ಮುಂಜಾನೆಯ ಪರೀಕ್ಷೆ ಕೊಪ್ಪಳದಲ್ಲಿ
ಮಧ್ಯಾಹ್ನದ ಪರೀಕ್ಷೆ ಬೆಂಗಳೂರಿನಲ್ಲಿ.
ಇತ್ತೀಚಿಗೆ @KEA_karnataka ಯಡವಟ್ಟಿಗೆ ಹೆಸರುವಾಸಿಯಾಗುತ್ತಿದೆ.
ಕೊಪ್ಪಳದಿಂದ ಬೆಂಗಳೂರು 350ಕಿಮೀ ದೂರವಿದೆ.
8 ಗಂಟೆಯ ರಸ್ತೆ 4 ಗಂಟೆಯಲ್ಲಿ ತಲುಪಲು ಸಾಧ್ಯವೇ ❓
ಇದಕ್ಕೆ ಮತ್ತೇನು Solution ಕೊಡ್ತೀರಿ ❓
#KEA#PC
ವಿದ್ಯಾರ್ಥಿಗಳ ಸಂಘಟನೆಯಾದ #KSVS ಕರ್ನಾಟಕ ಲೋಕಸೇವಾ ಆಯೋಗ @secretarykpsc ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸುತ್ತದೆ.
ಸಂವಿಧಾನಬದ್ಧ ಹಾಗೂ ಜವಾಬ್ದಾರಿಯುತ ಹುದ್ದೆಯಲ್ಲಿದ್ದು, ವಾರ್ಷಿಕ ಆದಾಯ ಸುಮಾರು ₹48 ಲಕ್ಷ ಇದ್ದರೂ ಆದಾಯ ಪ್ರಮಾಣಪತ್ರದಲ್ಲಿ ಕೇವಲ ₹40 ಸಾವಿರ ಎಂದು ತಪ್ಪು ಮಾಹಿತಿ ನೀಡಿರುವ ಆರೋಪಗಳು ನಿಜವಾಗಿದ್ದರೆ, ಇದು ಬಡ ಮತ್ತು ಅರ್ಹ ವರ್ಗಗಳಿಗಾಗಿ ಸಂವಿಧಾನ ಒದಗಿಸಿರುವ ಮೀಸಲಾತಿ ವ್ಯವಸ್ಥೆಯ ದುರುಪಯೋಗಕ್ಕೆ ಮಾಡಿದ ಗಂಭೀರ ಪ್ರಯತ್ನವಾಗಿದೆ.
ಆದ್ದರಿಂದ, ಈ ಆರೋಪಗಳಿಗೆ ನೈತಿಕ ಹೊಣೆ ಹೊತ್ತು @secretarykpsc ಅಧ್ಯಕ್ಷರಾದ ಶಿವಶಂಕರಪ್ಪ ಸಾಹುಕಾರ್ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು #KSVS ಆಗ್ರಹಿಸುತ್ತದೆ. ಇಲ್ಲವಾದರೆ #KSVS ವಿದ್ಯಾರ್ಥಿ ಸಮೂಹ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಹೋರಾಟವನ್ನು ತೀವ್ರಗೊಳಿಸಲಿದ್ದೇವೆ,
ಮಾನ್ಯ ಮುಖ್ಯಮಂತ್ರಿ @DKShivakumar ಹಾಗೂ @CMofKarnataka ಕೂಡಲೇ ಈ ಪ್ರಕರಣದ ಕುರಿತು ಸೂಕ್ತ ಮತ್ತು ಪಾರದರ್ಶಕ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ಉಗ್ರ ಪ್ರತಿಭಟನೆಗೆ ಸರ್ಕಾರವೇ ಹೊಣೆಗಾರವಾಗಲಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗಳಿಗೆ @rashtrapatibhvn ಹಾಗೂ ಪ್ರಧಾನಮಂತ್ರಿಗಳಿಗೆ @PMOIndia ಅವರಿಗೆ ಸಹ ಮನವಿ ಸಲ್ಲಿಸಲಾಗುವುದು.
@INCKarnataka@BJP4Karnataka@PrashantMakanur@PriyankKharge@Sandeep98886864
#KPSC #KSVS #JusticeForStudents #Transparency #Reservation #karnatakacm
ಕೆಪಿಎಸ್ಸಿ ಅಧ್ಯಕ್ಷ ರಾಜೀನಾಮೆ ನೀಡಲಿ: ಆಯೋಗ ಒಕ್ಕೊರಲ ನಿರ್ಣಯ https://t.co/0nDWRVApYK via @prajavani
ಮಾನ್ಯ ಗೃಹ ಸಚಿವರಾದ @PriyankKharge ಅವರ ಹಾಗೂ ಪೊಲೀಸ್ ಇಲಾಖೆಯ ಮುಖ್ಯಸ್ಥರಾದ @DgpKarnataka ಅವರ ಗಮನಕ್ಕೆ
ಕರ್ನಾಟಕದ ಲಕ್ಷಾಂತರ ಪೊಲೀಸ್ ಕಾನ್ಸ್ಟೇಬಲ್ (PC) ಹುದ್ದೆಯ ಆಕಾಂಕ್ಷಿಗಳ ಪರವಾಗಿ ಈ ಮನವಿ.
ಹಿಂದೆ ಪೊಲೀಸ್ ಇಲಾಖೆಯ ಪರೀಕ್ಷಾ ಶುಲ್ಕ ₹400 ಇತ್ತು. ಆದರೆ ಈಗ @KEA_karnataka ಅದನ್ನು ₹750ಕ್ಕೆ ಹೆಚ್ಚಿಸಿದ್ದು, ಇದು ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗಿದೆ.
@INCKarnataka ಭರವಸೆಯಂತೆ ಸುಮಾರು 8000 PC ಹುದ್ದೆಗಳ ನೇಮಕಾತಿಗೆ 7 ಪ್ರತ್ಯೇಕ ಅಧಿಸೂಚನೆಗಳು ಹೊರಬಂದರೆ, ಅಭ್ಯರ್ಥಿಯೊಬ್ಬರು ಎಲ್ಲಕ್ಕೂ ಅರ್ಜಿ ಸಲ್ಲಿಸಲು 7 × ₹750 = ₹5,250 ಶುಲ್ಕ ಪಾವತಿಸಬೇಕಾಗುತ್ತದೆ. ಇದು ಸಾಮಾನ್ಯ ಕುಟುಂಬಗಳ ನಿರುದ್ಯೋಗಿ ಯುವಕರಿಗೆ ಭಾರೀ ಹೊರೆ.
ಆದ್ದರಿಂದ ಮಾನ್ಯ ಗೃಹ ಸಚಿವರು @PriyankKharge ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಪರೀಕ್ಷಾ ಶುಲ್ಕವನ್ನು ಮರುಪರಿಶೀಲಿಸಿ ಕಡಿತಗೊಳಿಸಬೇಕು.
✅ PC ಪರೀಕ್ಷಾ ಶುಲ್ಕವನ್ನು ಕಡಿಮೆ ಮಾಡಬೇಕು.
✅ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿರ್ಧಾರ ಕೈಗೊಳ್ಳಬೇಕು.
✅ ಲಕ್ಷಾಂತರ ನಿರುದ್ಯೋಗಿ ಯುವಕರ ಹಿತಾಸಕ್ತಿಯನ್ನು ಕಾಪಾಡಬೇಕು.
– ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ (KSVS)
@CMofKarnataka@INCKarnataka
@Nishkama_Karma1
@vinaygb@BYVijayendra@BJP4Karnataka@PrashantMakanur@suryamukundaraj
ರಾಜ್ಯ ಸರ್ಕಾರ ಈ ಕೂಡಲೇ 56432 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಬೇಕು ಹಾಗೂ KPSC ಯಲ್ಲಿ ನಡೆದಿರುವ KAS,PDO,CTI ಮುಂತಾದ ಪರೀಕ್ಷೆಗಳ ಅಕ್ರಮದ ಬಗ್ಗೆ CBI ತನಿಖೆಗೆ ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆಯಿಂದ ಇದೇ ತಿಂಗಳು ಮಾರ್ಚ್ 27 ಬೆಳಿಗ್ಗೆ 10:00 ಗಂಟೆಗೆ ಅಂಬೇಡ್ಕರ್ ವೃತ್ತ ( ಜಗತ್ ವೃತ್ತ ) ರಿಂದ DC ಕಚೇರಿ ತನಕ ಪಾದಯಾತ್ರೆಗೆ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ 🙏❤️
ಸಾಮಾಜಿಕ ನ್ಯಾಯದ ಹರಿಕಾರ,
ಹಿಂದುಳಿದ ವರ್ಗಗಳ ಬೈಬಲ್ ಖ್ಯಾತಿಯ ಹಾವನೂರು ಆಯೋಗದ ಅಧ್ಯಕ್ಷರಾಗಿ,
ದಕ್ಷಿಣ ಆಫ್ರಿಕಾದ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ ದಿ.ಪ್ರೊ ಲಕ್ಷ್ಮಣ ಗೂಳಪ್ಪ ಹಾವನೂರ ಅವರಿಗೆ 100ನೇ ಜನ್ಮ ದಿನಾಚರಣೆಯ ಶುಭಾಶಯಗಳು.
#ಹಾವನೂರು#ಪ್ರೊಲಕ್ಷ್ಮಣಗೂಳಪ್ಪಹಾವನೂರ
ಮಾನ್ಯ @siddaramaiah 30 ದಿನಗಳಲ್ಲಿ ನೇಮಕಾತಿ ಮಾಡಬೇಕೆಂದು ಆದೇಶ ನೀಡಿ ಇಂದಿಗೆ 26 ದಿನ ಕಳೆಯಿತು ಇಲ್ಲಿಯವರೆಗೆ ಯಾವುದೇ ನೇಮಕಾತಿ ಹೊರ ಬಂದಿಲ್ಲ
ರಾಜ್ಯದಲ್ಲಿ ತುಘಲಕ್ ಆಡಳಿತ ನಡೆಸುತ್ತಿರುವ @INCKarnataka ರಾಜ್ಯದ ಯುವಕರ ಭವಿಷ್ಯವನ್ನು ಬೀದಿಗೆ ತಂದಿದೆ
ಮತ್ತೊಂದು ಬೃಹತ್ ವಿದ್ಯಾರ್ಥಿ ಪ್ರತಿಭಟನೆ ನಿರೀಕ್ಷಿಸಿ
@BJP4Karnataka .
KPSC ಅನ್ನೋ ನಾಟಕ ಕಂಪನಿ ದಯವಿಟ್ಟು ಮುಚ್ಚಿ.... ಹಳೇ ಕಳ್ಳರನ್ನ ತಗದು ಹೊಸ ಕಳ್ಳರನ್ನ ನೇಮಕಾತಿ ಮಾಡೋದು ಏನ್ ದೊಡ್ಡ ಸಾಧನೆ ಅಲ್ಲ.... ದಯವಿಟ್ಟು @siddaramaiah sir, ನಾಟಕ ಕಂಪನಿ ಶಾಶ್ವತವಾಗಿ ಬಂದ್ ಮಾಡಿ ಪುಣ್ಯ ಕಟ್ಕೋರಿ....😡😡
Ayyo sir evarge idyella kansalla bidi
Some aspirants like "ನನ್ನದು ಪಾಸ್ ಆಗಿದೆ ಸಾಕು ಅಂತಾರೆ "🙊🙊🙊Drama chenagi madtare bidi.
Wait madi interview alli select agilla andre "Scam agide anta bande bartare " no doubts 🤷♀️🤷♀️🤷♀️
Shame on them 😡😡😡
KAS ನಲ್ಲಿ ಪ್ರತೀ ಸಾರಿ
ಬ್ರಹ್ಮಾಂಡ ಭ್ರಷ್ಟಾಚಾರ
ನಡೆಯೋದು,
ಸೂರ್ಯ-ಚಂದ್ರರಿರುವಷ್ಟೇ ಸತ್ಯ.
ಇದರ ಬಗ್ಗೆ ಮಾಧ್ಯಮಗಳೂ,
ವರದಿ ಮಾಡುತ್ತವೆ.
But No one cares....
ಸುಪ್ರೀಂ ಕೋರ್ಟಿನಲ್ಲಿ
ಛೀಮಾರಿ ಹಾಕಿಸಿಕೊಂಡ
ನಂತರವೂ,
ದುಡ್ಡುಕೊಟ್ಟವರನ್ನ,
ಸಂಪುಟದಲ್ಲಿ ಆಜ್ಞೆ ಹೊರಡಿಸಿ,
ಅಧಿಕಾರದ ಕೇಂದ್ರದೊಳಗೆ
ಮುದ್ದುಮಾಡಿ
ಹೊತ್ತುತಂದ
ಸರ್ಕಾರ ನಮ್ಮದು.
ನಮ್ಮ ವ್ಯವಸ್ಥೆ,
ಪ್ರಾಮಾಣಿಕರ
ಮತ್ತು
ಬಡವರ ಪಾಲಿನ
ನರಕ.
ರವ ರವ
ನ
ರ
ಕ...🔥
#KAS2024 #KPSC