@KEA_karnataka ಅಲ್ಲ ಸ್ವಾಮಿ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಅಪ್ಲಿಕೇಶನ್ ಬಿಟ್ಟಿದ್ದೀರಾ ಇದರ ಸಮಸ್ಯೆ ಒಂದು ವಾರ ಆಯಿತು ಇದನ್ನು ಬಗೆ ಹರಿಸಿ ಅಂದರೆ KSP ಅವರನ್ನು ಕೇಳಿ ಅಂತೀರಾ ಪ್ರಸನ್ನ ಕುಮಾರ್ ಸರ್ ಇದನ್ನು ಬಗೆ ಹರಿಸಿಲ್ಲಅಂದರೆ KEA ಮುತ್ತಿಗೆ ಹಾಕಬೇಕು ಆಗುತ್ತೆ ರಾಜ್ಯದ ವಿದ್ಯಾರ್ಥಿಗಳ ಎಚ್ಚರಿಕೆ @PriyankKharge
ಮಾನ್ಯ ಪ್ರಸನ್ನ ಸರ್
KEA ವಿ���್ಯಾರ್ಥಿ ಸ್ನೇಹಿ grivence redressal ಸಹಾಯವಾಗಲು ಜನಸ್ಪಂದನ ರೀತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಗುವ complaint ಗಳಿಗೆ
(Complaint -officer-grievance disposal)ಅನ್ನು ವೆಬ್ಸೈಟ್ ಅಲ್ಲಿ ಅಥವಾ ಆ್ಯಪ್ ಮುಖಾಂತರ ಅವಕಾಶ ಕೊಡಬೇಕು.
@KEA_karnataka ಇನ್ನಷ್ಟು ಪರೀಕ್ಷಾತ್ರಿ ಸ್ನೇಹಿ ಆಗಲಿದೆ.
ವಿದ್ಯಾರ್ಥಿಗಳ ಪರವಾಗಿ ಕೆಲವು ಅಂಶಗಳನ್ನು ಮಾನ್ಯ @CMofKarnataka ಕಚೇರಿ ಗಮನಕ್ಕೆ ತರುವುದೇನೆಂದರೆ PC Civil ಹುದ್ದೆಗಳ ನೇಮಕಾತಿಗೆ @KEA_karnataka ಅರ್ಜಿ ಆಹ್ವಾನ ನೀಡಿದ್ದರೂ, ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಗಂಭೀರ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 7–8 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ನಿರೀಕ್ಷೆಯಿರುವ ಈ ನೇಮಕಾತಿಯಲ್ಲಿ ಕಳೆದ ನಾಲ್ಕು ದಿನಗಳಿಂದ ತಂತ್ರಾಂಶದಲ್ಲಿ ಒಂದರ ನಂತರ ಒಂದು ದೋಷಗಳು ಕಾಣಿಸಿಕೊಳ್ಳುತ್ತಿವೆ. ಒಂದು ಸಮಸ್ಯೆಯನ್ನು ಸರಿಪಡಿಸಿದರೆ ಮತ್ತೊಂದು ಸಮಸ್ಯೆ ಉದ್ಭವಿಸುತ್ತಿದ್ದು, ಅಭ್ಯರ್ಥಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
⏩ @KEA_karnataka ಸಹಾಯವಾಣಿಗೆ ದೂರು ನೀಡಿದರೂ ಸಮಸ್ಯೆಗಳು ಸಮರ್ಪಕವಾಗಿ ಪರಿಹಾರವಾಗುತ್ತಿಲ್ಲ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
⏩ ಪ್ರಮುಖ ಸಮಸ್ಯೆಗಳೆಂದರೆ: Server Error, Name Mismatch, Qualification ಮಾಹಿತಿ ಕಾಣಿಸದಿರುವುದು, Preview Page ಎರಡನೇ ಹಂತದಲ್ಲಿ Stuck ಆಗುವುದು, Time Out ಸಮಸ್ಯೆ, Payment Page ದೋಷ ಹಾಗೂ Caste Certificate RD Number ನಮೂದಿಸುವಲ್ಲಿ ತೊಂದರೆಗಳು.
⏩ ಆದ್ದರಿಂದ @KEA_karnataka ನಿರ್ದೇಶಕರು ತಕ್ಷಣವೇ ಉನ್ನತ ಗುಣಮಟ್ಟದ ತಂತ್ರಾಂಶವನ್ನು ನವೀಕರಿಸಿ (Update) ಎಲ್ಲಾ ತಾಂತ್ರಿಕ ದೋಷಗಳನ್ನು ಸರಿಪಡಿಸಿ, ಅಭ್ಯರ್ಥಿಗಳಿಗೆ ಸುಗಮವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕೆಂದು ಅಭ್ಯರ್ಥಿಗಳು ಆಗ್ರಹಿಸುತ್ತಿದ್ದಾರೆ,
ನಿಮ್ಮ @KEA_karnataka ಸ್ಪಂದನೆಯ ನಿರೀಕ್ಷೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು
@DKShivakumar@INCKarnataka @Nishkama_Karma1 @Defender_007_@BJP4Karnataka@suryamukundaraj@PrashantMakanur ,@BYVijayendra
ಮಾನ್ಯ ಶ್ರೀ ಪ್ರಸನ್ನ ಎಚ್. IAS
ಕಾರ್ಯ ನಿರ್ವಾಹಕ ನಿರ್ದೇಶಕರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ.
ಮಲ್ಲೇಶ್ವರಂ
ಬೆಂಗಳೂರು.
ವಿಷಯ ; Police constable ಹುದ್ದೆಯ ಅರ್ಜಿ ಸಲ್ಲಿಸುವ ವೇಳೆ ಆಗುತ್ತಿರುವ ಹಲವಾರು ಸಮಸ್ಯೆಗಳನ್ನು ಪರಿಹರಿಸುವ ಕುರಿತು.
ಮಾನ್ಯರೆ,
KEA ಇಂದ 3395(non HK)+596(HK) ಪೋಲಿಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಿದ್ದಿರಿ.ಅರ್ಜಿ ಸಲ್ಲಿಸಲು 10/6/2026 ರಿಂದ 03/07/2026 ವರೆಗೆ ಸಮಯ ನೀಡಿರುತ್ತೀರಿ ಆದರೆ ಕಳೆದ 4,5 ದಿನಗಳಿಂದ ಹಲವಾರು ಸಮಸ್ಯೆಗಳು ವಿದ್ಯಾರ್ಥಿಗಳನ್ನು ಕಾಡುತ್ತಿವೆ.ಹಾಗಾಗಿ
ಪ್ರಸ್ತುತ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಕೆಳಕಂಡ ಮನವಿಗಳನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇವೆ.
1) ಸಂಪೂರ್ಣವಾಗಿ ಸರ್ವರ್ ಸಮಸ್ಯೆ, login ಸ���ಸ್ಯೆಯನ್ನು ಪರಿಹರಿಸಬೇಕು.
2) date of birth ಹಾಗೂ ಆಧಾರ್ card error ಸಮಸ್ಯೆ, ಪರಿಹರಿಸಬೇಕು.
3)4,5 ನೇ page open ಆಗದ ಸಮಸ್ಯೆ,ಪರಿಹರಿಸಬೇಕು.
4)caste certificate RD ಸಮಸ್ಯೆ ಪರಿಹರಿಸಬೇಕು.
5)ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಉಂಟಾಗಿರುವ ಸಾಫ್ಟ್ವೇರ್ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು. ಹಾಗೂ ಅರ್ಜಿ ಸಲ್ಲಿಕೆಗೆ ಇರುವ ಕಾಲಾವಕಾಶವನ್ನು ಕನಿಷ್ಠ 5,6 ದಿನಗಳ ಕಾಲ ಮುಂದೂಡಿ ಹೆಚ್ಚುವರಿ ಅರ್ಜಿ ಸಲ್ಲಿಕೆ ಸಮಯ ನೀಡಬೇಕು.ಇದರಿಂದ ಅಭ್ಯರ್ಥಿಗಳು ಯಾವುದೇ ತೊಂದರೆಯಿಲ್ಲದೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ.
6)ಕಳೆದ 4,5 ದಿನಗಳಿಂದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ತೊಂದರೆ ಅನುಭವಿಸುತ್ತಿದ್ದ���ರೆ.ಹಾಗಾಗಿ ಎಲ್ಲಾ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಕೆಲವು ದಿನಗಳ ಕಾಲ ಮುಂದೂಡಬೇಕು. ಅರ್ಜಿ ಪ್ರಕ್ರಿಯೆಯಲ್ಲಿನ ತಾಂತ್ರಿಕ ಸಮಸ್ಯೆಗಳು ಹಾಗೂ ಅಭ್ಯರ್ಥಿಗಳ ಸಿದ್ಧತೆಯನ್ನು ಪರಿಗಣಿಸಿ ಹೆಚ್ಚುವರಿ ಸಮಯ ನೀಡುವಂತೆ ವಿನಂತಿಸುತ್ತೇವೆ.
7) RPC ಅಭ್ಯರ್ಥಿಗಳಿಗೂ KK ಪ್ರದೇಶದ (20%) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಇದರಿಂದ ಎಲ್ಲಾ ಅಭ್ಯರ್ಥಿಗಳಿಗೆ ಸಮಾನ ಅವಕಾಶ ದೊರೆಯುತ್ತದೆ
ಹೀಗೆ ಹತ್ತು ಹಲವಾರು ಸಮಸ್ಯೆಗಳು ವಿದ್ಯಾರ್ಥಿಗಳನ್ನು ಕಾಡ��ತ್ತಿವೆ.
8) ಒಂದೇ ದಿನ Non HK ಮತ್ತು HK ವಿಭಾಗದ ಪರೀಕ್ಷೆಗಳನ್ನು ನಡೆಸುವುದರಿಂದ 2 ವಿಭಾಗಕ್ಕೆ ಅರ್ಜಿ ಸಲ್ಲಿಸಿದ ಸಾವಿರಾರು ವಿದ್ಯಾರ್ಥಿಗಳು ಅವಕಾಶ ವಂಚಿತರಾಗಲಿದ್ದಾರೆ.ಹಾಗಾಗಿ Hk ಮತ್ತು non HK ಪರೀಕ್ಷೆಗಳನ್ನು ಬೇರೆ ಬೇರೆ ದಿನಾಂಕಗಳಂದು ನಡೆಸುವಂತೆ ವಿನಂತಿ
9) ಅರ್ಜಿ ಶುಲ್ಕವನ್ನು ಕಡಿಮೆ ಮಾಡಬೇಕು. ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಶುಲ್ಕವನ್ನು ಪರಿಷ್ಕರಿಸುವಂತೆ ವಿನಂತಿಸುತ್ತೇವೆ.
ಆದ್ದರಿಂದ ಮೇಲ್ಕಂಡ ಮನವಿಗಳನ್ನು ಸಕಾರಾತ್ಮಕವಾಗಿ ಪರಿಗಣಿಸಿ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಮ್ರವಾಗಿ ಕೋರುತ್ತೇವೆ.
ಧನ್ಯವಾದಗಳೊಂದಿಗೆ,
@eshwar_khandre @HKPatilINC @NCheluvarayaS @blsanthosh @BJP4Karnataka @INCKarnataka @publictvnews @AsianetNewsSN @prajavani @KannadaPrabha @shalinirajnish @BasanagoudaBJP @Dr_Yathindra_S @RLR_BTM @ashwaveganews @BasanagoudaBJP @PriyankKharge @DKShivakumar @tv9kannada @Sowmyareddyr @KhMuniyappa @byrathi_suresh @sstangadagi @RahulGandhi @iShivanandpatil @MBPatil @dineshgrao @BZZameerAhmedK @krishnabgowda @laxmi_hebbalkar @dsudhakar2727 @DrParameshwara
@KEA_karnataka PC ಅರ್ಜಿ ಸಲ್ಲಿಸುತ್ತಿರುವಾಗ SSLC marks card ಹಾಗೂ Adhara card ಅಲ್ಲಿ ವಿದ್ಯಾರ್ಥಿಗಳ ಹೆಸರಿನ Spelling ಒಂದು change ಇದ್ರೂ Mismatch ಅಂತ ಬರುತ್ತಿದೆ ಎಂದು ಹಲವು ಅಭ್ಯರ್ಥಿಗಳು ಹೇಳುತ್ತಿದ್ದಾರೆ.
ಇದೊಂದು Logic ಇಲ್ಲದೆ ಇರೋ Software. ಮದುವೆಯಾಗಿರುವ ಹೆಣ್ಣು ಮಕ್ಕಳು ಆಧಾರ್ ಕಾರ್ಡ್ ನಲ್ಲಿ ತಮ್ಮ ಗಂಡನ ಹೆಸರನ್ನು ಸೇರಿಸಿರುತ್ತಾರೆ. ಇದೇ ಕಾರಣಕ್ಕೆ SSLC NAME ಹಾಗೂ ADHARA CARD ನಲ್ಲಿ MISMATCH ಎಂದು ಬರುತ್ತಿದೆ..
ಈ ವಿಷಯವನ್ನು @KEA_karnataka ಮುಖ್ಯಸ್ಥರ ಗಮನಕ್ಕೆ ಬಂದ���ೆ ಖಂಡಿತ ನೀವು ನಮ್ಮ ಸಮಸ್ಯೆಯನ್ನು ಬಗೆಹರಿಸುವಿರಿ ಎಂಬ ನಂಬಿಕೆ ವಿದ್ಯಾರ್ಥಿಗಳಲ್ಲಿದೆ,
ಇದು kea ಅವರು ಸಿದ್ಧಪಡಿಸಿರುವ Application software ಅವರೇ ಇದನ್ನ ಸರಿಪಡಿಸಬೇಕು.
ಅರ್ಜಿ ಸಲ್ಲಿಸುವಾಗ ಉಂಟಾಗುವ ಯಾವುದೇ ತಾಂತ್ರಿಕ ಸಮಸ್ಯೆಗಳಿಗಾಗಿ @KEA_karnataka helpline ಗೆ ಕಾಲ್ ಮಾಡಿ...
ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವಿರಿ ಎಂಬ ಆಶಾಭಾವನೆಯೊಂದಿಗೆ ವಿದ್ಯಾರ್ಥಿ ಸಮೂಹ.
@CMofKarnataka @INCKarnataka @DgpKarnataka @Nishkama_Karma1 @Defender_007_
@KEA_karnataka ಸರ್ ಅಪ್ಲಿಕೇಶನ್ ಹಾಕುವಾಗ ಆಧಾರ್ ಮತ್ತು SSLC ಮಾರ್ಕ್ಸ್ ಕಾರ್ಡ್ ಅಲ್ಲಿ ಇರುವ ಹಾಗೆ ಹೆಸರುಗಳು ಇರಬೇಕೆಂದು ಇದೆ,
ಮದುವೆ ಆದವರು ಹೆಂಡತಿಯ ಆಧಾರ್ ಕಾರ್ಡ್ ಅಲ್ಲಿ ಗಂಡನ ಹೆಸರು ಸೇರ್ಪಡೆ ಮಾಡಿರುತ್ತಾರೆ
ಆದ್ದರಿಂದ SSLC ಮತ್ತು AADHAR ಕಾರ್ಡ್ ನೇಮ್ ಮಿಸ್ ಮ್ಯಾಚ್ ಆಗ್ತಿದೆ ಇದಕ್ಕೇನಾದರೂ ಪರಿಹಾರ ಮಾಡಿಕೊಡಿ............
@KEA_karnataka Hello Sir/Madam, I am unable to complete registration due to a minor discrepancy between my Aadhaar name and SSLC marks card name. Kindly look into the issue and help resolve it. Thank you.
Respected Sir/Madam
Any update on when the KAS coaching stipend will be credited? It’s pending for 2 months. Bangalore living costs are very high, and it's putting a lot of stress on us aspirants.
Thank you
@SWDGoK
Sadhana Academy | State Level Model Test-2 | Toppers
ಅಭಿನಂದನೆಗಳು:
1. Nagaraj Karki
2. Sunil Reddy
3. Sameer Pawar
4. Sanjay Surya
5. Annesha B T Davanagere
6. Nasiruddin S MD
7. JCI Mudigere
8. Bheemanagouda N B
9. KIRAN M P
10 Sirisha S
11. Soumya Shri
ನಿಮ್ಮ ಹೆಸರುಗಳು ನೇಮಕಾತಿ ಪಟ್ಟಿಯಲ್ಲಿಯೂ ಹೀಗೆಯೇ ಇರಲಿ ಎಂದು ಹಾರೈಸುವೆವು. ಪಟ್ಟಿಯ ಟಾಪ್-ನಲ್ಲಿರುವವರಿಗೆ ಕೌನ್ ಬನೇಗಾ ಕರೋಡ್ ಪತಿ ಮಾದರಿಯಲ್ಲಿ ಒಂದು ಲೈವ್ ಕ್ವಿಜ್ ನಡೆಸಿ, ಬಹುಮಾನ ನೀಡಿದರೆ ಹೇಗೆ? ನಿಮ್ಮ ಅಭಿಪ್ರಾ��ವನ್ನು ಇದೇ ಪೋಸ್ಟ್-ಗೆ ಕಾಮೆಂಟ್ ಮೂಲಕ ತಿಳಿಸಿ.
-Team Sadhana
ಈ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ನಂತರ ಪ್ರತಿ ವರ್ಷ 1 ಲಕ್ಷ ಹುದ್ದ���ಗಳನ್ನು ಭರ್ತಿ ಮಾಡುತ್ತೇವೆ ಅಂತ ಹೇಳಿದ್ದು ಎಷ್ಟು ಸುಳ್ಳೋ, KPSC ಸುಧಾರಣೆ ಅನ್ನೋದು ಕೂಡ ಅದಕ್ಕಿಂತ ದೊಡ್ಡ ಸುಳ್ಳು ಸುಮ್ನೆ ಸಮಾಧಾನಕರ ಬಹುಮಾನ ಇದ್ದ ಹಾಗೆ ಇದು kpsc ಬಗ್ಗೆ ಇತ್ತ��ಚಿಗೆ ತುಂಬಾ ನೆಗೆಟಿವ್ ಜಾಸ್ತಿ ಆಗುತ್ತಿರುವ ಕಾರಣ ಇದೊಂದು ಗಿಮಿಕ್ ಅಷ್ಟೇ ಸಂತೋಷ ಸುಧಾರಣೆ ಆದ್ರೆ, ಒಂದು ಗಮನಿಸಬೇಕು ಹಳೆ ಅಧಿಸೂಚನೆಗಳು ಮುಗಿದ ಮೇಲೆ ಯಾಕೆ ಹೊಸ ಅಧಿಸೂಚನೆ ಮತ್ತಷ್ಟು ವಿಳಂಬ ಮಾಡೋ ಪ್ಲಾನ್ ಏನು ಇದು,ಅಧಿಸೂಚನೆ ಮಾಡಿ ಮೊದಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭ ಆಗಲಿ ಜೊತೆಗೆ ನಿಮ್ಮ ಕೆಲಸ ನೀವು ಮಾಡಿಕೊಳ್ಳಿ ಇಂತ ಆಟಗಳು ತುಂಬಾ ನೋಡಿ ಆಗಿದೆ.
ಒಂದು ದಿನದಲ್ಲಿ, ನಾಳೆ,ಅದರ ಮರುದಿನ,ಒಂದು ವಾರದಲ್ಲಿ ಅಧಿಸೂಚನೆ ಮಾಡುತ್ತೇವೆ ಈ ರೀತಿ ನಿಮ್ಮ ಜಗತ್ತಿನ ನಂಬರ್ 1 ಸುಳ್ಳು ಹೇಳಿಕೆಗಳನ್ನು ಕೇಳಿ ಈಗ ನಿಮ್ಮ ಮಾತುಗಳನ್ನು ನಂಬುವರು ಒಬ್ಬರು ಇಲ್ಲ ಇಲ್ಲಿ.