಖಾಲಿ ಉಳಿಯಬಾರದು ಎಂಬ ಉದ್ದೇಶದಿಂದ, ಆಯ್ಕೆ ಪಟ್ಟಿಯಲ್ಲಿ ಕಡಿಮೆ ಅಂಕ ಪಡೆದ ಕೆಳಗಿನ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೌನ್ಸಲಿಂಗ್ ಮಾದರಿ ಆಯ್ಕೆ ಜಾರಿ ಮಾಡಿರುವುದರಿಂದ ಲಕ್ಷಾಂತರ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನುಕೂಲವಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಮ್ಮ ಆಡಳಿತದಲ್ಲಿ ಪ್ರತಿ ನೇಮಕಾತಿಯೂ ಪಾರದರ್ಶಕವಾಗಿ ನಡೆಯುತ್ತೆ ಎಂಬ ನಂಬಿಕೆ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಇದೆ.
ನಾಡಿನ ಲಕ್ಷಾಂತರ ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳ ಪರವಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಪ್ರಸನ್ನ ಸರ್ 🙏🏻❤️
@KEA_karnataka@KA_Govt_Jobs@KPSC_Reforms@KARGOVTJOBUTS@ChekrishnaCk@secretarykpsc@AKSSAofficial@kpscadda@Sandeepraiii@Rayaraddi_B@INCKarnataka@DKShivakumar@DrParameshwara@CMofKarnataka@osd_cmkarnataka@BasanagoudaBJP@BJP4Karnataka #KPSC #KEA #VAO #KAS #KPSC #SDA #FDA
FDA ಹಾಗೂ SDA ಹುದ್ದೆಗಳ ನೇಮಕಾತಿ ಪರೀಕ್ಷೆಯ ಸಿದ್ಧತೆಗೆ ಕನಿಷ್ಠ 3 ರಿಂದ 4 ತಿಂಗಳ ಕಾಲಾವಕಾಶ ನೀಡುವಂತೆ @KEA_karnataka ಗೆ ಮನವಿ ಮಾಡಿದ ರಾಜ್ಯ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಹಿತರಕ್ಷಣಾ ಸಮಿತಿ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತ ವಾಗುತ್ತಿದ್ದಂತೆಯೇ @KEA_karnataka ನಿರ್ದೇಶಕರಾದ H. ಪ್ರಸನ್ನ ಸರ್ ಅವರು ತಕ್ಷಣ ಪ್ರತಿಕ್ರಿಯೆ ನೀಡಿ, ಹಾವೇರಿ ಜಿಲ್ಲಾಧಿಕಾರಿಗಳಿಗೆ ತನಿಖೆಗೆ ಆದೇಶಿಸಿದ್ದು ನಿಜಕ್ಕೂ ಮೆಚ್ಚುವಂತ ವಿಷಯ. 👏🏻
ನಮಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಪ್ರಸನ್ನ ಸರ್ ಅವರ ಮೇಲೆ ಅಪಾರ ನಂಬಿಕೆ ಇದೆ. ತಾವು OMR Upload & Marks List ಬಿಡುವ ಪದ್ಧತಿ ಜಾರಿ ಗೊಳಿಸದಿದ್ದರೆ ಹೀಗೆ Marks Deference ಕಂಡು ಹಿಡಿಯಲು ಕಷ್ಟ ಆಗುತ್ತಿತ್ತು...
ನಿಮ್ಮ ವಿದ್ಯಾರ್ಥಿಪರ ಕಾಳಜಿ ಹಾಗೂ ನೇಮಕಾತಿ ಪಾರದರ್ಶಕ ನೀತಿಯನ್ನು ನಾವು ಗೌರವಿಸುತ್ತೇವೆ..
ಆದರೆ ಈಗ ಬೆಳಕಿಗೆ ಬಂದಿರುವ ಹಾವೇರಿ ಮತ್ತು ಇತರ ಜಿಲ್ಲೆಗಳಲ್ಲಿ ಅಭ್ಯರ್ಥಿಗಳು ಪಡೆದಿರುವ ಅಂಕಗಳ ವ್ಯತ್ಯಾಸದಿಂದ ಹಲವಾರು ಅಭ್ಯರ್ಥಿಗಳಲ್ಲಿ ಕಳವಳ ಉಂಟಾಗಿದೆ. ದಯವಿಟ್ಟು ಅದನ್ನು ಕೂಲಂಕುಶವಾಗಿ ತನಿಖೆ ಮಾಡಿ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿ ಕೊಡಬೇಕಾಗಿ ವಿನಂತಿ.
@KEA_karnataka@ChekrishnaCk@KPSC_Reforms@INCKarnataka @osd_cmkar @Sandeepraiii@KARGOVTJOBUTS #KPSC #KEA #VAO