ಅಫಜಲಪುರ ಮತಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಪ್ರಭಾವ ಮತ್ತು ಅಸ್ತಿತ್ವ ಇಲ್ಲ ಅನ್ನೋರು ಅವಶ್ಯವಾಗಿ ತಿಳಿಯಬೇಕು
ಮಾನ್ಯ M Y Patil ಅವರೂ ಕೂಡಾ ಮೊದಲ ಬಾರಿಗೆ MLA ಆಗಿ ವಿಧಾನಸೌಧ ಮೆಟ್ಟಿಲೇರಿದ್ದು ಜೆಡಿಎಸ್ ಪಕ್ಷದಿಂದಲೇ....
ಆದೆ ರೀತಿ ಮಾನ್ಯ ಮಾಲಿಕಯ್ಯ ಗುತ್ತೇದಾರ್ ಅವರು ಮೊದಲ ಬಾರಿಗೆ MLA ಆಗಿದ್ದು ಜನತಾ ಪಕ್ಷದಿಂದ ಗೆಲುವು ಕಂಡು 1/2
ಗ್ರಾಮ ಪಂಚಾಯತಿ ವಿನ್ಯಾಸ ಅನುಮೋದಿತ ಆಸ್ತಿ ವರ್ಗೀಕರಣದಡಿ 11ಎ ಪಡೆಯಲು ಅರ್ಜಿ ಸಲ್ಲಿಸಿ. ಮನೆಯಿಂದಲೇ ಆನ್ಲೈನ್ನಲ್ಲಿ ಇ-ಸ್ವತ್ತು 2.0 ತಂತ್ರಾಂಶದ https://t.co/B4Hy2jSiZJ ಮೂಲಕ ಇ-ಖಾತಾಗೆ ಅರ್ಜಿ ಸಲ್ಲಿಸಿ. ಇ-ಸ್ವತ್ತು ಪಡೆಯಲು ಸಹಾಯವಾಣಿ ಸಂಖ್ಯೆ 9483476000 ಗೆ ಕರೆ ಮಾಡಿ
@PriyankKharge@CommrPR@rdwsd_gok @MgnregsK
ಬಸವಾದಿ ಶರಣರ ಹೆಸರಿನ ದುರ್ಬಳಕೆಯನ್ನು ಲಿಂಗಾಯತರು ಗಮನಿಸುತ್ತಿದ್ದಾರೆ.
https://t.co/Z0MEMDtyyB
ಅಕ್ಟೊಬರ್ ತಿಂಗಳಲ್ಲಿ ಹಿಂದೂ ತಾಲಿಬಾನಿ ಬಾಡಿಗೆ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಘೋಷಿಸಿದಂತೆ ‘ಬಸವಾದಿ ಶರಣರ ಹಿಂದೂ ಸಮಾವೇಶ’ ಸಚಿವ ಎಂ ಬಿ ಪಾಟೀಲರ ಬಬಲೇಶ್ವರ ಕ್ಷೇತ್ರದಿಂದಲೇ ಶುರುವಾಗುತ್ತಿದೆ.
ಈ ಸಮಾವೇಶ ಕನ್ನೇರಿ ಶ್ರೀಗಳ ಪರವೂ ಅಲ್ಲ, ಎಂ ಬಿ ಪಾಟೀಲ್ ವಿರುದ್ದವೂ ಅಲ್ಲ, ಸಂಘ ಪರಿವಾರದ ಶಕ್ತಿ ಪ್ರದರ್ಶನವೂ ಅಲ್ಲ ಎಂದು ಶಿರೋಳದ ಶಂಕರಾರೂಢ ಸ್ವಾಮೀಜಿ ಇತ್ತೀಚಿಗೆ ಒತ್ತಿ ಒತ್ತಿ ಹೇಳಿದರು. ಕನ್ನೇರಿ ಸ್ವಾಮಿಯ ಆಪ್ತರೂ ಆಗಿರುವ ಶಂಕರಾರೂಢ ಸ್ವಾಮೀಜಿ ಸೂಲಿಬೆಲೆ ಸಮಾವೇಶದ ಮುಖ್ಯ ವಕ್ತಾರರಂತೆ ಕಾಣಿಸಿಕೊಳ್ಳುತ್ತಿದ್ದಾರೆ.
ನಡೆ ನುಡಿಗೆ ಸಂಬಂಧ ಕಲ್ಪಿಸದ ವಿಶಿಷ್ಟ ಜನ ಸಂಘಪರಿವಾರದವರು. ಇವರು ಹೇಳುವುದೊಂದು ಮಾಡುವುದೊಂದು.
ಅಕ್ಟೊಬರ್ ತಿಂಗಳಲ್ಲಿ ಕನ್ನೇರಿ ಸ್ವಾಮಿಯನ್ನು ವಿಜಯಪುರದಿಂದ ಆಚೆ ಹಾಕಿದಾಗ ಅವರ ಹಿಂದೂ ತಾಲಿಬಾನಿ ಶಾಸಕ ಬಸನಗೌಡ ಯತ್ನಾಳ ವೀರಾವೇಶದ ಭಾಷಣ ಮಾಡಿದ್ದರು.
ನ್ಯಾಯಾಲಯದಲ್ಲಿ ಗೆದ್ದು ಭವ್ಯ ಮೆರವಣಿಗೆ ಮಾಡಿಕೊಂಡೇ ವಿಜಯಪುರಕ್ಕೆ ಶ್ರೀಗಳನ್ನ ಕರೆ ತರುತ್ತೇವೆ. ಎಂ.ಬಿ.ಪಾಟೀಲರೇ ನೀವು ಸುಮ್ಮನೆ ಮುಖ, ತಿ* ಮುಚ್ಚಿಕೊಂಡು ಇರಬೇಕು ಅಷ್ಟೆ ಎಂದು ಹೇಳಿದ್ದರು.
ಬಬಲೇಶ್ವರ ಸಮಾವೇಶ ಶಕ್ತಿ ಪ್ರದರ್ಶನ ಹೌದೋ ಅಲ್ಲವೋ? ಇದನ್ನು ಉತ್ತರಿಸಲು ಯತ್ನಾಳರ ಆ ಪ್ರತಿಜ್ಞೆಯನ್ನು ನೆನಪು ಮಾಡಿಕೊಳ್ಳಬೇಕು.
ನ್ಯಾಯಾಲಯದಲ್ಲಿ ಗೆಲ್ಲುವುದಿರಲಿ ಹೈ ಕೋರ್ಟ್, ಸುಪ್ರೀಂ ಕೋರ್ಟುಗಳಲ್ಲಿ ಮಂಗಳಾರತಿ ಮಾಡಿಸಿಕೊಂಡು ಕನ್ನೇರಿ ಸ್ವಾಮಿ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ನಿರ್ಬಂಧದ ಅವಧಿ ಮುಗಿಯುವವರೆಗೆ ಕಾಯಬೇಕಾಯಿತು. ಧಾರವಾಡ ಪೀಠ ನಿರೀಕ್ಷೆಯಂತೆ ತೀರ್ಪು ಕೊಟ್ಟರೂ ಅಲ್ಲಿಗೆ ಕನ್ನೇರಿ ಸ್ವಾಮಿಯನ್ನು ಕಳಿಸುವ ಸಾಹಸ ಸಂಘ ಪರಿವಾರ ಮಾಡಲಿಲ್ಲ.
ಲಿಂಗಾಯತರ ಜೊತೆ ಈಗ ನಡೆಯುತ್ತಿರುವ ಘರ್ಷಣೆ ಮಿತಿ ದಾಟುವ ಬಗ್ಗೆ ಅವರಿಗೆ ಗಾಬರಿಯಿದೆ ಎನ್ನುವುದು ಇದರ ನೇರ, ಸ್ಪಷ್ಟ ಅರ್ಥ. ಬ್ರಿಟಿಷರಂತೆ ಸಣ್ಣ ಸಣ್ಣ ವಿವಾದ ಹುಟ್ಟುಹಾಕಿ ಲಿಂಗಾಯತರನ್ನು ಒಡೆದು ಆಳುವುದು ಇವರ ಉದ್ದೇಶ. ಘರ್ಷಣೆಯ ಮೇಲೆ ಹಿಡಿತ ತಪ್ಪಿ ಪರಿಸ್ಥಿತಿ ಕೈಮೀರಿದರೆ ಲಿಂಗಾಯತರು ಏನು ಮಾಡುತ್ತಾರೆ ಎನ್ನುವುದೂ ಅವರಿಗೆ ಗೊತ್ತು.
ಅದಕ್ಕೆ ಬಬಲೇಶ್ವರ ಸಮಾವೇಶ ಯಾರ ಪರವೂ ಅಲ್ಲ, ಯಾರ ವಿರೋದವೂ ಅಲ್ಲ ಅನ್ನೋ ನುಡಿಮುತ್ತುಗಳು ಕೇಳಿಸುತ್ತಿರುವುದು.
ಸೆಪ್ಟೆಂಬರ್ ತಿಂಗಳಿಂದ ಸಂಘ ಪರಿವಾರದವರು ನಿದ್ದೆ ಮಾಡಿಲ್ಲ ಎಂದು ಅನಿಸುತ್ತದೆ. ಅವರು ವರ್ಷಗಳಿಂದ ಸಿದ್ಧತೆ ಮಾಡಿಕೊಂಡು ನೂರಾರು ಕೋಟಿ ಖರ್ಚು ಮಾಡಿ ಸೇಡಂನಲ್ಲಿ ನಡೆಸಿದ ಭಾರತೀಯ ಸಂಸ್ಕೃತಿ ಉತ್ಸವ ಜನ ಬಾರದೆ ನೆಲಕಚ್ಚಿತು.
ನಂತರ ಎರಡೇ ತಿಂಗಳಲ್ಲಿ ಲಿಂಗಾಯತ ಮಠಾಧೀಶರು, ಬಸವ ಸಂಘಟನೆಗಳು ರಾಜ್ಯವಿಡೀ ಲಕ್ಷಾಂತರ ಜನ ಸೇರಿಸಿ ಬಸವ ಕಿಡಿ ಹಚ್ಚಿದರು. ನಾವು ಹಿಂದೂಗಳಲ್ಲ ಎನ್ನುವ ಮಾತು ಅಬ್ಬರದಿಂದ ಎಲ್ಲಾ ಲಿಂಗಾಯತರ ಕಿವಿ ಮೇಲೆ ಬಿದ್ದಿದೆ. ಒಂದು ದೊಡ್ಡ ಹಿಗ್ಗುತ್ತಿರುವ ಸಂಖ್ಯೆ ಅದನ್ನು ಒಪ್ಪಿಕೊಂಡಿದೆ. ಒಂದು ಭಾಗ ಗೊಂದಲದಲ್ಲಿದೆ ಅದೂ ಬದಲಾಗುತ್ತಿದೆ.
ಸಮಾಜ ವಿರೋಧಿ ಮಠ, ಮುಖಂಡರ ಮೇಲೂ ಬಸವ ಪ್ರಭಾವ ಬೀರಲಾರಂಭಿಸಿದೆ. ಇದು ಸಂಘ ಪರಿವಾರಕ್ಕೆ ತಲೆನೋವಾಗಿರುವ ಬಸವ ಸಂಸ್ಕೃತಿ ಅಭಿಯಾನದ ಒಟ್ಟು ಸಾಧನೆ.
ಅಭಿಯಾನಕ್ಕೆ ಕೌಂಟರ್ ಕೊಡಲು ಬಬಲೇಶ್ವರವನ್ನೇ ಏಕೆ ಸಂಘ ಪರಿವಾರ ಆಯ್ಕೆ ಮಾಡಿಕೊಂಡಿದೆ?
ಅಭಿಯಾನ ಕೆಲವು ಮಠಾಧೀಶರ ಮತ್ತು ಕಾಂಗ್ರೆಸ್ ರಾಜಕಾರಣಿಗಳ ಕೈವಾಡ. ಇವರ ಜೊತೆಗೆ ಕೆಲವು ಕಮ್ಯುನಿಸ್ಟರೂ ಇದ್ದಾರೆ. ಇವರನ್ನು ಟಾರ್ಗೆಟ್ ಮಾಡಿ ಸುಮ್ಮನಾಗಿಸಿದರೆ ಎಲ್ಲಾ ಲಿಂಗಾಯತರೂ ಬಾಯಿ ಮುಚ್ಚಿಕೊಳ್ಳುತ್ತಾರೆ. ಇದು ಅವರ ಗಂಭೀರವಾದ ಲೆಕ್ಕಾಚಾರ.
ಲಿಂಗಾಯತ ಧರ್ಮದ ಬಗ್ಗೆ ಮಾತನಾಡುವ ಪ್ರಮುಖ ರಾಜಕಾರಣಿ ಎಂ ಬಿ ಪಾಟೀಲ್. ಅದಕ್ಕೆ ಬಬಲೇಶ್ವರ ಟಾರ್ಗೆಟ್.
ಲಿಂಗಾಯತ ಚಳುವಳಿಗೆ ಬಹಳ ಜನರ ಕೊಡುಗೆ, ನಾಯಕತ್ವವಿದೆ. ಈಗ ಅದು ನಿಜ ಜನಾಂದೋಲನದ ರೂಪ ಪಡೆದುಕೊಳ್ಳುತ್ತಿದೆ. ಅಭಿಯಾನದಲ್ಲಿಯೂ ಬಹಳ ಜನರ, ಸಂಘಟನೆಗಳ ಪಾತ್ರವಿತ್ತು. ಅದು ಎಲ್ಲಿಯೂ ಏಕಪಾತ್ರಾಭಿನಯವಾಗಲಿಲ್ಲ.
ಲಿಂಗಾಯತರನ್ನು ಜಾಗೃತಗೊಳ್ಳುತ್ತಿರುವುದು ವಚನಗಳು. ಅವುಗಳ ಸಂದೇಶಗಳು ಇಂದು ಅವಶ್ಯವಾದ್ದರಿಂದ ಜನ ಬದಲಾಗುತ್ತಿದ್ದಾರೆ. ಮೂಢನಂಬಿಕೆಗಳು ಬೇಡ. ಅತಿಯಾದ ಧಾರ್ಮಿಕತೆ ಬೇಡ. ಸಮಾಜಕ್ಕೆ ಮಂದಿರಕ್ಕಿಂತ ಶಾಲೆಗಳು ಬೇಕು. ಯಾರನ್ನೂ ದ್ವೇಷಿಸುವುದು ಬೇಡ. ಎಲ್ಲರೂ ಸಮಾನರು. ಎಲ್ಲರ ನೋವೂ ಒಂದೇ, ಎಲ್ಲರ ಮಕ್ಕಳೂ ಒಂದೇ. ಇದೇ ವಚನಗಳಲ್ಲಿರುವ ಬಸವ ತತ್ವ. ಇದನ್ನೇ ಎಲ್ಲರೂ ಅಪ್ಪಿಕೊಳ್ಳುತ್ತಿರುವುದು.
ಆದರೆ ಈ ಸರಳ ಸತ್ಯವನ್ನು ಒಪ್ಪಿಕೊಳ್ಳಲು ಪ್ರಾಮಾಣಿಕ ಮನಸ್ಥಿತಿಯಿರಬೇಕು, ನೋಟ ಸ್ಪಷ್ಟವಾಗಿರವೇಕು. ಜನರೇ ಮೇಲೆ ಪ್ರೀತಿಯಿರಬೇಕು. ಇವೆಲ್ಲಾ ಸಂಘ ಪರಿವಾರಕ್ಕೆ ಅಪರಿಚಿತ. ಜೊತೆಗೆ ಇಂದು ಅವರಿಗೆ ನೆಲ ಕಾಣದಷ್ಟು ಹೊಟ್ಟೆ ಬಂದಿದೆ.
ಹಿಂದೂ ಸಮಾವೇಶದ ಸಮಾರೋಪ ದಾವಣಗೆರೆಯಲ್ಲಿ ಎಂದು ಸೂಲಿಬೆಲೆ ಬೆಳಗಾವಿಯಲ್ಲಿ ಘೋಷಿಸಿದ್ದು ಶಾಮನೂರು ಶಿವಶಂಕರಪ್ಪ ಅವರಿಗೆ ಬುದ್ದಿಕಲಿಸಲು.
ವೀರಶೈವ ಮಹಾಸಭೆಯ 2023ರ ದಾವಣಗೆರೆ ಸಮಾವೇಶದಲ್ಲಿ ನಾವು ಹಿಂದೂಗಳಲ್ಲ ಎಂದು ಶಾಮನೂರು ನಿರ್ಣಯ ಓದಿದ್ದರು. ನಂತರ ಈಗ ವೈರಲ್ ಆಗಿರುವ ಸಂದರ್ಶನದಲ್ಲಿ ಅದನ್ನೇ ಸ್ಪಷ್ಟವಾಗಿ ಹೇಳಿದ್ದರು.
ಲಿಂಗಾಯತ ಚಳುವಳಿಯಲ್ಲಿ ವೀರಶೈವ ಮಹಾಸಭಾ ತನ್ನದೇ ನಿಲುವು ಹೊಂದಿದ್ದರೂ ಶಾಮನೂರು ಆ ಸಂಘಟನೆಯ ಶತಮಾನದಷ್ಟು ಹಳೆಯ ನಿಲುವನ್ನು ಬದಲಿಸಿದ್ದು ಐತಿಹಾಸಿಕ ಬೆಳವಣಿಗೆ.
ದಾವಣಗೆರೆಯಲ್ಲಿ ಸಮಾರೋಪ ನಡೆಸಲು ಸೂಲಿಬೆಲೆ ನಿರ್ಣಯಿಸಿದ್ದು ಶಾಮನೂರು ಅವರನ್ನು ಟಾರ್ಗೆಟ್ ಮಾಡಲು.
ಇಂದು ಸಂಘ ಪರಿವಾರಕ್ಕೆ ಉತ್ತರ ಕೊಡಲು ಶಾಮನೂರು ಇಲ್ಲ. ಆದರೆ ದಾವಣಗೆರೆಯಲ್ಲಿ ಅವರ ಕಟ್ಟರ್ ಅಭಿಮಾನಿ ಬಸವ ಸಂಘಟನೆಗಳಿವೆ. ಅವು ಈ ಮಂಗಾಟ ನೋಡುತ್ತಿವೆ.
ಗದಗ, ಧಾರವಾಡ, ಬೆಳಗಾವಿ, ವಿಜಯಪುರ ಮುಂತಾದ ಕಡೆಗಳಲ್ಲೂ ಸೂಲಿಬೆಲೆ ಸಮಾವೇಶ ನಡೆಸಲು ಸಂಘ ಪರಿವಾರ ಸಿದ್ಧತೆ ನಡೆದಿದೆ. ಅಲ್ಲೂ ಬಸವ ಸಂಘಟನೆಗಳು ಗಮನಿಸುತ್ತಿವೆ. ಅವುಗಳ ಮೂಲಕ ಲಿಂಗಾಯತ ಸಮಾಜವೂ ಬಸವಾದಿ ಶರಣರ ಹೆಸರಿನ ದುರ್ಬಳಕೆಯನ್ನು ಗಮನಿಸುತ್ತಿದೆ.
ಬಿಜೆಪಿ ರಾಜ್ಯಾಧ್ಯಕ್ಷರು, ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಭರವಸೆಯ ಯುವ ನೇತಾರರಾದ ಶರಣರಾದ ಶ್ರೀ @BYVijayendra ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.💐💐 @BJP4Karnataka
ಕತೆ ಕಾದಂಬರಿ ಓದುವ ಗೀಳು ಹಚ್ಚಿದ್ದು ಇವರ #ಆವರಣ ಪುಸ್ತಕವೇ ನನಗೆ. ಇವರ ಒಂದೊಂದು ಪುಸ್ತಕವು ಸಂಶೋದನೆ ಆಧಾರಿತ ಗ್ರಂಥಗಳು. ಏನೋ ಗೊತ್ತಿಲ್ಲ ಆವರಣ ಬಿಟ್ಟು ಇವರ ಬೇರೆ ಪುಸ್ತಕ ನಾನು ಓದಲೇ ಇಲ್ಲ. ನಿಮ್ಮ ಕುಟುಂಬಕ್ಕೆ ಹಾಗೂ ನಿಮ್ಮ್ ಓದುಗ ಬಳಗಕ್ಕೆ ದುಃಖ ಸಹಿಸುವ ಶಕ್ತಿ ಆ ದೇವರು ಕರುಣಿಸಲಿ. #SLBairapp#ಭೈರಪ್ಪ#ಆರೆಸ್ಸೆಸ್#Hindu
@VL_Karnataka ಒಂದು ರೀತಿ ಸಂಕೇಶ್ವರ್ ಅವರು ಲಿಂಗಾಯತರೆ? ಅಂತ ಅನ್ನಿಸುತ್ತೆ ನೋಡಿ. ಅವರು ವ್ಯಾಪಾರ ದೃಷ್ಠಿಯಿಂದ ಆ ರೀತಿ ಇರಬಹುದು ಆದರೆ ಕೆಲವು ಸಲ ತುಂಬಾ ಓಲೈಕೆ ಅಂತ ಅನ್ನಿಸುತ್ತೆ.
ಮನ್ ಕಿ ಬಾತ್ ಅಲ್ಲ... ಜನ್ ಕಿ ಬಾತ್ !
ಬಬಲೇಶ್ವರ ಪಟ್ಟಣದಲ್ಲಿ ಸ್ವ ಸ್ವಸಹಾಯ ಸಂಘದ ಮಾರಾಟ ಮಳಿಗೆ ಉದ್ಘಾಟನೆಯ ವೇಳೆ ರೈತ ಮಹಿಳೆಯೊಬ್ಬರು ತಮ್ಮ ಮನದ ಮಾತುಗಳನ್ನು @MBPatil ಅವರೊಂದಿಗೆ ಹಂಚಿಕೊಂಡರು. ನೀರಾವರಿ ಯೋಜನೆಗಳ ಲಾಭ ಪಡೆದು ಹಣ್ಣು, ತರಕಾರಿಗಳನ್ನು ಬೆಳೆಯುತ್ತಿರುವುದಾಗಿ ಅಭಿಮಾನದಿಂದ ನುಡಿದರು.
.
ತಂದೆ ವಯಸ್ಸಿನ ವ್ಯಕ್ತಿಗೆ ಹೊಡೆಯೋಕೆ ಮನಸ್ಸು ಹೇಗಾದ್ರು ಬಂತ್ರಪ್ಪ..!?
ಆ ಭಾಗದ ರಾಜಕಾರಣಿಗಳು ಬದ್ಕಿದ್ದೀರಾ..?
ಧರ್ಮ ಸಂಘರ್ಷ ಸುದ್ದಿಗೆ ಕಾದು ಕುಳಿತು‚
ಭಾಷೆಗಾಗಿ ನಡೆದ ಈ ಅಮಾನವೀಯ ಘಟನೆಯನ್ನು ಮತ ಪೆಟ್ಟಿಗೆ ಉಳಿಸಿಕೊಳ್ಳಲು ತುಟಿ ಬಿಚ್ಚದೆ ಇರೋ ನಿಮಗೆ
ಭಾವಪೂರ್ಣ ಶ್ರದ್ಧಾಂಜಲಿ..!😊
#ಅಯೋಗ್ಯರು
ನಾನು ಸಾವಿಗೆ ಹೆದರಲ್ಲ ಯಾಕ್ ಅಂದ್ರ ನಾ ಇರುವತನಕ ಅದು ಬರಲ್ಲ, ಅದು ಬಂದಾಗ ನಾನೇ ಇರಲ್ಲ. ಅಂತ ತಮ್ಮ ಕೊನೆ ಉಸಿರಿನ ವರೆಗೂ ಕನ್ನಡ್ಡಮ್ಮನಿಗೆ ಅಕ್ಷರ ಸೇವೆ ಸಲ್ಲಿಸಿದ ಶಬ್ದ ಗಾರುಡಿಗ ವರಕವಿ #ಬೇಂದ್ರೆ ಪುಣ್ಯಸ್ಮರಣೆಯ ನಮನಗಳು #ದರಾಬೇಂದ್ರೆ#ಅಂಬಿಕಾತನಯದತ್ತ#ಶರಣಸಂಗಮ_ಪ್ರತಿಷ್ಠಾನ